ಡಿಜಿಟಲ್ ಪೇಮೆಂಟ್ ಜಗತ್ತಿನಲ್ಲಿ PhonePe ಮತ್ತೊಂದು ಪ್ರಮುಖ ಹೆಜ್ಜೆ ಹಾಕಿದ್ದು, UPI Circle ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈಗ ಬ್ಯಾಂಕ್ ಖಾತೆ ಇಲ್ಲದ ಬಳಕೆದಾರರೂ UPI ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ. ಉದಾಹರಣೆಗೆ ಪಾಲಕರ ಅಕೌಂಟ್ ನಿಂದ ಕಾಲೇಜು ವಿದ್ಯಾರ್ಥಿಗಳು ಪೇಮೆಂಟ್ ಮಾಡಬಹುದು ಅಥವಾ ತಮಗೆ ಅನುಭವ ಇಲ್ಲದ ವಯಸ್ಕರು ತಮ್ಮ ಮಕ್ಕಳ ಅಥವಾ ಮಮ್ಮಕ್ಕಳ ಸಹಾಯದಿಂದ ಪೇಮೆಂಟ್ ಮಾಡಿಸಬಹುದು .
ಈ ಹೊಸ ಸೌಲಭ್ಯ ಹೇಗೆ ಕೆಲಸ ಮಾಡುತ್ತದೆ?
PhonePe UPI Circle ಅಂದರೆ, ಒಬ್ಬ ಮುಖ್ಯ ಬಳಕೆದಾರ (Primary User) ತಮ್ಮ ಆಪ್ತರಿಗೆ (Secondary Users) ತಮ್ಮ ಬ್ಯಾಂಕ್ ಖಾತೆಯ ಮೂಲಕ ಹಣ ಪಾವತಿಸಲು ಅನುಮತಿ ನೀಡಬಹುದು. ಇದರಿಂದ ಮನೆಮಂದಿ, ಹಿರಿಯ ನಾಗರಿಕರು, ಅಥವಾ ಬ್ಯಾಂಕ್ ಖಾತೆ ಇಲ್ಲದವರು ಸಹ PhonePe ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಮುಖ್ಯ ವೈಶಿಷ್ಟ್ಯಗಳು:
- 5 ಸದಸ್ಯರವರೆಗೆ ಆಮಂತ್ರಣ: ಒಬ್ಬ ಪ್ರಾಥಮಿಕ ಬಳಕೆದಾರ 5 ಮಂದಿ ಆಪ್ತರನ್ನು ಸೆರ್ಕಲ್ಗೆ ಸೇರಿಸಬಹುದು.
- ಖಾತೆ ಇಲ್ಲದವರಿಗೂ UPI ID: ಸೆಕೆಂಡರಿ ಯೂಸರ್ಗಳು ತಮ್ಮದೇ ಆದ UPI ID ಪಡೆಯಬಹುದು, ಅದು ಬ್ಯಾಂಕ್ ಖಾತೆ ಇಲ್ಲದೆ ಸಾಧ್ಯ.
- ಹಣ ಪಾವತಿಗೆ ಅನುಮತಿ ಬೇಕು: ಆಪ್ತರು ಪಾವತಿ ಕೇಳಿದಾಗ, ಪ್ರಾಥಮಿಕ ಬಳಕೆದಾರ ಒಪ್ಪಿಗೆ ನೀಡಿದ ಮೇಲೆ ಮಾತ್ರ ಹಣ ಹೋಗುತ್ತದೆ.
- ದೈನಂದಿನ ಮಿತಿಗಳು: ಗ್ರಾಹಕರು ದೈನಂದಿನ ಮಿತಿಗಳನ್ನು ಇಡಬಹುದು, ಉದಾಹರಣೆಗೆ ಪ್ರತಿದಿನ ₹15000 ಹಾಗು ಪ್ರತಿ ಟ್ರಾನ್ಸಾಕ್ಷನ್ ಗೆ ₹5000, ಪ್ರಾಥಮಿಕ ಬಳಕೆದಾರರು ವಹಿವಾಟಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಉಳಿಸಿಕೊಳ್ಳಬಹು
- ಪೂರ್ಣ ನಿಯಂತ್ರಣ: ಪ್ರಾಥಮಿಕ ಬಳಕೆದಾರರು ಎಲ್ಲ ವ್ಯವಹಾರಗಳ ಮೇಲ್ವಿಚಾರಣೆ ಮಾಡಬಹುದು, ಆಕ್ಸೆಸ್ ತೆಗೆದುಹಾಕುವ ಅವಕಾಶವೂ ಇದೆ.
UPI Circle ಬಳಸುವುದು ಹೇಗೆ?
- PhonePe ಆಪ್ ಓಪನ್ ಮಾಡಿ.
- UPI Circle ವಿಭಾಗಕ್ಕೆ ಹೋಗಿ.
- ‘Invite Secondary Contact’ ಆಯ್ಕೆಮಾಡಿ QR ಅಥವಾ UPI ID ಮೂಲಕ ಆಪ್ತರನ್ನು ಸೇರಿಸಿ.
- ಅವರು ಆಮಂತ್ರಣ ಸ್ವೀಕರಿಸಿದ ಮೇಲೆ, ಅವರು ನಿಮ್ಮ ಖಾತೆ ಮೂಲಕ ಪಾವತಿಯನ್ನು ಆರಂಭಿಸಬಹುದು.
ಈ ಹೊಸ ಪ್ರಯೋಗದ ಉದ್ದೇಶ ಏನು?
ಈ ಫೀಚರ್ನ ಉದ್ದೇಶ, ಡಿಜಿಟಲ್ ಪಾವತಿಗಳ ಪ್ರಾಪ್ಯತೆಯನ್ನು ಇನ್ನಷ್ಟು ಜನರಿಗೆ ತಲುಪಿಸುವುದು. ಬ್ಯಾಂಕ್ ಖಾತೆ ಇಲ್ಲದವರು, ಟೆಕ್ನಾಲಜಿಯ ಅರಿವಿಲ್ಲದವರು ಸಹ ಇನ್ನು ಮುಂದೆ ಸುರಕ್ಷಿತವಾಗಿ ಹಣ ಪಾವತಿಸಬಹುದು. ಇದು ‘ಡಿಜಿಟಲ್ ಇಂಡಿಯಾ’ ಸಂಕಲ್ಪಕ್ಕೆ PhonePe ನೀಡುತ್ತಿರುವ ಬೆಂಬಲವಾಗಿದೆ.