ಆಸ್ತಿಯ ಮಾಲೀಕತ್ವ ನಿಮ್ಮದೇ ಎಂದು ತಿಳಿಯ ಪಡಿಸಲು ಕೆಲ ವೊಂದು ದಾಖಲೆಗಳು ಬಹಳ ಮುಖ್ಯ ವಾಗಿ ಬೇಕಾಗಲಿದೆ. ಆಸ್ತಿಯ ಮೂಲ ದಾಖಲೆಗಳು (Property Documents) ನಿಮ್ಮ ಬಳಿ ಇದ್ದರೆ ನಿಮ್ಮದೇ ಸ್ವಂತ ಆಸ್ತಿ ಎಂದು ಸಾಬೀತು ಆಗಲಿದೆ. ಇಂದು ಕೆಲ ವೊಂದು ಭೂ ಮಾಲೀಕರು ಆಸ್ತಿ (Property) ತಮ್ಮದೇ ಎಂದು ಹೇಳಿ ಕೊನೆಗೆ ಕೆಲವೊಂದು ದಾಖಲೆ ಇಲ್ಲದೆ ಆಸ್ತಿ ಕಳೆದುಕೊಂಡದ್ದು ಇದೆ. ಹಾಗಾಗಿ ಯಾವೆಲ್ಲ ಮುಖ್ಯ ದಾಖಲೆಗಳು ಬೇಕು ಎನ್ನುವ ಮಾಹಿತಿ ಇಲ್ಲಿದೆ.
- ನಿಮ್ಮ ಹತ್ತಿರ ಭೂ ಆಸ್ತಿ ಇದ್ದರೆ ಅದರ ಸರ್ವೇ ನಕ್ಷೆ ಕಡ್ಡಾಯವಾಗಿ ಬೇಕಾಗುತ್ತದೆ. ಇದರಲ್ಲಿ ಮಾಲೀಕನ ಮಾಹಿತಿ ವಿವರ ಇರಲಿದ್ದು ಆಸ್ತಿ ಯಾರ ಹೆಸರಿನಲ್ಲಿದೆ ಮತ್ತು ಭೂಮಿಯ ವಿಸ್ತೀರ್ಣ ಎಷ್ಟು ಎನ್ನು ವ ಮಾಹಿತಿಗಳು ಕೂಡ ಕಾಣ ಬಹುದು.ಇದರಲ್ಲಿ ಭೂಮಿ ಮತ್ತು ಮಾಲೀಕ ಎರಡರ ಬಗ್ಗೆಯೂ ಮಾಹಿತಿ ಇರಲಿದೆ.ಹಾಗಾಗಿ ಪಹಣಿ ಭೂಮಿಗೆ ಸಂಬಂಧಿಸಿದ ಬಹಳ ಮುಖ್ಯವಾದ ದಾಖಲೆ ಯಾಗಿದೆ.
- ಅಷ್ಟೇ ಅಲ್ಲದೆ ತೆರಿಗೆ ಪಾವತಿ ರಸೀದಿಗಳು ಕೂಡ ಅಗತ್ಯವಾಗಿ ಬೇಕಿದೆ.ನೀವು ನಿಮ್ಮ ಆಸ್ತಿಗೆ ತೆರಿಗೆ ಪಾವತಿ ಮಾಡಿರುವುದನ್ನು ದೃಢೀಕರಿಸಬೇಕು. ಹಾಗಾಗಿ ಬೇಕಾ ದ ರಸೀದಿಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ ಸಮಯಕ್ಕೆ ಸರಿ ಯಾಗಿ ತೆರಿಗೆ ಪಾವತಿ ಸಹ ಮಾಡಬೇಕು.
- ಖಾತೆ ಪ್ರಮಾಣ ಪತ್ರ ಕೂಡ ಹೊಂದಿರಬೇಕು.ಅಂದರೆ ಕಟ್ಟಡ ವನ್ನು ನಿರ್ಮಿಸಲು ಬೇಕಾದ ಪರ ವಾನಗಿಯನ್ನು ಪಡೆಯಲು ಖಾತಾ ಪ್ರಮಾಣ ಪತ್ರವು ಬೇಕಾಗುತ್ತದೆ.
- ರಿಜಿಸ್ಟ್ರಿ ಮಾಡಿರಬೇಕು.ಅಂದರೆ ಆಸ್ತಿ ನಿಮ್ಮ ಹೆಸರಿನಲ್ಲಿದೆ ಎಂದು ಆಸ್ತಿಯ ಮಾರಾಟ ಮತ್ತು ಮಾಲೀ ಕತ್ವವನ್ನು ಈ ಪತ್ರವು ತೋರಿಸುತ್ತದೆ. ಈ ದಾಖಲೆಯನ್ನು ಸಬ್ ರಿಜಿ ಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಬೇಕು.
- ಜಮಾಬಂದಿ ಇದು ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಯಿಂದ ನೀಡುವ ದಾಖಲೆ ಯಾಗಿದ್ದು ಇದು ಭೂಮಿಯ ಮಾಲೀಕ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಹಕ್ಕುಗಳನ್ನು ಒಳಗೊಂಡಿದೆ.
- ಪವರ್ ಆಫ್ ಅಟಾರ್ನಿ ಇದು ಕೂಡ ಮುಖ್ಯವಾಗಿ ಬೇಕು.ಇದು ಇನ್ನೊಂದು ಪ್ರಮುಖ ದಾಖಲೆ ಆಗಿದ್ದು ಜಮೀನು ಮಾರಾಟ ಮಾಡುವವರು ಮಾಲೀಕರಲ್ಲದಿದ್ದ ಸಂದರ್ಭದಲ್ಲಿ ಅವರು ಪವರ್ ಆಫ್ ಅಟಾರ್ನಿ ಹೊಂದಿರಬೇಕು.
- ಎನ್ಒಸಿ ,ಇದಿ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಆಗಿದ್ದು ಭೂಮಿ ಅಥವಾ ಮನೆ ಖರೀದಿಸುವಾಗ ಪರಿಶೀಲನೆ ಮಾಡಬೇಕಾದ ದಾಖಲೆ, ನೀವು ಖರೀದಿಸುತ್ತಿರುವ ಆಸ್ತಿ ವಿವಾದವಲ್ಲ ಎಂದು ತಿಳಿಯಪಡಿಸುವ ದಾಖಲೆ
- ಇಸಿ ಎಂದರೆ ಎನ್ಕ್ಯುಂಬೆರೆನ್ಸ್ ಸರ್ಟಿಫಿಕೇಟ್. ಋುಣಭಾರ ದೃಢೀಕರಣ ಪ್ರಮಾಣಪತ್ರದಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಇರಲಿದ್ದು ನೀವು ಖರೀದಿಸುತ್ತಿರುವ ಭೂಮಿಯು ಯಾವುದೇ ಹಣ ಸಂಬಂಧಿತ ಅಥವಾ ಕಾನೂನುಬದ್ಧ ಬಂಧನಗಳಿಂದ ಮುಕ್ತವಾಗಿದೆ, ಯಾವುದೇ ಕೇಸ್ ಇಲ್ಲ ಎಂದು ತಿಳಿಯಪಡಿಸುತ್ತದೆ.