ಸದ್ಯದ ಮಟ್ಟಿಗೆ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ತಮ್ಮ ರಿಚಾರ್ಜ್ ಬೆಲೆಯನ್ನು ಹೆಚ್ಚಿಸಿರುವ ಕಾರಣಕ್ಕಾಗಿ ಬಹುತೇಕ ಹೆಚ್ಚಿನ ಗ್ರಾಹಕರು ಭಾರತದ ಸರ್ಕಾರದ ಅಧೀನದಲ್ಲಿರುವಂತಹ ಬಿಎಸ್ಎನ್ಎಲ್ ಸಂಸ್ಥೆಗೆ ಪೋರ್ಟ್ ಆಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 29 ಲಕ್ಷಕ್ಕೂ ಹೆಚ್ಚಿನ ಗ್ರಾಹಕರು BSNL ಸಂಸ್ಥೆಗೆ ಗ್ರಾಹಕರಾಗಿ ಮಾರ್ಪಟ್ಟಿದ್ದಾರೆ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳ್ತಿರೋದು BSNL ಸಂಸ್ಥೆ ಹೊಸದಾಗಿ ಗ್ರಾಹಕರಿಗೆ ಜಾರಿಗೆ ತಂದಿರುವಂತಹ 108 ರೂಪಾಯಿಗಳ ಕೈಗೆಟಕುವ ಬೆಲೆಯ ರಿಚಾರ್ಜ್ ಪ್ಲಾನಿನ ಬಗ್ಗೆ.
ಬಿಎಸ್ಎನ್ಎಲ್ ಪರಿಚಯಿಸಿದೆ 108 ರೂಪಾಯಿಗಳ ರಿಚಾರ್ಜ್ ಪ್ಲಾನ್!
ಒಂದು ವೇಳೆ ನೀವು BSNL ಗ್ರಾಹಕರಾಗಿದ್ದರೆ ಸಂಸ್ಥೆ ಪರಿಚಯಿಸಿರುವಂತಹ 108 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಏನೆಲ್ಲಾ ಲಾಭ ಸಿಗುತ್ತೆ ಅನ್ನೋದನ್ನ ಈ ಮೂಲಕ ನೀವು ತಿಳಿದುಕೊಳ್ಳಿ.
- ಪದೇ ಪದೇ ರಿಚಾರ್ಜ್ ಮಾಡಲು ಬಯಸದೆ ಇರುವವರಿಗೆ 108 ರೂಪಾಯಿಗಳ ರಿಚಾರ್ಜ್ ಮಾಡುವ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ.
- 28 ದಿನಗಳವರೆಗೆ ಯಾವುದೇ ನೆಟ್ವರ್ಕ್ ಗಳಿಗೂ ಕೂಡ ನೀವು ಉಚಿತವಾಗಿ ವಾಯ್ಸ್ ಕಾಲಿಂಗ್ ಮಾಡಬಹುದಾಗಿದೆ.
- 28 ದಿನಗಳ ವ್ಯಾಲಿಡಿಟಿಯವರೆಗೆ ಪ್ರತಿದಿನ 1GB ಇಂಟರ್ನೆಟ್ ಡೇಟಾ ಅನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
- 28 ದಿನಗಳ ವ್ಯಾಲಿಡಿಟಿಯವರೆಗೂ ಕೂಡ ಒಟ್ಟಾರೆ 500 ಉಚಿತ ಎಸ್ಎಂಎಸ್ ಗಳನ್ನು ನೀವು ಕಳಿಸಬಹುದಾಗಿದೆ.
BSNL ಸಂಸ್ಥೆ ಹೊಸ ಗ್ರಾಹಕರಿಗೆ 108 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸುವ ಮೂಲಕ ಹೊಸ ಸಿಮ್ ಕಾರ್ಡ್ ಅನ್ನು ಆಕ್ಟಿವ್ ಮಾಡುವುದಕ್ಕಾಗಿ ಇದನ್ನ ಜಾರಿಗೆ ತಂದಿದೆ. ವಿಶೇಷವಾಗಿ ಬೇರೆ ಸಿಮ್ ಗಳಿಂದ ಬಿಎಸ್ಎನ್ಎಲ್ ಗೆ ವರ್ಗಂತರಗೊಂಡಿರುವಂತಹ ಗ್ರಾಹಕರು ಈ ಕೈಗೆಟಕುವ ಬೆಲೆಯ ರಿಚಾರ್ಜ್ ಪ್ಲಾನ್ ಗಳಿಂದ ಇನ್ನಷ್ಟು ಉತ್ತೇಜಿತಗೊಂಡು ಹೆಚ್ಚಾಗಿ ಸಿಮ್ ನ ಸೇವೆಗಳನ್ನು ಬಳಸಿಕೊಳ್ಳಲಿ ಎನ್ನುವುದೇ ಕಂಪನಿಯ ಉದ್ದೇಶವಾಗಿದೆ.