ಇಂದು ಆಸ್ತಿಗೆ ಬಹು ಮುಖ್ಯವಾದ ಬೇಡಿಕೆ ಇದೆ. ಹಿಂದಿನ ಕಾಲದಲ್ಲಿ ಆಸ್ತಿ (Property), ಕೃಷಿ ಜಾಗಕ್ಕೆ ಅಷ್ಟು ಬೇಡಿಕೆ ಇರಲಿಲ್ಲ. ಆದರೆ ಇಂದು ನಗರ ಪ್ರದೇಶ, ಮನೆ,ಕಟ್ಟಡ ಹೆಚ್ಚಾಗಿರುವುದರಿಂದ ಬೇಡಿಕೆ ಯಂತು ಅಧಿಕ ವಾಗಿದೆ. ಹಾಗಾಗಿ ಆಸ್ತಿ ಅಂತ ಬಂದಾಗ ಸರಿಯಾದ ಹಂಚಿಕೆ ಯಾಗಬೇಕು ಎಂದು ಒಂದೇ ಮನೆಯ ಮಕ್ಕಳು ಜಗಳ ತೆಗೆದದ್ದು ಇದೆ. ಆಸ್ತಿ ಹಂಚಿಕೆ ವಿಚಾರವಾಗಿಯೇ ಇಂದುಕೆಲವು ಸಂಬಂಧ ಗಳು ಬಿರುಕು ಬಿಟ್ಟಿವೆ. ಅದರಲ್ಲೂ ಮಹಿಳೆಯರು ಇಂದು ಆಸ್ತಿ ವಿಚಾರದಲ್ಲಿ ಪಾಲು ಕೇಳುತ್ತಾರೆ. ಆದರೆ ಮಹಿಳೆಯರು ಯಾವ ಆಸ್ತಿ (Property) ಯಲ್ಲಿ ಪಾಲು ಕೇಳಬೇಕು,ಯಾವುದರಲ್ಲಿ ತಮಗೆ ಹಕ್ಕು ಇದೆ ಎಂದು ತಿಳಿದುಕೊಳ್ಳುವುದು ಸಹ ಮುಖ್ಯವಾಗಲಿದೆ.
ಹೌದು 2005 ರ ಮೊದಲು ಮಹಿಳೆಯರಿಗೆ ಆಸ್ತಿಯ ಮೇಲೆ ಸಮಾನ ಹಕ್ಕು ಇರಲಿಲ್ಲ. ಹೌದು ತಂದೆಯ ಆಸ್ತಿಯ (Father’s Property) ಮೇಲಿನ ಹಕ್ಕು ಗಂಡು ಮಕ್ಕಳಿಗೆ ಮಾತ್ರ ಅಂತ ಪರಿಗಣಿಸಲಾಗಿತ್ತು. ಆದರೆ ಈಗ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನವಾದ ಹಕ್ಕು ಇದೆ. ಹೌದು ಮಹಿಳೆಯರು ಕೂಡ ಇಂದು ಪುರುಷರಂತೆ ಹಕ್ಕುದಾರ ರಾಗಿದ್ದಾರೆ. ಹಾಗಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರು ಹಕ್ಕು ಕೇಳಬಹುದು.
ಪಿತ್ರಾರ್ಜಿತ ಆಸ್ತಿ (Inherited Property) ಯು ಪೂರ್ವಿಕ ಆಸ್ತಿ ಆಗಿದ್ದು ಪುರುಷ ವಂಶಾವಳಿಯ ಮೂರು ತಲೆಮಾರುಗಳವರೆಗೆ ಆನುವಂಶಿಯವಾಗಿ ಪಡೆಯುವ ಹಕ್ಕು ಆಗಿದೆ. ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಈ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ.
ಇನ್ನೂ ಒಟ್ಟು ಕುಟುಂಬದಿಂದ ಗಳಿಸಿದ ಆಸ್ತಿಯಲ್ಲೂ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಇರಲಿದೆ. ಇಲ್ಲೂ ಸಹ ಮಹಿಳೆಯರು ಪಾಲು ಕೇಳಬಹುದು. ಅಂದ್ರೆ, ತಂದೆ ಅಣ್ಣ, ತಮ್ಮಂದಿರು ಎಲ್ಲರೂ ಸೇರಿ ಗಳಿಸಿರುವ ಆಸ್ತಿ ಇದಾಗಿದ್ದು ಜಂಟಿ ಕುಟುಂಬದಲ್ಲಿ ಇದ್ದಾಗ ಗಳಿಸಿರುವ ಆಸ್ತಿ ಇದು ಆಗಿದೆ.
ಈ ಆಸ್ತಿಯಲ್ಲಿ ಪಾಲು ಇಲ್ಲ!
- ತಾಯಿಯ ಆಸ್ತಿಯಲ್ಲಿ ಮಗಳು ಯಾವುದೇ ಹಕ್ಕನ್ನು ಹೊಂದಿರುವುದು ಇಲ್ಲ, ಇದು ತಾಯಿಯ ಸಂಬಂಧಿಕರಿಗೆ ಸೇರಿದ ಹಕ್ಕು ಆಗಿದೆ.
- ತಾಯಿಯಿಂದ ತಂದೆಗೆ ಆಸ್ತಿ ಬಂದಿದ್ದರೆ ಮಗಳಿಗೆ ಈ ಹಕ್ಕು ಇಲ್ಲ.
- ತಂದೆ ಅಥವಾ ತಾಯಿ ಉಡುಗೊರೆಯಾಗಿ ಅಥವಾ ವಿಲ್ ಮೂಲಕ ಪಡೆದ ಆಸ್ತಿಯಲ್ಲೂ ಹಕ್ಕುಇಲ್ಲ.
- ಸ್ವಯಾರ್ಜಿತ ಆಸ್ತಿಯಲ್ಲಿ ಮಗ, ಮಗಳು ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ. ತಂದೆ ಇದನ್ನು ಯಾವ ಮಕ್ಕಳಿಗಾದರೂ ವಿಲ್ ಮಾಡಬಹುದು.
- ತಂದೆ ಮರಣ ಹೊಂದಿದ್ದು ತನ್ನ ಸ್ವಯಾರ್ಜಿತ ಆಸ್ತಿಗೆ ವಿಲ್ ಮಾಡಿಟ್ಟರೆ, ಯಾರಿಗಾದರೂ ಮಾರಿದ್ದರೆ, ದಾನವಾಗಿ ನೀಡಿದ್ದರೆ ಹಕ್ಕುಇಲ್ಲ.
- ಹಿಂದು ವಾರಸುದಾರರ ಕಾಯ್ದೆ ಅನ್ವಯ 2005ಕ್ಕೂ ಮೊದಲೇ ಆಸ್ತಿ ಹಂಚಿಕೆಯಾಗಿದ್ದು ಭೂಮಿ ಮತ್ತೆ ಕೇಳಲು ಹಕ್ಕು ಇರಲಾರದು
- ತಂದೆಗೆ ಅಥವಾ ತಾಯಿಗೆ ಸರಕಾರಿ ಸಂಸ್ಥೆ ಯಿಂದ ಆಸ್ತಿ ಸಿಕ್ಕಿದರೂ ಕೇಳಲು ಹಕ್ಕುಇಲ್ಲ