ಪ್ರಧಾನಿ ಶ್ರೀ ನರೇಂದ್ರ ಮೋದಿಜೀ (Narendra Modi) ಯವರು ತಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸಿದ್ದು, ದೇಶದ ರೈಲ್ವೇ ಇತಿಹಾಸದಲ್ಲಿ ಒಂದು ಪ್ರಗತಿಯ ಮೈಲಿಗಲ್ಲು ಎನ್ನಬಹುದು. ಆರಾಮದಾಯಕ ಹಾಗೂ ವೇಗದ ಪ್ರಯಾಣಕ್ಕಾಗಿ ಎಲ್ಲಾ ನಾಗರಿಕರಿಗೂ ಅನುಕೂಲವಾಗುವಂತೆ ಅತ್ಯುತ್ತಮ ಸೌಲಭ್ಯವುಳ್ಳ ವಂದೇ ಭಾರತ್ (Vande Bharat Express) ರೈಲಿನ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡಿದೆ.
ಇದೀಗ ಕೇಂದ್ರ ಸರ್ಕಾರ 10 ಹೊಸ ವಂದೇ ಭಾರತ್ Vande Bharat ರೈಲುಗಳನ್ನು ವಿವಿಧ ಮಾರ್ಗಗಳಿಗೆ ನೀಡಿದ್ದು, ಕರ್ನಾಟಕಕ್ಕೂ ಮತ್ತೊಂದು ವಂದೇ ಭಾರತ್ ರೈಲನ್ನು ನೀಡಿ ಶುಭಸುದ್ದಿ ನೀಡಿದೆ.
ಹೌದು. ಬಿಹಾರ್, ಝಾರ್ಖಂಡ್, ಆಂಧ್ರ, ಒರಿಸ್ಸಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಘಡ್ ಹಾಗೂ ತೆಲಂಗಾಣದೊಂದಿಗೆ ಕರ್ನಾಟಕಕ್ಕೂ ಕೂಡ ಒಂದು ವಂದೇ ಭಾರತ್ ರೈಲನ್ನು ನೀಡಿದೆ.
ನಾಳೆ ಪ್ರಧಾನಿ ಮೋದಿಯವರು ಉದ್ಘಾಟಿಸಲಿರುವ ಹೊಸ Vande Bharat Express ರೈಲುಗಳ ಮಾರ್ಗಗಳ ವಿವರ ಹೀಗಿದೆ:
- ಟಾಟಾ ನಗರ್ – ಪಾಟ್ನಾ
- ಟಾಟಾ ನಗರ್ – ಬರ್ಹಾಮ್‌ಪುರ್
- ವಾರಾಣಸಿ – ಧಿಯೋಘರ್ ದುರ್ಗ – ವಿಶಾಖಪಟ್ಟಣಂ
- ಹೌರಾ – ಗಯಾ
- ಹೌರಾ – ಭಾಗಲ್‌ಫುರ
- ಹುಬ್ಬಳ್ಳಿ – ಪುಣೆ
- ನಾಗ್ಪುರ – ಸಿಕಂದಾರಾಬಾದ್
- ಆಗ್ರಾ ದಂಡು – ಬನಾರಸ್
- ಹೌರಾ – ರೂರ್ಕೇಲಾ
ಈ Vande Bharat Express ಟ್ರೈನ್‌ಗಳ ಟೈಮಿಂಗ್ ವಿವರಗಳನ್ನು ಇನ್ನಷ್ಟೇ ರೈಲ್ವೇ ಇಲಾಖೆ ತಿಳಿಸಬೇಕಿದೆ.
ರೈಲುಗಳ ವಿಶೇಷತೆ ಏನು?
ಈ ಸೀಟರ್ ಟ್ರೈನ್‌ಗಳಲ್ಲಿ ಒಟ್ಟು 530 ಆಸನ ಸಾಮರ್ಥ್ಯದ 8 ಕೋಚ್‌ಗಳಿರಲಿದ್ದು, ಸರಿಸುಮಾರು 600 ರಿಂದ 800 ಕಿ.ಮೀ ಗಳಷ್ಟು ಮಾರ್ಗವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಈ Vande Bharat ರೈಲುಗಳಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯ ಹೊಂದಿರುವ ಸೀಟುಗಳಿರಲಿದ್ದು, ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ ನಿಲ್ದಾಣ ಮಾಹಿತಿ ವ್ಯವಸ್ಥೆ ಇರಲಿದೆ. ಅಷ್ಟೇ ಅಲ್ಲದೇ, ರೈಲುಗಳಲ್ಲಿ ವೈಫೈ ಹಾಟ್‌ಸ್ಪಾಟ್ ಸೌಲಭ್ಯವಿದ್ದು, ತಿರುಗುವ ಸೀಟುಗಳ ಸೌಲಭ್ಯವನ್ನೂ ಹೊಂದಿವೆ.