ನಮ್ಮ ಭಾರತ ದೇಶದಲ್ಲಿ ಸಂಪತ್ತಿನ ಪಾಲುಗಾರಿಕೆಯ ಅಥವಾ ಉತ್ತರದಾಯಿತ್ವದ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಾಗ ಕಂಡುಬರುತ್ತದೆ. ಈ ವಿಚಾರದ ಬಗ್ಗೆ ಸರ್ಕಾರ ಯಾವ ರೀತಿಯ ಅಧಿಕೃತ ನಿಯಮಗಳನ್ನು ಜಾರಿಗೆ ತಂದಿವೆ ಎನ್ನುವುದರ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿರುತ್ತದೆ. ಹೀಗಿದ್ದಲ್ಲಿ ಮಾತ್ರ ಆಸ್ತಿ (Inherited Property) ಯ ಪಾಲುಗಾರಿಕೆಯ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಮೂಡಿಬರುವುದಿಲ್ಲ.
- ತಂದೆ ತಾಯಿ ಸ್ವಂತವಾಗಿ ದುಡಿದು ಸಂಪಾದಿಸಿರುವಂತಹ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕೂಡ ನೀಡುವಂತಹ ಅಧಿಕಾರವನ್ನು ಖುದ್ದಾಗಿ ಹೊಂದಿರುತ್ತಾರೆ
- ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಮಗ ಹಾಗೂ ಮಗಳಿಗೆ ಸಮಾನವಾದ ಹಕ್ಕಿರುತ್ತದೆ.
- ಮದುವೆಯಾದ ನಂತರ ಕೂಡ ಮಗಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕು ಮುಂದುವರೆಯುತ್ತದೆ
- ಕೂಡು ಕುಟುಂಬದಲ್ಲಿ ಆಸ್ತಿ (Property) ಯ ಮೇಲೆ ಹಕ್ಕು ಪ್ರತಿಯೊಬ್ಬರಿಗೂ ಕೂಡ ಸಮಾನವಾಗಿರುತ್ತದೆ.
- ತಂದೆ ತಾಯಿ ವಿಲ್ ನಲ್ಲಿ ಬರೆದಿಟ್ಟಿರುವಂತಹ ರೀತಿಯಲ್ಲೇ ಆಸ್ತಿಯನ್ನು ಪಾಲು ಮಾಡಿ ಬೇಕಾಗಿರುತ್ತದೆ.
ಇನ್ನು ಇಳಿ ವಯಸ್ಸಿನಲ್ಲಿ ತಂದೆ ತಾಯಿಯ ಕಾಳಜಿ ವಹಿಸದೆ ಇರುವಂತಹ ಮಕ್ಕಳಿಗೆ ಆಸ್ತಿಯನ್ನು ನೀಡದೇ ಇರುವಂತಹ ಅಧಿಕಾರವನ್ನು ಕೂಡ ತಂದೆ ತಾಯಿಯರಿಗೆ ಕೋರ್ಟು ನೀಡಿರುತ್ತದೆ. ಹೀಗಾಗಿ ತಂದೆ ತಾಯಿಯ ಜವಾಬ್ದಾರಿಯನ್ನು ವೃದ್ಧಾಪ್ಯದಲ್ಲಿ ಮಕ್ಕಳು ತೆಗೆದುಕೊಳ್ಳುವುದು ಕೂಡ ಆಸ್ತಿಯ ಹಂಚಿಕೆಯ ವಿಚಾರದಲ್ಲಿ ಪ್ರಮುಖವಾಗಿರುತ್ತದೆ.
ಈ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆಸ್ತಿಯಲ್ಲಿ ಭಾಗ ಸಿಗೋದಿಲ್ಲ!
- ಒಂದು ವೇಳೆ ತಮ್ಮ ಸ್ವಂತವಾಗಿ ಅರ್ಜಿತವಾಗಿರುವಂತಹ ಆಸ್ತಿಯನ್ನು ತಂದೆ ತಾಯಿ ತಮ್ಮ ಇಚ್ಛೆಯಿಂದ ಬೇರೆ ಸಂಸ್ಥೆಗೆ ಅಥವಾ ವ್ಯಕ್ತಿಗೆ ದಾನ ಮಾಡಿದಾಗ.
- ಪೋಷಕರು ತಮ್ಮ ಜೀವಿತಾವಧಿಯಲ್ಲೇ ಆಸ್ತಿಯ ಪಾಲು ಮಾಡಿದಾಗ
- ಒಂದು ವೇಳೆ ತಂದೆ ತಾಯಿ ಆಸ್ತಿಯ ಪಾಲುದಾರಿಕೆಯ ವಿಲ್ ನಲ್ಲಿ ಮಕ್ಕಳಿಗೆ ಆಸ್ತಿಯನ್ನು ನೀಡಬಾರದು ಎಂಬುದಾಗಿ ಬರೆದಿಟ್ಟಿದ್ರೆ.
- ಆಸ್ತಿಯ ಕಾರಣಕ್ಕಾಗಿ ಒಂದು ವೇಳೆ ತಂದೆ ತಾಯಿಯನ್ನು ಮಕ್ಕಳು ಮುಗಿಸಿದರೆ ಅಥವಾ ಅದರ ಪ್ಲಾನಿಂಗ್ ಮಾಡಿದ್ರೆ ಆ ಸಂದರ್ಭದಲ್ಲಿ ಕೂಡ ಈ ಕಾನೂನು ನಿಯಮಗಳು ಅನ್ವಯವಾಗುತ್ತವೆ.
- ಮನೆಯವರ ಇಚ್ಚೆಗೆ ವಿರುದ್ಧವಾಗಿ ಧರ್ಮ ಪರಿವರ್ತನೆ ಮಾಡಿದ ಸಂದರ್ಭದಲ್ಲಿ ಕೂಡ ಆಸ್ತಿಯನ್ನು ನೀಡದೆ ಇರುವ ಸಾಧ್ಯತೆ ಇರುತ್ತದೆ.