ಭಾರತದ ಇನ್ಫ್ರಾಸ್ಟ್ರಕ್ಚರ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಹಾಗೂ ಅಭಿವೃದ್ಧಿಯ ಕಡೆಗೆ ಬೆಳೆಯುತ್ತಿರುವ ವಿಚಾರದಲ್ಲಿ ಕಾರಣೀಕರ್ತರಾಗಿ ಕೇಂದ್ರ ಸಚಿವರಾಗಿರುವಂತಹ ನಿತಿನ್ ಗಡ್ಕರಿ ಅವರು ಕೂಡ ಕಾಣಿಸಿಕೊಳ್ತಾರೆ. ನಿತಿನ್ ಗಡ್ಕರಿ (Nitin Gadkari) ರವರು ಕೇಂದ್ರ ಸಚಿವರಾಗಿ ತಮ್ಮ ಅಧಿಕಾರವನ್ನು ಸ್ವೀಕರಿಸಿದ ನಂತರ ಭಾರತದಲ್ಲಿ ಹೆದ್ದಾರಿಯ ನಿರ್ಮಾಣ ಸಾಕಷ್ಟು ವೇಗವಾಗಿ ಹಾಗೂ ಕ್ವಾಲಿಟಿ ಯಿಂದ ನಿರ್ಮಾಣವಾಗುತ್ತಿದೆ. ಸಾಕಷ್ಟು ವಾಗ್ದಾನಗಳನ್ನು ಕೂಡ ತನ್ನ ಜನರಿಗಾಗಿ ಮಾಡಿರುವಂತಹ ಈ ಸಚಿವ ಅದನ್ನ ನೆರವೇರಿಸುವಲ್ಲಿ ಕೂಡ ಕಾರ್ಯಪ್ರವೃತ್ತರಾಗಿದ್ದಾರೆ.
ನಿತಿನ್ ಗಡ್ಕರಿ (Nitin Gadkari) ರವರು ನೀಡಿರುವಂತಹ ಹೇಳಿಕೆಯ ಪ್ರಕಾರ 2025ರ ಮೊದಲು ಎಥೆನಾಲ್ ಮಿಶ್ರಿತ ಇಂಧನವನ್ನು ವಾಹನಗಳಲ್ಲಿ 20 ಪ್ರತಿಶತ ಬಳಸಿಕೊಳ್ಳುವಂತಹ ಗುರಿಯನ್ನು ಸರ್ಕಾರ ಹೊಂದಿದೆ ಎಂಬುದನ್ನು ತಿಳಿಸಿದ್ದಾರೆ. ಇನ್ನು ಈಗ ಎಥಿನಾಲ್ ಮಿಶ್ರಿತ ಡೀಸೆಲ್ (Ethanol Blended Diesel) ಅನ್ನು ಕೂಡ ಬಳಸುವ ವಿಚಾರದ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.
ಸರ್ಕಾರ ಸಂಪೂರ್ಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ (Petrol-Diesel) ಬಳಸುವಂತಹ ವಾಹನಗಳನ್ನು ಅಥವಾ ಇಂಜಿನ್ ಗಳನ್ನ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಇಂಜಿನ್ ನಿರ್ಮಾಣ ಮಾಡುವಂತಹ ಸಂಸ್ಥೆಗಳಿಗೂ ಕೂಡ ಎಥನಾಲ್ ಮಿಶ್ರಿತ ಇಂಧನವನ್ನು ಬಳಸುವಂತಹ ಫ್ಲೆಕ್ಸ್ ಫ್ಯುಯಲ್ ಇಂಜಿನ್ (Flex Fuel Engine) ಅನ್ನು ನಿರ್ಮಾಣ ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಂತಹ ರಾಜ್ಯದಲ್ಲಿ ಎಥೆನಾಲ್ ಪಂಪ್ ಗಳನ್ನ ಸ್ಥಾಪಿಸುವಂತಹ ವಿಚಾರದ ಬಗ್ಗೆ ಕೂಡ ಯೋಚನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಎಥೆನಾಲ್ ಜೊತೆಗೆ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ (Petrol-Diesel) ಗೆ ಪರ್ಯಾಯ ಎನ್ನುವ ರೀತಿಯಲ್ಲಿ ಸಿಎಂಜಿ ವಾಹನಗಳನ್ನು ಕೂಡ ಪ್ರಮೋಟ್ ಮಾಡುತ್ತಿದೆ. ಅದರಲ್ಲೂ ಉತ್ತಮ ಸ್ವಚ್ಛ ಪರಿಸರಕ್ಕಾಗಿ ಬಯೋ ಸಿಎನ್ ಜಿ ಅತ್ಯಂತ ಉತ್ತಮವಾದ ಆಯ್ಕೆ ಆಗಿದೆ ಎನ್ನುವುದನ್ನು ಕೂಡ ಇಲ್ಲಿ ಪ್ರತಿಪಾದಿಸಿದೆ. ಈ ಮೂಲಕ ಎಥಿನಾಲ್ ಮಿಶ್ರಿತ ಡೀಸೆಲ್ ಇಂಜಿನ್ ಮುಂದಿನ ದಿನಗಳಲ್ಲಿ ಸಂಪೂರ್ಣ ಡೀಸೆಲ್ ಅವಲಂಬಿತವಾಗಿರುವಂತಹ ಇಂಜಿನ್ ಗಳಿಗೆ ಪರ್ಯಾಯ ರೂಪದಲ್ಲಿ ಕಾಣಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು.