ಮಾರುತಿ ಸುಜುಕಿ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಅತ್ಯಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡುವಂತಹ ಸಂಸ್ಥೆಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುವಂತಹ ಸಂಸ್ಥೆಯಾಗಿದೆ. ಅದರಲ್ಲೂ ವಿಶೇಷವಾಗಿ Maruti Fronx ಕಾರು ಹಾಟ್ ಕೇಕ್ ರೀತಿಯಲ್ಲಿ ಇತ್ತೀಚಿನ ಸಮಯದಲ್ಲಿ ಮಾರಾಟವಾಗುತ್ತಿದೆ. ಇದರ ಮಾರಾಟ 2023ರ ಏಪ್ರಿಲ್ ನಲ್ಲಿ ಪ್ರಾರಂಭವಾಗಿತ್ತು. 10 ತಿಂಗಳಲ್ಲಿ ಇದು ಅತ್ಯಂತ ವೇಗವಾಗಿ ಒಂದು ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಿದಂತಹ ಕಾರ್ ಎನ್ನುವಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇವಲ 7.3 ತಿಂಗಳುಗಳಲ್ಲಿ ಮುಂದಿನ ಒಂದು ಲಕ್ಷ ಯೂನಿಟ್ ಕಾರುಗಳನ್ನ ಇದು ಮಾರಾಟ ಮಾಡಿದೆ. ಇದು 8.38 ಲಕ್ಷರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಒಟ್ಟಾರೆಯಾಗಿ 17.3 ತಿಂಗಳುಗಳ ಒಳಗೆ ಎರಡು ಲಕ್ಷ ಯೂನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಈ ದಾಖಲೆಯನ್ನು Maruti Fronx ಕಾರು ನಿರ್ಮಿಸಿದೆ.
Maruti Fronx ಕಾರಿನ ವಿಶೇಷತೆಗಳು!
ಈ Maruti Fronx ಕಾರಿನಲ್ಲಿ ಎರಡು ಇಂಜಿನ್ ಆಪ್ಷನ್ ಇದ್ದು ಮೊದಲನೇದಾಗಿ, 1.0 ಲೀಟರ್ ಟರ್ಬೋ ಬೂಸ್ಟರ್ ಜೆಟ್ ಎಂಜಿನ್ ಹಾಗೂ ಎರಡನೆಯದಾಗಿ 1.2 ಲೀಟರ್ ಕೆ ಸೀರೀಸ್ ಡ್ಯುಯಲ್ ಜೆಟ್ ಇಂಜಿನ್. ಆರು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡಲಾಗಿದೆ. 22.89 ಕಿಲೋ ಮೀಟರ್ ಪ್ರತಿ ಲೀಟರ್ನ ಮೈಲೇಜ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಕ್ರೂಸ್ ಕಂಟ್ರೋಲ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್, ವಯರ್ಲೆಸ್ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಜೊತೆಗೆ ಇಂಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಆರು ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಲಿದ್ದೀರಿ. 9 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಎರಡು ಕೂಡ ಸಪೋರ್ಟ್ ಆಗಲಿದೆ. ಸುರಕ್ಷತಾ ಕ್ರಮದ ರೂಪದಲ್ಲಿ ಡುಯಲ್ ಏರ್ ಬ್ಯಾಗ್ ಜೊತೆಗೆ ಸೈಡ್ ಎಂಡ್ ಕರ್ಟನ್ ಏರ್ ಬ್ಯಾಗ್ ಕೂಡ ಅಳವಡಿಸಲಾಗಿದೆ. ಕೆಲವೊಂದು ನಿರ್ದಿಷ್ಟ ವೇರಿಯಂಟ್ ಗಳಲ್ಲಿ 360 ಡಿಗ್ರಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಉತ್ತಮ ಬಜೆಟ್ ನಲ್ಲಿ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ಹೊಂದಿರುವಂತಹ ಈ ಕಾರು ಸಾಕಷ್ಟು ಜನರ ಫೇವರೆಟ್ ಆಗಿದೆ.