ಸರ್ಕಾರದಿಂದ ಸಿಗುವಂತಹ ಪಿಂಚಣಿ ಸೇವೆಯನ್ನು ಪಡೆದುಕೊಳ್ಳಬೇಕು ಅಂತ ಅಂದ್ರೆ ಹಿರಿಯ ನಾಗರಿಕರು ಪ್ರಮುಖವಾಗಿ ಈ ಡಾಕ್ಯುಮೆಂಟ್ಸ್ ಅನ್ನು ಒದಗಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಎನ್ನುವುದಾಗಿ ಸರ್ಕಾರದ ಮೂಲಗಳಿಂದ ತಿಳಿದುಬಂದಿದ್ದು, ಸಮಯಕ್ಕೆ ಸರಿಯಾಗಿ ಈ ಡಾಕ್ಯುಮೆಂಟ್ಸ್ ಅನ್ನು ನೀಡಿದೆ ಹೋದಲ್ಲಿ ಬರಬೇಕಾಗಿರುವಂತಹ ಪಿಂಚಣಿ (Pension) ಬಾರದೆ ಇರುವಂತಹ ಸಾಧ್ಯತೆ ಹೆಚ್ಚಾಗಿದೆ.
ಹೌದು, ಪಿಂಚಣಿ (Pension) ಯನ್ನು ಹಿರಿಯ ನಾಗರಿಕರು ನಿರಂತರವಾಗಿ ಪಡೆದುಕೊಳ್ಳಬೇಕು ಎಂದಾದಲ್ಲಿ ಲೈಫ್ ಸರ್ಟಿಫಿಕೇಟ್ ಅನ್ನು ನೀಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ತಮ್ಮ ಲೈಫ್ ಸರ್ಟಿಫಿಕೇಟ್ ಅನ್ನು ಪಿಂಚಣಿದಾರರು ಒದಗಿಸುವುದಕ್ಕೆ ನವೆಂಬರ್ 30 ಕೊನೆಯ ದಿನಾಂಕವಾಗಿದೆ ಅನ್ನೋದನ್ನ ಕೂಡ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಲೈಫ್ ಸರ್ಟಿಫಿಕೇಟ್ (Life Certificate) ಅನ್ನು ನೀವು ಮಾಡಿಸಬೇಕು ಎಂದಾದಲ್ಲಿ ಈ ಕೆಳಗೆ ಹೇಳುವಂತಹ ಕೆಲವೊಂದು ಪ್ರಮುಖ ದಾಖಲೆ ಪತ್ರಗಳನ್ನು ನೀವು ಹೊಂದಿರಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿದೆ.
- ಆಧಾರ್ ಕಾರ್ಡ್ ನಂಬರ್
- ವ್ಯಾಲಿಡ್ ಆಗಿರುವ ಮೊಬೈಲ್ ನಂಬರ್
- ನಿಮ್ಮ ಪೆನ್ಷನ್ ಅನ್ನು ನೀಡುವಂತಹ ಸಂಸ್ಥೆಯ ಜೊತೆಗೆ ಆಧಾರ್ ಕಾರ್ಡ್ ನೋಂದಾವಣೆ ಮಾಡಬೇಕಾಗಿರುತ್ತದೆ.
- ಬಯೋಮೆಟ್ರಿಕ್
- ಇಂಟರ್ನೆಟ್.
ಸರ್ಕಾರಿ ಪಿಂಚಣಿ (Pension) ಯನ್ನು ಪಡೆಯುವಂತಹ ಹಿರಿಯ ನಾಗರಿಕರು ತಮ್ಮ ಲೈಫ್ ಸರ್ಟಿಫಿಕೇಟ್ (Life Certificate) ಅನ್ನು ನವೆಂಬರ್ 30ರ ಒಳಗೆ ಸಿಪಿಸಿಸಿ ಸಂಸ್ಥೆಗೆ ಒದಗಿಸಬೇಕು ಇಲ್ಲವಾದ ಮಿನಿಮ ಪಿಂಚಣಿ ಹಣ ಸ್ಥಗಿತಗೊಳ್ಳಲಿದೆ.
ಇನ್ನು ಈ ಕೆಳಗೆ ತಿಳಿಸುವಂತಹ ವಿವಿಧ ವಿಧಾನಗಳ ಮೂಲಕ ಕೂಡ ನೀವು ನಿಮ್ಮ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬಹುದಾಗಿದ್ದು ಆ ಮಾಹಿತಿಯನ್ನು ಕೂಡ ತಿಳಿಯುವುದು ಉತ್ತಮವಾಗಿದೆ.
- ಉಮಂಗ್ ಮೊಬೈಲ್ ಅಪ್ಲಿಕೇಶನ್
- ಜೀವನ್ ಪ್ರಮಾಣ ಪೋರ್ಟಲ್
- ಡೋರ್ ಸ್ಟೆಪ್ ಬ್ಯಾಂಕಿಂಗ್ ಮೂಲಕ.
- ಪೋಸ್ಟ್ ಆಫೀಸ್ನಲ್ಲಿರುವಂತಹ ಬಯೋಮೆಟ್ರಿಕ್ ಮೂಲಕ
- ವಿಡಿಯೋ ಮೂಲಕ ಕೂಡ ಸಲ್ಲಿಸಬಹುದಾಗಿದೆ
- ನಿಮ್ಮ ಫೇಸ್ ವೆರಿಫಿಕೇಶನ್ ಮೂಲಕ ಕೂಡ ಮಾಡಬಹುದು.
- ಬ್ಯಾಂಕಿಗೆ ನೇರವಾಗಿ ಭೇಟಿ ನೀಡುವ ಮೂಲಕ ಕೂಡ ಸಲ್ಲಿಸಬಹುದಾಗಿದೆ.
ಅಕ್ಟೋಬರ್ ನಿಂದಲೇ ಲೈಫ್ ಸರ್ಟಿಫಿಕೇಟ್ (Life Certificate) ಅನ್ನು ಸಲ್ಲಿಸುವಂತಹ ಪ್ರಕ್ರಿಯೆ ಪ್ರಾರಂಭವಾಗಲಿದ್ದು ನೀವು ನವೆಂಬರ್ 30ರವರೆಗೂ ಕೂಡ ಕಾಯಬೇಕಾದ ಅಗತ್ಯ ಇಲ್ಲ. ಆದರೆ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದಕ್ಕೆ ನವೆಂಬರ್ 30 ಕೊನೆಯ ದಿನಾಂಕ ಎಂಬುದನ್ನು ಪರಿಗಣಿಸಿ ಅದಕ್ಕಿಂತ ಮುಂಚೆ ಸಬ್ಮಿಟ್ ಮಾಡುವಂತಹ ಕೆಲಸವನ್ನು ನೀವು ಮಾಡಬೇಕಾಗಿದೆ.