ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಅದರಲ್ಲಿ ವಿಶೇಷವಾಗಿ ಕಾರುಗಳ ವಿಭಾಗದಲ್ಲಿ ಎಸ್ ಯು ವಿ ಕಾರುಗಳ (SUV Cars) ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, 2024ರ ಮೊದಲ ಆರು ತಿಂಗಳುಗಳ ಲೆಕ್ಕಾಚಾರದಲ್ಲಿ ಒಟ್ಟಾರೆ ಕಾರುಗಳ ಮಾರಾಟದಲ್ಲಿ ಎಸ್ಯುವಿ 52% ಪಾಲುದಾರಿಕೆಯನ್ನು ಹೊಂದಿದೆ. ಇನ್ನು ಭಾರತದ ಅತ್ಯಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡುವಂತಹ ಮಾರುತಿ ಸುಜುಕಿ (Maruti Suzuki) ಯಿಂದ ಹಿಡಿದು ಕೆಲವು ಪ್ರಮುಖ ಕಂಪನಿಗಳು ತಮ್ಮ ಕೆಲವೊಂದು ನಿರ್ದಿಷ್ಟ ಕಾರುಗಳ ಮೇಲೆ ಎರಡು ಲಕ್ಷಕ್ಕೂ ಅಧಿಕ ಡಿಸ್ಕೌಂಟ್ ನೀಡ್ತಾ ಇದ್ದು, ಒಂದು ವೇಳೆ ನೀವು ಕೂಡ ಅಕ್ಟೋಬರ್ ತಿಂಗಳಲ್ಲಿ ಕಾರನ್ನು ಖರೀದಿಸಲು ಹೊರಟಿದ್ರೆ ಇವುಗಳು ನಿಮಗೆ ಬಜೆಟ್ ವಿಚಾರದಲ್ಲಿ ಡಿಸ್ಕೌಂಟ್ ಮೂಲಕ ಸಹಾಯ ಮಾಡಲಿವೆ.
ಮಾರುತಿ ಸುಜುಕಿ ಜಿಮ್ನಿ!
ಆಫ್ ರೋಡಿಂಗ್ ಬಳಕೆಗಾಗಿ ಖಂಡಿತವಾಗಿ ಇದೊಂದು ಬೆಸ್ಟ್ ಆಯ್ಕೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮಾರುತಿ ಸುಜುಕಿ ಈ ಕಾರಿನ ಅಲ್ಫಾ ವೇರಿಯಂಟ್ ಮೇಲೆ 2.50 ಲಕ್ಷ, ಜೆಟಾ ವೇರಿಯಂಟ್ ಮೇಲೆ 1.95 ಲಕ್ಷ ರೂಪಾಯಿಗಳ ಡಿಸ್ಕೌಂಟ್ ನೀಡ್ತಾ ಇದೆ. ಈ ಕಾರಿನ ಬೆಲೆ 12.74 ರಿಂದ 15.05 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಆಗಿರುತ್ತದೆ.
ಸ್ಕೋಡಾ ಕುಶಾಕ್!
ಅಕ್ಟೋಬರ್ ತಿಂಗಳಲ್ಲಿ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ಆಗಿರುವಂತಹ ಸ್ಕೋಡ ತನ್ನ ಎಸ್ ಯು ವಿ ಕಾರ್ ಆಗಿರುವ ಕುಶಾಕ್ (Skoda Kushaq) ಮೇಲೆ 2.50 ಲಕ್ಷ ರೂಪಾಯಿಗಳ ಡಿಸ್ಕೌಂಟ್ ನೀಡ್ತಿದೆ. ಹುಂಡೈ ಕ್ರೆಟಾ, ಸೆಲ್ಟೋಸ್ ಕಾರುಗಳು ಕಾಂಪಿಟೇಶನ್ ರೀತಿಯಲ್ಲಿ ಕುಶಾಕ್ ಕಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
ಮಹಿಂದ್ರಾ ಥಾರ್ 3 ಡೋರ್ !
ಭಾರತದ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಈ ಕಾರಣನ ಮೇಲೆ ಮಹಿಂದ್ರ ಸಂಸ್ಥೆ 1.25 ಲಕ್ಷ ರೂಪಾಯಿಗಳ ಡಿಸ್ಕೌಂಟ್ ಅನ್ನು ಅಕ್ಟೋಬರ್ ತಿಂಗಳಿನಲ್ಲಿ ನೀಡ್ತಾ ಇದೆ. ಇತ್ತೀಚಿಗಷ್ಟೇ ಇದೇ ವೇರಿಯಂಟ್ ನಲ್ಲಿ ಅಪ್ಗ್ರೇಡ್ ಆಗಿರುವಂತಹ ವರ್ಷನ್ ಅನ್ನು ಮಾರ್ಕೆಟ್ನಲ್ಲಿ ಲಾಂಚ್ ಮಾಡಿದ್ದು ಇದಕ್ಕೆ ಮಹಿಂದ್ರ ಥಾರ್ ರಾಕ್ಸ್ ಎಂಬುದಾಗಿ ನಾಮಕರಣ ಮಾಡಲಾಗಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ!
ಮಾರುತಿ ಸುಜುಕಿ ಸಂಸ್ಥೆಯ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರುಗಳಲ್ಲಿ ಮತ್ತೊಂದು ಕಾರು ಕೂಡ ಈ ಲಿಸ್ಟಿನಲ್ಲಿ ಶಾಮೀಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 1.03 ಲಕ್ಷ ರೂಪಾಯಿಗಳವರೆಗೂ ಕೂಡ ಈ ಕಾರಿನ ಮೇಲೆ ಕಂಪನಿ ಡಿಸ್ಕೌಂಟ್ ನೀಡ್ತಾ ಇದೆ. ಈ ಡಿಸ್ಕೌಂಟ್ ಸಿಕ್ತಾ ಇರೋದು ಗ್ರಾಂಡ್ ವಿಟಾರ ಕಾರಿನ ಹೈಬ್ರಿಡ್ ವರ್ಷನ್ ಮೇಲೆ. ಇದು ನಿಮಗೆ 27.97 ಕಿಲೋ ಮೀಟರ್ ಗಳ ಭರ್ಜರಿ ಮೈಲೇಜ್ ನೀಡುತ್ತೆ.
ಹುಂಡೈ ಆಲ್ಕಾಜರ್!
ಅಕ್ಟೋಬರ್ ತಿಂಗಳಿನಲ್ಲಿ ಹುಂಡೈ ಸಂಸ್ಥೆ ತನ್ನ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವಂತಹ ಅಲ್ಕಾಜರ್ (Hyundai Alcazar) ಮೇಲೆ ಒಟ್ಟಾರೆ 85,000 ರೂಪಾಯಿಗಳ, ಅಂದರೆ 55,000 ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ಹಾಗೂ 30,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಅನ್ನು ನೀಡುತ್ತಿದೆ. ಇತ್ತೀಚಿಗಷ್ಟೇ ಈ ಕಾರಿನ ಹೊಸ ವೇರಿಯಂಟ್ ಕೂಡ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಗ್ರಾಹಕರು ಉತ್ತಮ ರೀತಿಯಲ್ಲಿ ರೆಸ್ಪಾನ್ಸ್ ನೀಡುತ್ತಿದ್ದಾರೆ.