ಇತ್ತೀಚಿಗೆ ಎಲ್ಲವೂ ಡಿಜಿಟಲ್ ಆಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಹೋಗದೆ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಮಾಡಬಹುದು. ನಮ್ಮ ಅಕೌಂಟ್ ನಲ್ಲಿರುವ ಹಣ ವಿಥ್ ಡ್ರಾ (Money Withdraw) ಮಾಡಲು ಕೂಡ ಬ್ಯಾಂಕ್ ಗೆ ಹೋಗದೆ ATM ಬಳಕೆ ಮಾಡಿಕೊಳ್ಳಬಹುದು. ಆದರೆ ಕೆಲವೊಮ್ಮೆ ಎಟಿಎಂನಲ್ಲಿ ಕೂಡ ಹಣ ಕೈಗೆ ಸಿಗುವುದಕ್ಕಿಂತ ಮುಂಚೆನೇ ಖಾತೆಯಿಂದ ಹಣ ಕಡಿತಗೊಂಡು ATM ನಿಂದ ಹಣ ಬಾರದೆ ಇರುವಂತಹ ಸಾಧ್ಯತೆಇರುರುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ಏನು ಮಾಡಬೇಕು ಎಂಬುದನ್ನು ತೋಚದೆ, ಚಿಂತಿತರಾಗುತ್ತಾರೆ. ಅಂಥವರು ಇವತ್ತಿನ ಈ ಲೇಖನದ ಅಪ್ಡೇಟ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಯಾವುದೇ ರೀತಿ ಚಿಂತೆ ಪಡಬೇಕಾದ ಅಗತ್ಯ ಇರುವುದಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವಂತಹ ಹೊಸ ಗೈಡ್ ಲೈನ್ ಗಳ ಪ್ರಕಾರ ಈ ರೀತಿ ATM ನಲ್ಲಿ ಹಣ ಡ್ರಾ ಆಗದೆ ಖಾತೆಯಿಂದ ಡೆಬಿಟ್ ಆದರೆ ಬ್ಯಾಂಕುಗಳು ಆ ಹಣವನ್ನು ಆ ವ್ಯಕ್ತಿಯ ಖಾತೆಗೆ ಮರುಪಾವತಿ ಮಾಡುವುದಕ್ಕೆ ಐದು ದಿನಗಳ ಸಮಯವನ್ನು ನೀಡಲಾಗುತ್ತದೆ. ಒಂದು ವೇಳೆ ಬ್ಯಾಂಕುಗಳು ಆ ಹಣವನ್ನು ಐದು ದಿನದ ಒಳಗಾಗಿ ಖಾತೆಗೆ ಕ್ರೆಡಿಟ್ ಮಾಡದೆ ಹೋದಲ್ಲಿ ಹಣವನ್ನು ವಾಪಸ್ ಹಾಕುವವರೆಗೂ ಕೂಡ ಬ್ಯಾಂಕು ಗ್ರಾಹಕರಿಗೆ ಪ್ರತಿದಿನ 100 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಎಟಿಎಂ ಬಳಕೆ ಮಾಡುವಾಗ ಈ ವಿಚಾರಗಳ ಬಗ್ಗೆ ಗಮನವಹಿಸಿ!
- ATM ಬಳಸುವಾಗ ಕೈಗೆ ಹಣ ಸಿಗದೆ ನಿಮ್ಮ ಖಾತೆಯಿಂದ ಹಣ ಕಡಿತಗೊಂಡರೆ ಐದು ದಿನಗಳವರೆಗೆ ಕಾದು ಒಂದು ವೇಳೆ ಬಾರದು ಹೋದಲ್ಲಿ ನಂತರ ನೀವು ಈ ಬಗ್ಗೆ ನಿಮ್ಮ ಬ್ಯಾಂಕಿನಲ್ಲಿ ದೂರನ್ನು ನೀಡಬೇಕಾಗಿರುತ್ತದೆ.
- ಬ್ಯಾಂಕಿಗೆ ದೂರನ್ನು ನೀಡಿದ ನಂತರ 30 ದಿನಗಳ ವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಹೋದಲ್ಲಿ ನೀವು ದೂರು ನಿವಾರಣ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು.
- 1800 11 2211 ಹಾಗೂ 1800 425 3800 ಟೋಲ್ ಫ್ರೀ ನಂಬರ್ ಗಳಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳುವಂತಹ ಅವಕಾಶ ಕೂಡ ಇದೆ.
- https://crcf.sbi.co.in/ccf/ ಈ ಅಧಿಕೃತ ವೆಬ್ ಸೈಟ್ ಗೆ ಕೂಡ ಹೋಗಿ ನೀವು ನಿಮ್ಮ ದೂರುಗಳನ್ನು ಎಟಿಎಂ ಗೆ ಸಂಬಂಧಪಟ್ಟಂತಹ ಕ್ಯಾಟಗರಿಯಲ್ಲಿ ಸಲ್ಲಿಸಬಹುದಾಗಿದೆ.