ಇಂದು ಆಸ್ತಿ (Property) ಅಂತಸ್ತುಗಳಿಗೆ ಬಹಳಷ್ಟು ಬೇಡಿಕೆ ಇರಲಿದೆ.ಅದರಲ್ಲೂ ನಗರ ಪ್ರದೇಶದಲ್ಲಿ ಭೂ ಆಸ್ತಿಗೆ ಬೇಡಿಕೆ ಹೆಚ್ಚಿದ್ದು ಬೆಲೆ ಅಂತು ದುಪ್ಪಟ್ಟು ಆಗಿದೆ. ಇಂದು ಆಸ್ತಿ ಅಂದಾಗ ಪ್ರತಿಯೊಂದು ಮಕ್ಕಳಿಗೂ ಸಮಾನ ವಾದ ಹಕ್ಕು ಇರಲಿದೆ. ಹಿಂದೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗ್ತಾ ಇರಲಿಲ್ಲ.ಆದರೆ ಇಂದು ಪ್ರತಿಯೊಂದು ಮಕ್ಕಳಿಗೂ ಸರಿ ಸಮಾನವಾದ ಆಸ್ತಿ ಹಂಚಿಕೆ ಯಾಗಬೇಕು ಎನ್ನುವ ನಿಯಮ ಇರಲಿದೆ.
ಹಿಂದೂ ಉತ್ತರಾಧಿಕಾರ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯ ಆಸ್ತಿಯಲ್ಲಿ ಹೆಂಡತಿ, ಮಕ್ಕಳು ಮತ್ತು ತಾಯಿ ವರ್ಗ 1ರ ಮುಖ್ಯ ವಾರಸುದಾರರಾಗುತ್ತಾರೆ. ಆ ವ್ಯಕ್ತಿಯು ಮರಣಹೊಂದಿದರೆ, ಅವನ ಆಸ್ತಿಯನ್ನು ಹೆಂಡತಿ, ಮಕ್ಕಳು, ತಾಯಿಗೆ ಸಮಾನವಾಗಿ ನೀಡಲಾಗುತ್ತದೆ.
ಹೊಸ ನಿಯಮ!
ಇನ್ನು ಆಸ್ತಿ (Property) ವಿಚಾರವಾಗಿ ಕಾನೂನಿನಲ್ಲಿ ನಿಯಮ ಬದಲಾವಣೆಗಳನ್ನು ಮಾಡಲಾಗಿದೆ. ಪೂರ್ವಜರ ಆಸ್ತಿ (Inherited Property) ಯಲ್ಲಿ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಸಮಾನವಾದ ಹಕ್ಕುಗಳನ್ನು ನೀಡಲಾಗಿದೆ. ಇದೀಗ 2024 ರ ಹೊಸ ನಿಯಮಗಳ ಮೂಲಕ ಪೋಷಕರ ಸ್ವ-ಸ್ವಾಧೀನದ ಆಸ್ತಿಯ ಮೇಲಿನ ಮಕ್ಕಳ ಹಕ್ಕು ರದ್ದು ಮಾಡಲಾಗಿದ್ದು ಆಸ್ತಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೋಷಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಈ ನಿಯಮ ಇದೆ!
- ಪಾಲಕರು ತಾವು ಸಂಪಾದನೆ ಮಾಡಿದಂತಹ ಆಸ್ತಿಯನ್ನು ತಮ್ಮ ಮಕ್ಕಳಲ್ಲಿ ಯಾರಿಗಾದರೂ ಆಸ್ತಿಯನ್ನು ನೀಡಬಹುದು.
- ಪೋಷಕರು ತಮ್ಮ ಆಸ್ತಿಯನ್ನು ಯಾರಿಗೂ ಕೂಡ ನೀಡ ಬಹುದು. ಅಂದರೆ ಇನ್ನೊಬ್ಬ ವ್ಯಕ್ತಿ, ಇತರ ಸಂಸ್ಥೆ ಗೆ ದಾನ ಮಾಡಲು ಸಹ ಅವಕಾಶ ಇರಲಿದೆ. ಒಂದು ವೇಳೆ ತಂದೆ ತಾಯಿ ಉಯಿಲು ಮಾಡದೆ ಸತ್ತರೆ ಮಾತ್ರ ಅವರ ಮಕ್ಕಳಿಗೆ ಆಸ್ತಿಯು ಸಿಗಲಿದೆ. ಒಂದು ವೇಳೆ ಪೋಷ ಕರು ಈ ಮೊದಲೇ ಆಸ್ತಿ ಯಾರಿಗೆ ಎಂದು ಬರೆದಿಟ್ಟರೆ ಈ ಆಸ್ತಿ ಮಕ್ಕಳಿಗೆ ಸಿಗುವುದಿಲ್ಲ.
- ಈಗ ಹೆಣ್ಣು ಮಕ್ಕಳಿಗೂ ಸಮಾನವಾದ ಹಕ್ಕು ಇರಲಿದ್ದು ಮದುವೆಯ ನಂತರವೂ ಮಗಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಆಸ್ತಿ ನೀಡದೆ ಇದ್ದರೆ ಮಗಳು ಆ ನಿರ್ಧಾರವನ್ನು ಪ್ರಶ್ನಿಸಬಹುದು.