ನಕಲಿ ದಾಖಲೆ ಗಳನ್ನು ನೀಡಿ ಬಿಪಿಎಲ್ ಕಾರ್ಡ್ (BPL Card) ಮಾಡಿಸಿಕೊಂಡಿದ್ದರೆ ಅಂತಹ ಪಡಿತರ ಚೀಟಿಯನ್ನು ಸರಕಾರ ರದ್ದು ಮಾಡಲು ತಿರ್ಮಾನ ಮಾಡಿದೆ.ಇದೀಗ ರದ್ದು ಆದ ಕಾರ್ಡ್ ದಾರರಿಗೆ ಸರಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಹೌದು ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ನೀಡಿ ಅರ್ಹತೆ ಇಲ್ಲದವರು ಕೂಡ ಬಿಪಿಎಲ್ ಕಾರ್ಡ್ ಅನ್ನು ಮಾಡಿಸಿ ಕೊಂಡಿದ್ದರು. ಹಾಗಾಗಿ ಅನರ್ಹರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿತ್ತು.
ಇದೀಗ ಆಹಾರ ಇಲಾಖೆ ಸಚಿವರು ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದು ಬಿಪಿಎಲ್ ಕಾರ್ಡ್ (BPL Card) ರದ್ದಾದರೂ, ಅದನ್ನು ಎಪಿಎಲ್ ಕಾರ್ಡ್ (APL Card) ಗೆ ವರ್ಗಾವಣೆ ಮಾಡು ವುದಾಗಿ ಆಹಾರ ಸಚಿವ ವಿ.ಮುನಿಯಪ್ಪ (V. Muniyappa) ಅವರು ತಿಳಿಸಿದ್ದಾರೆ. ಅನರ್ಹ ಕಾರ್ಡ್ ಇದ್ದರೆ ಅದನ್ನು ರದ್ದು ಪಡಿಸುವುದಿಲ್ಲ ಬದಲಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸುದಾಗಿ ತಿಳಿಸಿದ್ದಾರೆ.
ಇಂತವರ ಕಾರ್ಡ್ ಎಪಿಎಲ್ ಆಗಿ ಬದಲಾವಣೆ!
- ಜಿಲ್ಲೆಯಲ್ಲಿ ಈಗಾಗಲೇ ಆರು ತಿಂಗಳಿಂದ ಪಡಿತರ ಪಡೆಯದೆ ಇರುವ ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಮಾಡಲಾಗುತ್ತದೆ.
- ಹಾಗೆಯೇ ನೌಕರರು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ ಅವರ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸುವ ಬಗ್ಗೆ ಕ್ರಮ ವಹಿಸಲಾಗಿದೆ.
- ಒಂದು ಕುಟುಂಬ ಬಿಪಿಎಲ್ ಕಾರ್ಡ್ ಪಡೆಯ ಬೇಕಾದರೆ ಅವರ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಇದರ ಮಿತಿ ಹೆಚ್ಚು ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡರೆ ಅಂತವರ ಕಾರ್ಡ್ ರದ್ದು ಆಗಲಿದೆ.
- ಆದಾಯ ತೆರಿಗೆ ಪಾವತಿ ಮಾಡುವವರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ಮಾಡಲಾಗುತ್ತದೆ
ಕಾರ್ಡ್ ಪರಿಶೀಲನೆಗೆ ಸೂಕ್ತ ಕ್ರಮ
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಯವರು ಖಡಕ್ ಆದೇಶ ನೀಡಿದ್ದಾರೆ. ಬಡವರಿಗಾಗಿ ನೀಡಲಾಗುತ್ತಿರುವ ಪಡಿತರ ಆಹಾರ ಪದಾರ್ಥಗಳು ಬಡವರಿಗೆ ಮಾತ್ರ ಸಿಗುವಂತೆ ಆಗಬೇಕು. ಬಿಪಿಎಲ್ ಕಾರ್ಡ್ (BPL Card) ಗಳಿಗೆ ಈಗಾಗಲೇ ಸರ್ಕಾರ ನಿಬಂಧನೆಗಳನ್ನು ಅಳವಡಿಸಿದರು ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆಯು ಇ- ಆಡಳಿತ ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದ್ದು ವಿವಿಧ ಜಿಲ್ಲೆ ಗಳಲ್ಲಿ ಅಧಿಕಾರಿಗಳು ಕಾರ್ಡ್ ಪರಿಶೀಲನೆ ಮಾಡ್ತ ಇದ್ದಾರೆ. ಈಗಾಗಲೇ 1.20 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದ 11,753 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲು ಮುಂದಾಗಿದೆ.
ಹಾಗಾಗಿ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದ್ದವರ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ಆಗಲಿದ್ದು ಕಾರ್ಡ್ ರದ್ದು ಆಗುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.