ಇಂದು ಕಾರ್ಮಿಕರ ಅಭಿವೃದ್ದಿ ಮಾಡಲು ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.ಅದರಲ್ಲಿ ಕಾರ್ಮಿಕ ಇಲಾಖೆಯಿಂದ ನೀಡುವ ಕಾರ್ಮಿಕ ಕಾರ್ಡ್ (Labour Card) ಕೂಡ ಒಂದಾಗಿದ್ದು ಹಲವು ರೀತಿಯ ಆರ್ಥಿಕ ಸೌಲಭ್ಯ ಗಳನ್ನು ಈ ಯೋಜನೆ ಮೂಲಕ ಪಡೆಯಬಹುದಾಗಿದೆ. ಆದರೆ ಇಂದು ಬಡವರ್ಗದ ಜನಕ್ಕಿಂತ ಆರ್ಥಿಕವಾಗಿ ಸಬಲರಾಗಿದ್ದವರೆ ಈ ಕಾರ್ಡ್ ಮಾಡಿಸಿಕೊಂಡಿದ್ದು ಹೆಚ್ಚು.
ಅಸಂಘಟಿತ ಕಾರ್ಮಿಕರಲ್ಲದವರೂ ಕೂಡ ಕಾರ್ಮಿಕ ಕಾರ್ಡ್ (Labour Card) ಅನ್ನು ಮಾಡಿಸಿಕೊಂಡಿದ್ದಾರೆ. ಹಾಗಾಗಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ವನ್ನು ಅಕ್ರಮ ವಾಗಿ ಪಡೆಯುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಸರಕಾರ ಸೂಕ್ತವಾದ ಕ್ರಮ ವಹಿಸಲಿದೆ. ಕಟ್ಟಡ ಕಾರ್ಮಿಕರ ಇಲಾಖೆಯು ಕಾರ್ಮಿಕರ ಕಾರ್ಡ್ ಕುರಿತಂತೆ ವಿಶೇಷ ಕಾರ್ಯಾಚರಣೆ ಮಾಡಿದ್ದು ಇದೀಗ ಸುಳ್ಳು ಮಾಹಿತಿ ನೀಡಿ ಕಾರ್ಡ್ ಮಾಡಿಸಿ ಕೊಂಡಂತಹ ಸುಮಾರು 2.48 ಲಕ್ಷ ಕಾರ್ಮಿಕರ ಕಾರ್ಡುಗಳನ್ನು ಸರಕಾರ ರದ್ದು ಮಾಡಿದೆ.
ಈ ಜಿಲ್ಲೆಯ ಕಾರ್ಡ್ ರದ್ದು!
ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 1,69,180 ಕಾರ್ಡು, ಬೀದರ್ ಜಿಲ್ಲೆಯಲ್ಲಿ 25,000, ಶಿವಮೊಗ್ಗದಲ್ಲಿ 6,900, ಉತ್ತರ ಕನ್ನಡ ಜಿಲ್ಲೆಯಲ್ಲಿ 4155 ಸೇರಿದಂತೆ 2,48,987 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಕ್ರಮ ವಹಿಸ್ತಾ ಇದ್ದು ಬೋಗಸ್ ಕಾರ್ಡ್ ಪತ್ತೆ ಹೆಚ್ಚುವ ಸಲುವಾಗಿ ಜಿಲ್ಲೆಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡ್ತಾ ಇದ್ದಾರೆ. ಈಗಾಗಲೇ ನೋಂದಣಿ ಹಾಗೂ ರಿನೀವಲ್ ಸಮಯದಲ್ಲಿ ನಿಗಾ ವಹಿಸಲಾಗಿದ್ದು ಈ ಸಮಯದಲ್ಲಿ ಕಾರ್ಮಿಕ ಕಾರ್ಡ್ಗೆ ಸೂಕ್ತ ದಾಖಲೆಗಳನ್ನು ಅರ್ಜಿ ಸಲ್ಲಿಸಿದ ಕಾರ್ಮಿಕರಿಂದ ಪಡೆಯಲಾಗುತ್ತದೆ..
ಇಂತವರ ಕಾರ್ಡ್ ರದ್ದು
- ಕಾರ್ಮಿಕರಲ್ಲದೆ ಸೌಲಭ್ಯ ಪಡೆಯುತ್ತಿದ್ದರೆ ಈ ಕಾರ್ಡ್ ರದ್ದು ಆಗಲಿದೆ.
- ಘೋಷಿತ ಆದಾಯಕ್ಕಿಂತ ಹೆಚ್ಚು ಆದಾಯವನ್ನು ಹೊಂದಿರುವ ನೈಜ ದಾಖಲೆಗಳು ಸಿಕ್ಕರೆ ಕಾರ್ಡ್ ರದ್ದು.
- ಮನೆ ತೆರಿಗೆಯನ್ನು ಪಾವತಿಸಿರುವ ದಾಖಲೆಗಳು ಇದ್ದರೆ,ಎಪಿಎಲ್ ಕಾರ್ಡ್ ಇದ್ದರೆ ಕಾರ್ಮಿಕ ಕಾರ್ಡ್ ರದ್ದು ಮಾಡಲಾಗುವುದು.