ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಿಯೋ (Jio) ಸಂಸ್ಥೆ ನಂಬರ್ ವನ್ ಕಂಪನಿಯಾಗಿ ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರಬಹುದು ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಜಿಯೋ (Jio) ಸಂಸ್ಥೆ ಇತ್ತೀಚಿನ ದಿನಗಳಲ್ಲಿ ತನ್ನ ರೀಚಾರ್ಜ್ ಪ್ಲಾನ್ ನ ಬೆಲೆಯನ್ನು ಹೆಚ್ಚು ಮಾಡಿರುವ ಕಾರಣದಿಂದಾಗಿ ಒಂದೊಂದೇ ಗ್ರಾಹಕರು ಜಿಯೋ ಸಿಮ್ ಅನ್ನು ತೊರೆದು ಬೇರೆ ನೆಟ್ವರ್ಕ್ಗಳಿಗೆ ಮೊರೆ ಹೋಗುತ್ತಿರುವುದು ಕೂಡ ಕಂಡುಬರುತ್ತದೆ. ಇದನ್ನು ಗಮನಿಸಿರುವ ಮುಖೇಶ್ ಅಂಬಾನಿ (Mukesh Ambani) ಅವರು ಇದನ್ನು ತಡೆಗಟ್ಟುವುದಕ್ಕಾಗಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಹೌದು, ತನ್ನ ಗ್ರಾಹಕರನ್ನ ಮತ್ತೆ ಮರಳಿ ಪಡೆದುಕೊಳ್ಳುವುದಕ್ಕಾಗಿ ಜಿಯೋ ಸಂಸ್ಥೆ ಈಗ ಒಂದು ಕಡಿಮೆ ಬೆಲೆಯ ಅತ್ಯಂತ ಮೌಲ್ಯಯುತವಾಗಿರುವಂತಹ ರಿಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಲು ಹೊರಟಿದ್ದು, ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
1029 ರೂಪಾಯಿಗಳ ರಿಚಾರ್ಜ್ ಪ್ಲಾನ್!
1029 ರೂಪಾಯಿಗಳ ಹೊಸ ರೀಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿರುವಂತಹ ಜಿಯೋ (Jio) ಸಂಸ್ಥೆ ಇದರಲ್ಲಿ 84 ದಿನಗಳ ವ್ಯಾಲಿಡಿಟಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಪ್ರತಿದಿನ ಉಚಿತವಾಗಿರುವಂತಹ ವಾಯ್ಸ್ ಕಾಲಿಂಗ್ ಸೇವೆ ಹಾಗೂ ಪ್ರತಿದಿನ 100 ಉಚಿತ ಎಸ್ಎಂಎಸ್ ಗಳನ್ನು ಕೂಡ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಲೆಕ್ಕಾಚಾರದಲ್ಲಿ ನೀವು ಒಟ್ಟಾರೆ ವ್ಯಾಲಿಡಿಟಿಯ 168 ಜಿಬಿ ಇಂಟರ್ನೆಟ್ ಡೇಟಾ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ವಿಶೇಷ ಎನ್ನುವ ರೀತಿಯಲ್ಲಿ ಅಮೆಜಾನ್ ಪ್ರೈಮ್ ಲೈಟ್ ಚಂದದಾರಿಕೆ ಕೂಡ ನಿಮಗೆ ಉಚಿತವಾಗಿ ದೊರಕಲಿದೆ. ಇದನ್ನು ನೀವು ಎರಡು ಡಿವೈಸ್ ನಲ್ಲಿ ನೋಡಬಹುದಾಗಿದೆ.
ಕಳೆದುಕೊಂಡಿರುವಂತಹ 10 ಲಕ್ಷ ಗ್ರಾಹಕರನ್ನು ಮತ್ತೆ ಮರಳಿ ಪಡೆದುಕೊಳ್ಳುವುದಕ್ಕಾಗಿ ಜಿಯೋ ಸಂಸ್ಥೆ ಈ ರೀತಿಯ ದೀರ್ಘಕಾಲಿಕ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನ್ ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಇನ್ನಷ್ಟು ಸೌಲಭ್ಯಗಳ ಜೊತೆಗೆ ಗ್ರಾಹಕರಿಗೆ ನೀಡುವ ಮೂಲಕ ತನ್ನ ಗ್ರಾಹಕರನ್ನು ಮತ್ತೆ ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ ಎನ್ನಬಹುದು.