ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಿಸಲು 7ನೇ ವೇತನ ಆಯೋಗದಲ್ಲಿ (7th Pay Commission) ಶಿಫಾರಸ್ಸು ಮಾಡಲಾಗಿದೆ. ಈ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ನೌಕರರ (Govt Employees) ಕನಿಷ್ಠ ಮತ್ತು ಗರಿಷ್ಠ ವೇತನ ಶ್ರೇಣಿಯನ್ನು ಪರಿಷ್ಕರಿಸಿ ನೌಕರರ್ಗೆ ಗುಡ್ ನ್ಯೂಸ್ ನೀಡಿದೆ.
ಕನಿಷ್ಠ ನಿವೃತ್ತಿ ವೇತನ
ವಯೋ ನಿವೃತ್ತಿ ವೇತನ, ವಿಶ್ರಾಂತಿ ನಿವೃತ್ತಿ ವೇತನ, ಅಶಕ್ತತಾ ನಿವೃತ್ತಿ ವೇತನ ಹಾಗೂ ಪರಿಹಾರ ನಿವೃತ್ತಿ ವೇತನಗಳು ಸೇರಿದಂತೆ, ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ರೂ 8,500ರಿಂದ 13,500ವರೆಗೆ ಏರಿಕೆ ಮಾಡಲಾಗಿದೆ.
ಗರಿಷ್ಠ ನಿವೃತ್ತಿ ವೇತನ
7ನೇ ರಾಜ್ಯ ವೇತನ ಆಯೋಗದ (7th Pay Commission) ಶಿಫಾರಸ್ಸಿನಂತೆ ಗರಿಷ್ಠ ರೂ, 75,300 ರಿಂದ 1,20,600ಗಳ್ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ 210ರ ಅಡಿ ಮಂಜೂರಾಗಿರುವ ಅಡ್ ಹಾಕ್ ನಿವೃತ್ತಿ ವೇತನ ಪರಿಷ್ಕರಿಸಲಾಗಿದ್ದು 13,500ರೂ.ಗೆ ನಿಗದಿಪಡಿಸಲಾದೆ.
ಕುಟುಂಬ ನಿವೃತ್ತಿ ವೇತನ
ಕುಟುಂಬ ನಿವೃತ್ತಿ ವೇತನ (Retirement Salary) ಕನಿಷ್ಠ ಮೊತ್ತವನ್ನು 8,500ರಿಂದ 13,500ಕ್ಕೆ ನಿಗದಿಪಡಿಸಲಾಗಿದೆ. ಅದೇ ರೀತಿ ಗರಿಷ್ಠ ಮೊತ್ತವನ್ನು 45,180ರಿಂದ 80,400ಕ್ಕೆ ನಿಗದಿಪಡಿಸಲಾಗಿದೆ. ಇನು ಮೃತ ಸರ್ಕಾರಿ ನೌಕರರ ಅವಲಂಬಿತ ಕುಟುಂಬದವರು ನಿವೃತ್ತಿ ವೇತನದ ಪರಿಷ್ಕ್ರತ ಮೊತ್ತವನ್ನು ಅಗಸ್ಟ್ ತಿಂಗಳಿನಿಂದಲೇ ಪಡೆಯಲು ಅರ್ಹತೆ ಪಡೆದುಕೊಂಡಿರುತ್ತಾರೆ.
ತುಟ್ಟಿ ಭತ್ಯೆ
ಪರಿಷ್ಕೃತ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಮೇಲಿನ ತುಟ್ಟಿ ಭತ್ಯೆ ಮೊದಲನೆ ಕಂತಿನ ಹಣವನ್ನು ಜನವರಿ 1,2023ಕ್ಕೆ ಅನ್ವಯವಾಗುವಂತೆ ಪಡೆದುಕೊಳ್ಳತಕ್ಕದ್ದು. ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲಕ್ಕೆ ಸರಿಯಾಗಿ ತುಟ್ಟಿ ಭತ್ಯೆಯನ್ನು ಆದೇಶದಲ್ಲಿ ತಿಳಿಸಿರುವಂತೆ ನೀಡತಕ್ಕದ್ದು ಎಂದು ತಿಳಿಸಲಾಗಿದೆ. ಇನ್ನು ನಿವೃತ್ತಿ ಉಪಾದಾನದ ಮಿತಿ 20 ಲಕ್ಷ ರೂ. ಗಳು. ಜುಲೈ 01, 2020 ಹಾಗೂ ಅಗಸ್ಟ್ 01, 2024ರ ಒಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರಿಗೆ ಪರಿಷ್ಕೃತ ದರದಲ್ಲಿ ಭತ್ಯೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಈ ಬಾರಿ ಸರ್ಕಾರ್ ನೌಕರರಿಗೆ ಬಂಫರ್ ಕೊಡುಗೆ ನೀಡಿದೆ ಎನ್ನಬಹುದು.