ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಆಂಡ್ರಾಯ್ಡ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಮೊಬೈಲ್ ಸಂಸ್ಥೆಗಳಲ್ಲಿ OnePlus ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ OnePlus 11R ಸ್ಮಾರ್ಟ್ ಫೋನ್ ಗೆ ದೊಡ್ಡ ಮಟ್ಟದ ಗ್ರಾಹಕ ಬಳಗವಿದೆ. ಈ ಫೋನನ್ನು ಈಗ ನೀವು ರೂ.30,000ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವಂತಹ ಅವಕಾಶವನ್ನು ಅಮೆಜಾನ್ ನಲ್ಲಿ ನೀಡಲಾಗಿದ್ದು ಸಂಪೂರ್ಣ ಮಾಹಿತಿ ತಿಳಿದುಕೊಂಡು ನೀವು ಕೂಡ ಇವತ್ತೇ ಕಡಿಮೆ ಬೆಲೆಯಲ್ಲಿ OnePlus 11R ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಅಮೆಜಾನ್ನಲ್ಲಿ ಈಗ ನಡೆಯುತ್ತಿರುವಂತಹ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ OnePlus 11R ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. 39,999 ರೂಪಾಯಿಗಳಿಗೆ ಇದನ್ನ ಲಾಂಚ್ ಮಾಡಲಾಗಿತ್ತು ಆದರೆ ಈ ಸೇಲ್ ನಲ್ಲಿ ರಿಯಾಯಿತಿಯ ನಂತರ 28,499 ರೂಪಾಯಿಗಳಿಗೆ ಲಿಸ್ಟ್ ಮಾಡಲಾಗಿದೆ. ಹೆಚ್ಡಿಎಫ್ಸಿ ಅಥವಾ ಬ್ಯಾಂಕ್ ಆಫ್ ಬರೋಡದ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ 1,500 ರೂಪಾಯಿಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ 20 ಸಾವಿರ ರೂಪಾಯಿಗಳವರೆಗೆ ಈ ಫೋನಿನ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ನಡಿತಾ ಇದೆ.
OnePlus 11R ಸ್ಮಾರ್ಟ್ ಫೋನ್ನಲ್ಲಿ 6.7 ಇಂಚಿನ ಡಿಸ್ಪ್ಲೇ ಇದೆ. 120hz ರಿಪ್ರೆಶ್ ರೇಟ್ ಇದನ್ನ ಇನ್ನಷ್ಟು ಸ್ಮೂತ್ ಆಗಿ ರನ್ ಆಗೋ ಹಾಗೆ ಮಾಡುತ್ತೆ. 5000mAh ಬ್ಯಾಟರಿ ಸಾಮರ್ಥ್ಯವನ್ನು ಕೂಡ ಇದರಲ್ಲಿ ಕಾಣಬಹುದಾಗಿದೆ. 100 ವ್ಯಾಟ್ಗಳ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದಿಂದ ಬೇಗನೆ ಚಾರ್ಜ್ ಕೂಡ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಫುಲ್ ಚಾರ್ಜ್ ಮಾಡಬಹುದು ಅನ್ನೋದನ್ನ ಸಂಸ್ಥೆ ಹೇಳಿಕೊಂಡಿದೆ. ಹೀಗಾಗಿ ಈ ಸೇಲ್ ನಲ್ಲಿ OnePlus 11R ಸ್ಮಾರ್ಟ್ ಫೋನ್ ನಿಮಗೆ ಅತ್ಯಂತ ಕಡಿಮೆ ಬೆಲೆಗೆ ಸಿಗ್ತಾ ಇರೋದ್ರಿಂದ ಇಂದೇ ಖರೀದಿಸುವುದು ಉತ್ತಮ.