ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಲೇಟೆಸ್ಟ್ ಆಗಿ ತೆಗೆದುಕೊಂಡಿರುವಂತಹ ನಿರ್ಧಾರ ಬ್ಯಾಂಕಿನಿಂದ ಲೋನ್ (Loan) ಪಡೆದುಕೊಂಡಿರುವಂತಹ ಸಾಲಗಾರರಿಗೆ ನೆಮ್ಮದಿಯ ನಿಟ್ಟುಸಿರು ಬಿಡೋ ಹಾಗೆ ಮಾಡಿದೆ. ಎನ್ ಬಿ ಎಫ್ ಸಿ ಗಳಲ್ಲಿ ಸಾಲವನ್ನು ಪಡೆದುಕೊಂಡಿರುವಂತಹ ಸಾಲಗಾರರ ಸಾಲದ ಮೇಲಿನ ಪೆನಾಲ್ಟಿ ಹಾಗೂ ಅದರ ಮೇಲಿನ ಇಂಟರೆಸ್ಟ್ ಅನ್ನು ವಿಧಿಸದೆ ಇರುವ ಹಾಗೆ ಹೊಸ ಗೈಡ್ ಲೈನ್ ಅನ್ನು ಜಾರಿಗೆ ಮಾಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವಂತಹ ಹೊಸ ಗೈಡ್ ಲೈನ್ ಗಳ ಪ್ರಕಾರ, ಇನ್ಮುಂದೆ ಯಾರು EMI ಅನ್ನು ಕಟ್ಟೋದಿಲ್ವೋ ಅವರ ಬಳಿ ಫೈನಾನ್ಸ್ ಸಂಸ್ಥೆಗಳು ಕೇವಲ ಕಟ್ಟದೇ ಇರುವ ಹಣವನ್ನು ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಡೆಯೋ ಹಾಗಿಲ್ಲ. ಇನ್ನು ಪೆನಾಲ್ಟಿ ಕೂಡ ಒಂದು ವೇಳೆ ಹತ್ತು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದು 10,000 ಕಂತನ್ನು ಕಟ್ಟಬೇಕು ಎನ್ನುವುದಾದರೆ ಪೆನಾಲ್ಟಿ 10 ಲಕ್ಷ ರೂಪಾಯಿಗಳ ಮೇಲೆಲ್ಲಾ ಬದಲಾಗಿ ಹತ್ತು ಸಾವಿರ ರೂಪಾಯಿಗಳ ಮೇಲೆ ವಿಧಿಸಲಾಗುತ್ತದೆ. ಇದು ಸಾಲಗಾರರಿಗೆ ನೆಮ್ಮದಿಯಿಂದ ಇರೋ ಹಾಗೆ ಮಾಡಿದೆ.
ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇರುವಂತಹ ಗ್ರಾಹಕರಿಗೆ ಈ ನಿಯಮಗಳು ಉತ್ತಮವಾಗಿವೆ ನಿಜ ಆದರೆ ಬೇಕು ಅಂತಾನೆ ಹಣವನ್ನು ಕಟ್ಟದೇ ಇರುವಂತಹ ಸಾಲಗಾರರಿಗೆ ಕೂಡ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರುವ ಕೆಲಸವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾಡಲಿದೆ. ವರದಿಗಳು ತಿಳಿಸಿರುವ ಮಾಹಿತಿಯ ಪ್ರಕಾರ 10 ರಿಂದ 100 ಕೋಟಿ ರೂಪಾಯಿಗಳ ಸಾಲದ ನಡುವಿನ ಡಿಫಾಲ್ಟರ್ ಗಳು ಹೆಚ್ಚಿದ್ದಾರೆ.
ಲೋನ್ ಪಡೆದುಕೊಳ್ಳುವ ಗ್ರಾಹಕರಿಗೆ ಪ್ರಮುಖ ಸೂಚನೆಗಳು!
- ಸಮಯಕ್ಕೆ ಸರಿಯಾಗಿ ಕಂತುಗಳನ್ನು ಮರುಪಾವತಿಸಿ. ಸರಿಯಾಗಿ ಕಟ್ಟದೆ ಹೋದಲ್ಲಿ ಕ್ರೆಡಿಟ್ ಸ್ಕೋರ್ (Credit Score) ಕಡಿಮೆಯಾಗಲಿದೆ.
- ಯಾವುದೇ ಸಮಯದಲ್ಲಿ ನಿಮಗೆ ಆರ್ಥಿಕ ಎಮರ್ಜೆನ್ಸಿಯ ಸಂದರ್ಭದಲ್ಲಿ ENI ಕಟ್ಟಲು ಸಾಧ್ಯವಾಗದೆ ಹೋದಲ್ಲಿ ಬ್ಯಾಂಕಿಗೆ ಕೂಡಲೇ ಮಾಹಿತಿಯನ್ನು ತಿಳಿಸಿ ಸಮಯಾವಕಾಶವನ್ನು ಪಡೆದುಕೊಳ್ಳಿ.
- ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಲೋನ್ (Loan) ಗೆ ಸಂಬಂಧಪಟ್ಟಂತಹ ಪ್ರತಿಯೊಂದು ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ.
- ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಾಗೂ ಕಟ್ಟುವಂತಹ ಸಾಮರ್ಥ್ಯವನ್ನ ಮೀರಿ ಲೋನ್ ಪಡೆದುಕೊಳ್ಳಬೇಡಿ.