ಭಾರತದ ಅರ್ಥವ್ಯವಸ್ಥೆಯನ್ನು ಕಂಟ್ರೋಲ್ ಮಾಡುವಂತಹ ಹಾಗೂ ನಿರ್ವಹಿಸುವಂತಹ ಏಕೈಕ ಸಂಸ್ಥೆ ಎಂದರೆ ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಾಲ್ಕು ಬ್ಯಾಂಕುಗಳ ಮೇಲೆ ಭರ್ಜರಿ ಒಂಬತ್ತು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿರುವುದು ಕಂಡುಬಂದಿದೆ.
ಅದು ಕೂಡ ಕೋ- ಆಪರೇಟಿವ್ ಬ್ಯಾಂಕುಗಳು (Cooperative Banks). ಮೊದಲನೇದಾಗಿ ಪರ್ವಾನು ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್, ಎರಡನೇದಾಗಿ ಸೋನ್ ಭದ್ರ ನಗರ ಸಹಕಾರಿ ಬ್ಯಾಂಕ್, ಮೂರನೇದಾಗಿ ಜೈ ಹಿಂದ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ನಾಲ್ಕನೇದಾಗಿ ಮಾನ್ ಸಿಂಗ್ ಕೋ ಆಪರೇಟಿವ್ ಬ್ಯಾಂಕ್. ಇವುಗಳ ಮೇಲೆ ತಲಾ ಲೆಕ್ಕಾಚಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಷ್ಟು ದಂಡವನ್ನು ವಿಧಿಸಿದ ಹಾಗೂ ಯಾಕಾಗಿ ವಿಧಿಸಿದೆ ಎನ್ನುವುದನ್ನ ತಿಳಿಯೋಣ.
- ಮೊದಲನೇದಾಗಿ ಪರ್ವಾನು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಸೂಪರ್ವೈಸರಿ ಆಕ್ಷನ್ ಪ್ರೇಮ್ ವರ್ಕ್ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿರುವ ಕಾರಣದಿಂದಾಗಿ ಈ ದಂಡವನ್ನು ಬ್ಯಾಂಕಿನ ಮೇಲೆ ವಿಧಿಸಿದೆ.
- ಎರಡನೇದಾಗಿ ಸೋನ್ ಭದ್ರ ನಗರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2.50 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಬ್ಯಾಂಕಿಂಗ್ ರೆಗುಲೇಷನ್ ಆಕ್ಟ್ 1949ರ ಸೆಕ್ಷನ್ 26 ಎ ಹಾಗೂ 56 ಅನ್ನು ಉಲ್ಲಂಘಿಸಿರುವ ಕಾರಣದಿಂದಾಗಿ ಈ ದಂಡವನ್ನು ವಿಧಿಸಲಾಗಿದೆ.
- ಜೈ ಹಿಂದ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 50,000 ರೂಪಾಯಿಗಳ ದಂಡವನ್ನು ವಿಧಿಸಿದೆ. ಡೆಪಾಸಿಟ್ ಅಕೌಂಟ್ಗಳ ನಿರ್ವಹಣೆಯ ವಿಚಾರದಲ್ಲಿ ನಡೆದಿರುವಂತಹ ನಿಯಮ ಉಲ್ಲಂಘನೆಯ ಕಾರಣದಿಂದಾಗಿ ಈ ದಂಡವನ್ನು ವಿಧಿಸಲಾಗಿದೆ.
- ಮಾನ್ ಸಿಂಗ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದ್ದು ಇದರ ಹಿಂದಿರುವಂತಹ ಕಾರಣ ಆದಾಯದ ಗುರುತಿಸುವಿಕೆ, ಆಸ್ತಿಯ ಕ್ಲಾರಿಫಿಕೇಶನ್ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ನಡೆದಿರುವಂತಹ ತಪ್ಪು ಪ್ರಕ್ರಿಯೆಗಳ ಮೇಲಿನ ದಂಡವಾಗಿದೆ.