ಭಾರತದ ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟಾಟಾ ಸಂಸ್ಥೆಯ ನ್ಯಾನೋ (Tata Nano) ಕಾರು ಒಂದು ಕಾಲದಲ್ಲಿ ಪೆಟ್ರೋಲ್ ವೇರಿಯಂಟ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿತ್ತು. ಆದರೆ ಹೆಸರಿಗೆ ತಕ್ಕಂತೆ ಯಶಸ್ಸನ್ನು ಸಂಪಾದನೆ ಮಾಡುವುದಕ್ಕೆ ಆಗಿರಲಿಲ್ಲ. ಆದರೆ ಈಗ ಟಾಟಾ ನ್ಯಾನೋ ಎಲೆಕ್ಟ್ರಿಕ್ (Tata Nano EV) ರೂಪಾಂತರದಲ್ಲಿ 2025 ನೇ ಇಸ್ವಿಯಲ್ಲಿ ಲಾಂಚ್ ಆಗೋದಕ್ಕೆ ಸಜ್ಜಾಗಿ ನಿಂತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್!
ಕಂಪನಿ ಅಧಿಕೃತವಾಗಿ ಲಾಂಚಿಂಗ್ ದಿನಾಂಕವನ್ನು ಇದುವರೆಗೂ ಹೇಳಿಕೊಂಡಿಲ್ಲ. ಆದರೆ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ಕಾರ್ ಲಾಂಚ್ ಆಗೋ ವಿಚಾರದ ಬಗ್ಗೆ ಸಾಕಷ್ಟು ಮಾಹಿತಿಗಳು ಓಡಾಡುತ್ತಿವೆ.
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ (Tata Nano EV) ನಲ್ಲಿ ಏಳು ಇಂಜಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಹಾಗೂ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಸೇರಿದಂತೆ ಸಾಕಷ್ಟು ಕನಸು ಫೀಚರ್ಸ್ ಗಳನ್ನು ಕೂಡ ನೀವು ಕಾಣಬಹುದಾಗಿದೆ. ಆರು ಸ್ಪೀಕರ್ ಸೌಂಡ್ ಸಿಸ್ಟಮ್ ಕೂಡ ಇದರಲ್ಲಿ ಅಳವಡಿಸಲಾಗಿರುತ್ತದೆ. EBD, ABS, ಅಡ್ವಾನ್ಸ್ ಫೀಚರ್ ಗಳನ್ನು ಕೂಡ ನೀವು ಈ ಕಾರ್ ನಲ್ಲಿ ಕಾಣಬಹುದಾಗಿದೆ. ಪ್ರತಿ ಗಂಟೆಗೆ 60 ರಿಂದ 70 ಕಿಲೋಮಿಟರ್ ಟಾಪ್ ಸ್ಪೀಡನ್ನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಸಾಕು ಇನ್ನೂರು ಕಿಲೋಮೀಟರ್ಗಳ ರೇಂಜ್ ನಾನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಅಷ್ಟಕ್ಕೂ ಈ ಕಾರಿನ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿರಬಹುದು ಗೊತ್ತಾ?
2025 ರಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಲು ಸಿದ್ಧವಾಗಿ ನಿಂತಿರುವಂತಹ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು (Tata Nano EV) ಐದರಿಂದ ಆರು ಲಕ್ಷ ರೂಪಾಯಿಗಳ ಬೆಲೆಯಲ್ಲಿ ನಿಮಗೆ ಎಕ್ಸ್ ಶೋರೂಮ್ ಮಾರುಕಟ್ಟೆಯಲ್ಲಿ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದ್ದು, ಕಂಪನಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಬೇಕಾಗಿದೆ.