EPFO ಉದ್ಯೋಗಿಗಳಿಗೆ ಯಾವುದೇ ರೀತಿಯ ಕಷ್ಟ ಆಗಬಾರದು ಎನ್ನುವ ಕಾರಣಕ್ಕಾಗಿ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. EPFO ನಲ್ಲಿ ಉದ್ಯೋಗಿಗಳು ಪ್ರತಿ ತಿಂಗಳು ಫಿಕ್ಸ್ ಆಗಿರುವಂತಹ ಹಣವನ್ನು ಡೆಪಾಸಿಟ್ ಮಾಡ್ತಾರೆ. ಈ ರೀತಿಯ ಹಣ ಕೇವಲ ನಿವೃತ್ತಿಯ ನಂತರ ಮಾತ್ರ ಮೆಚುರ್ ಆಗಿರುತ್ತದೆ. ಆದರೆ ಕೆಲವೊಂದು ಅಗತ್ಯ ಇರುವಂತಹ ಸಂದರ್ಭದಲ್ಲಿ ನಿವೃತ್ತಿಗಿಂತ ಮುಂಚೆ ಕೂಡ ಡಿಪಾಸಿಟ್ ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ. EPFO ಇತ್ತೀಚಿಗಷ್ಟೇ ಹಣವನ್ನು ಡ್ರಾ ಮಾಡಿಕೊಳ್ಳುವ ನಿಯಮದ ಬಗ್ಗೆ ಹೊಸ ಅಪ್ಡೇಟ್ ನೀಡಿದೆ.
EPFO ಹಣ ಡ್ರಾ ಮಾಡಿಕೊಳ್ಳುವ ಹೊಸ ನಿಯಮ!
ಸಮಯಕ್ಕಿಂತ ಮುಂಚೆ ಉದ್ಯೋಗಿಗಳು EPF ನಿಂದ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಕೆಲವು ನಿರ್ದಿಷ್ಟ ಉದ್ದೇಶಗಳನ್ನು ಮಾತ್ರ ಕಾರಣವನ್ನಾಗಿ ನೀಡಬಹುದಾಗಿದ್ದು ಅವುಗಳು, ಎಜುಕೇಶನ್, ಮನೆ ಖರೀದಿ ಅಥವಾ ಮನೆ ನಿರ್ಮಾಣ, ಇಲ್ಲವೇ ಮದುವೆ ಕಾರಣಗಳಿಗಾಗಿ ಮಾತ್ರ ಸಮಯಕ್ಕಿಂತ ಮುಂಚೆ ಪಡೆದುಕೊಳ್ಳಬಹುದಾಗಿದೆ.
ಇಂದಿನ ಸಮಯದಲ್ಲಿ ಸಾಕಷ್ಟು ಕಂಪನಿಗಳು ತಮ್ಮ ಕೆಲಸಗಾರರನ್ನು ತೆಗೆದುಹಾಕುವ ಅಂತಹ ಕೆಲಸವನ್ನು ಕೂಡ ಮಾಡುತ್ತಿದ್ದು ಈ ಸಂದರ್ಭದಲ್ಲಿ ನಿವೃತ್ತಿಗಿಂತ ಮುಂಚೆ ಈ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಒಂದು ವೇಳೆ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದ್ರೆ EPF ನಿಂದ ಒಂದು ತಿಂಗಳ ನಂತರ 75% ಹಣವನ್ನ ಹಾಗೂ ಎರಡು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ. ಹೊಸ ಕೆಲಸವನ್ನು ಪಡೆದ ನಂತರ ಆ 25% ಹೊಸ ಖಾತೆಗೆ ಮತ್ತೆ ನೀವು ಡೆಪಾಸಿಟ್ ಮಾಡಬಹುದಾಗಿದೆ.
EPF ನಲ್ಲಿ ಒಂದು ವೇಳೆ ಉದ್ಯೋಗಿ ಕಳೆದ ಐದು ವರ್ಷಗಳಿಂದಲೂ ಕೂಡ ಹಣವನ್ನು ಡೆಪಾಸಿಟ್ ಮಾಡಿಕೊಂಡು ಬಂದಿದ್ರೆ ಟ್ಯಾಕ್ಸ್ ನಲ್ಲಿ ರಿಯಾಯಿತಿಯನ್ನು ನೀಡಲಾಗುತ್ತದೆ. ಮೆಚುರಿಟಿಗಿಂತ ಮುಂಚೆ ಹಣವನ್ನು ಪಡೆದುಕೊಂಡರೆ ಟಿಡಿಎಸ್ ಶುಲ್ಕ ಕಡಿತಗೊಳ್ಳುತ್ತದೆ. ಟಿಡಿಎಸ್ ಶುಲ್ಕ 50,000 ಗಿಂತ ಕಡಿಮೆ ಹಣದ ಡ್ರಾ ಮಾಡಿಕೊಂಡ್ರೆ ಆಗ ಕಡಿತಗೊಳ್ಳುವುದಿಲ್ಲ. ಪ್ಯಾನ್ ಕಾರ್ಡ್ ಸಬ್ಮಿಟ್ ಮಾಡಿದ್ರೆ 10% ಟಿಡಿಎಸ್ ಕಡಿತಗೊಳ್ಳುತ್ತದೆ ಹಾಗೂ ಮಾಡಿಲ್ಲ ಅಂದ್ರೆ 30% ಕಡಿತಗೊಳ್ಳುತ್ತದೆ.