ಟಾಟಾ ಸಂಸ್ಥೆ 2011ರಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡವರ್ಗದ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಟಾಟಾ ನ್ಯಾನೋ ಕಾರ್ ಅನ್ನು ಲಾಂಚ್ ಮಾಡಿದ್ದು ಹಾಗೂ ಅದು ಈಗಾಗಲೇ ನಿಂತು ಸಾಕಷ್ಟು ವರ್ಷಗಳೇ ಕಳೆದಿವೆ. ಆದರೆ ಈಗ 2024ರಲ್ಲಿ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ Bajaj Qute ಕಾರ್ ಲೋಂಚ್ ಆಗಿದ್ದು ಇದರ ಮೈಲೇಜ್ ಹಾಗೂ ಬೆಲೆಯನ್ನು ಕೇಳಿದರೆ ಖಂಡಿತವಾಗಿ ನೀವು ಇವತ್ತೇ ಖರೀದಿ ಮಾಡುವಂತಹ ಪ್ಲಾನ್ ಮಾಡಲಿದ್ದೀರಿ.
Bajaj Qute ಕಾರಿನ ಸಂಪೂರ್ಣ ಮಾಹಿತಿ!
Bajaj Qute ಕಾರಿನಲ್ಲಿ 216 ಸಿಸಿ ಇಂಜಿನ್ ಅನ್ನು ಅಳವಡಿಸಲಾಗಿರುತ್ತದೆ. ಕಾರಿನ ಟಾಪ್ ಸ್ಪೀಡ್ 70 ಕಿಲೋ ಮೀಟರ್ ಪ್ರತಿ ಗಂಟೆ ಆಗಿರುತ್ತದೆ. ಇದರಲ್ಲಿ ಐದು ಗೇರ್ ಗಳನ್ನ ನೀಡಲಾಗಿದೆ. 35 ಲೀಟರ್ಗಳ ಪ್ಯೂರ್ ಟ್ಯಾಂಕ್ ಕೆಪ್ಯಾಸಿಟಿಯನ್ನು ಈ ಕಾರಿನಲ್ಲಿ ಕಾಣಬಹುದಾಗಿದೆ. ಕಂಪನಿ ಹೇಳಿರುವ ಮಾಹಿತಿಯ ಪ್ರಕಾರ 45 ರಿಂದ 50 km ಮೈಲೇಜ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.
ಹಿಂಬದಿ ಡಿಕ್ಕಿಯಲ್ಲಿ 20 ಲೀಟರ್ ಗಳ ಬೂಟ್ ಸ್ಪೇಸ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಸ್ಪೀಕರ್ಸ್, ಎಫ್ ಎಂ ರೇಡಿಯೋ, ಅಡ್ಜಸ್ಟೇಬಲ್ ಹೆಡ್ ಲ್ಯಾಂಪ್, ಯುಎಸ್ಬಿ ಚಾರ್ಜರ್ ರೀತಿಯ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ನೀವು Bajaj Qute ಕಾರಿನಲ್ಲಿ ಕಾಣಬಹುದಾಗಿದೆ. ಇಷ್ಟೆಲ್ಲಾ ಫೀಚರ್ಸ್ ಗಳನ್ನು ನೀವು ಎಷ್ಟು ರೂಪಾಯಿಯ ಬೆಲೆಗೆ ಪಡೆದುಕೊಳ್ಳಬಹುದಾಗಿದೆ ಗೊತ್ತಾ, ಬನ್ನಿ ಅದರ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಳ್ಳೋಣ.
Bajaj Qute ಕಾರು ನೋಡೋದಕ್ಕೆ ನ್ಯಾನೋ ಕಾರ್ ತರಾನೇ ಇದ್ದರೂ ಕೂಡ 2024ರಲ್ಲಿ ಇದು ನಿಮಗೆ ಕೇವಲ 2.3 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗ್ತಾ ಇದೆ. ಇಂದಿನ ಮಾರುಕಟ್ಟೆಯ ವ್ಯಾಲ್ಯೂನಲ್ಲಿ ಇಷ್ಟೊಂದು ಕಡಿಮೆ ಬೆಲೆಗೆ ಸಿಗುವಂತಹ ಮತ್ತೊಂದು ಕಾರಣ ನೀವು ನೋಡುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.