ಇಂದು ಪ್ರತಿಯೊಬ್ಬ ವ್ಯಕ್ತಿಯು ದುಡಿದ ಸ್ವಲ್ಪ ಹಣವಾದರೂ ಬ್ಯಾಂಕ್ ನಲ್ಲಿ ಸೇವಿಂಗ್ ಮಾಡಿಯೇ ಮಾಡುತ್ತಾರೆ. ಬ್ಯಾಂಕಿನ ನಿಯಮಗಳ ಪ್ರಕಾರ, ಯಾರೊಬ್ಬರ ಬ್ಯಾಂಕ್ ಖಾತೆ (Bank Account) ಯಲ್ಲೂ ನಾಮಿನಿ ಇದ್ದೇ ಇರುತ್ತಾರೆ. ಒಂದು ವೇಳೆ ಹಣ ಇಟ್ಟ ವ್ಯಕ್ತಿ ಸತ್ತರೆ ಜಮೆಯಾದ ಮೊತ್ತವನ್ನು ನಾಮಿನಿಗೆ (Nominee) ನೀಡ ಲಾಗುತ್ತದೆ. ಆದರೆ ನಾಮಿಯೂ ಇಲ್ಲದಿದ್ದರೆ ಹಣ ಯಾರಿಗೆ ಸೇರಲಿದೆ ಎನ್ನುವ ಕುತೂಹಲ ಇರಬಹುದು. ಹಾಗಾಗಿ ಈ ಪ್ರಶ್ನೆಗೆ ಉತ್ತರ ಈ ಲೇಖನ ದಲ್ಲಿ ಇರಲಿದೆ.
ನಾಮಿನಿ ಯಾರು ಆಗಬಹುದು?
ಬ್ಯಾಂಕ್ ನಲ್ಲಿ ಹಣ ಇಡುವ ವ್ಯಕ್ತಿ ನಾಮಿನಿಯನ್ನು ಸಹ ಆಯ್ಕೆ ಮಾಡಬೇಕು. ಖಾತೆದಾರನ ಮರಣದ ನಂತರ ಅವನ ಬ್ಯಾಂಕ್ನಲ್ಲಿ ಠೇವಣಿ ಮಾಡಿದ ಹಣಕ್ಕೆ ಅರ್ಹನಾದ ವ್ಯಕ್ತಿಯು ನಾಮಿನಿಯೇ ಆಗಿರುತ್ತಾನೆ. ಹಾಗಾಗಿ ಖಾತೆದಾರನು ತನ್ನ ನಿರ್ದಿಷ್ಟ ಹೆಸರನ್ನು ನೀಡಬೇಕು.ಸಾಮಾನ್ಯವಾಗಿ ಖಾತೆದಾರರು ತಮ್ಮ ಆಪ್ತರಾದ ಗಂಡ, ಹೆಂಡತಿ, ಮಕ್ಕಳು ಅಥವಾ ಪೋಷಕರ ಹೆಸರನ್ನು ನಾಮಿನಿ ಆಗಿ ಆಯ್ಕೆ ಮಾಡುತ್ತಾರೆ.
ಹಣ ಯಾರಿಗೆ ಸೇರಲಿದೆ?
ಒಂದು ವೇಳೆ ಇಟ್ಟ ಹಣಕ್ಕೆ ನಾಮಿನಿ ಇಲ್ಲದಿದ್ದರೆ ಯಾವುದೇ ವಿವಾಹಿತ ಪುರುಷನ ಕಾನೂನುಬದ್ಧ ಉತ್ತರಾಧಿಕಾರಿ ಆತನ ಹೆಂಡತಿ, ಮಕ್ಕಳು ಮತ್ತು ಪೋಷಕರು. ಅವಿವಾಹಿತ ಪುರುಷನ ಉತ್ತರಾಧಿ ಕಾರಿಗಳಾಗಿ, ಅವರ ಪೋಷಕರು ಅಥವಾ ಅಣ್ಣ, ತಮ್ಮ ಆಗಿದ್ದು ಅವರು ಈ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಬಹುದು.
ಆದರೆ ನಾಮಿನಿಯಾಗಿ ಆಯ್ಕೆ ಮಾಡದಿದ್ದರೆ, ಖಾತೆದಾರನ ಮರಣದ ನಂತರ ಇಟ್ಟ ಹಣವನ್ನು ಕ್ಲೈಮ್ ಮಾಡಲು ಹೆಚ್ಚು ಸಮಯ ತೆಗೆದು ಕೊಳ್ಳಬಹುದು. ನಾಮಿನಿಯ ಹೆಸರು ಇಲ್ಲದಿದ್ದರೆ, ಕಾನೂನು ಉತ್ತರಾಧಿಕಾರಿಯು ಬ್ಯಾಂಕ್ ನಲ್ಲಿ ಅಗತ್ಯ ಖಾತೆದಾರರ ಮರಣ ಪ್ರಮಾಣಪತ್ರ, ಕಾನೂನು ಉತ್ತರಾಧಿಕಾರಿಯ ಪೋಟೋ, KYC ಹಕ್ಕು ನಿರಾಕರಣೆ ಪತ್ರ ಅನುಬಂಧ-A, ಪ್ರವೇಶ ಪತ್ರದ ಅನುಬಂಧ-C, ವಸತಿ ಪುರಾವೆ, ಇತ್ಯಾದಿ ದಾಖಲೆ ಕಡ್ಡಾಯ ವಾಗಿ ನೀಡಬೇಕು.
ಹಾಗಾಗಿ ಖಾತೆದಾರರು ಬ್ಯಾಂಕ್ ಖಾತೆಯಲ್ಲಿ ನಾಮಿನಿ ನೀಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇಟ್ಟ ಹಣ ಇತರ ಸಂಬಂಧಿಕರು ಪಡೆಯಲು ಸಹ ಕಷ್ಟ ಸಾಧ್ಯವಿದೆ.