ಸಾಕಷ್ಟು ಬಾರಿ ನಿಮಗೆಲ್ಲರಿಗೂ ತಿಳಿದಿರಬಹುದು ಗಂಡಂದಿರು ತಮ್ಮ ಹೆಂಡತಿಯರ ಹೆಸರಿನಲ್ಲಿ ಆಸ್ತಿಯನ್ನು ಖರೀದಿ ಮಾಡಿರುತ್ತಾರೆ. ಇದರ ಹಿಂದೆ ವೈಯಕ್ತಿಕ ಕಾರಣ ಸೇರಿದಂತೆ ಸಾಕಷ್ಟು ಆರ್ಥಿಕ ಕಾರಣಗಳು ಕೂಡ ಹೆಚ್ಚಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಹೈಕೋರ್ಟ್ (High Court) ಈ ವಿಚಾರದಲ್ಲಿ, ಒಂದು ವೇಳೆ ಗಂಡ ಹೆಂಡತಿಯ ಹೆಸರಿನಲ್ಲಿ ಆಸ್ತಿ (Property) ಯನ್ನು ಖರೀದಿ ಮಾಡಿದರೆ ಅದು ನಿಜವಾಗಿ ಯಾರ ಹೆಸರಿಗೆ ಸೇರುತ್ತೆ ಎನ್ನುವುದರ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.
ಸೆಕ್ಷನ್ 114 ರ ಪ್ರಕಾರ ಹೆಂಡತಿಯ ಹೆಸರಿನಲ್ಲಿ ಗಂಡ ಖರೀದಿ ಮಾಡಿರುವಂತಹ ಆಸ್ತಿ (Property) ಯನ್ನು ಕುಟುಂಬದ ಆಸ್ತಿ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ. ಒಂದು ವೇಳೆ ಪತ್ನಿಗೆ ಯಾವುದೇ ಆದಾಯ ಇಲ್ಲದೆ ಹೋದಲ್ಲಿ ಆಸ್ತಿಯನ್ನು ಪತ್ನಿಯೇ ಖರೀದಿಸಿದ್ದಾರೆ ಎಂದು ಸಾಬೀತುಪಡಿಸದೆ ಹೋದಲ್ಲಿ ಅದನ್ನು ಪತಿಯ ಆದಾಯದಿಂದ ಖರೀದಿಸಿರುವಂತಹ ಪ್ರಾಪರ್ಟಿ ಎಂಬುದಾಗಿ ಪರಿಗಣಿಸಲಾಗುತ್ತದೆ.
ಒಂದು ವೇಳೆ ಹೆಂಡತಿಗೆ ಯಾವುದೇ ಆದಾಯದ ಮೂಲ ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ಇಂತಹ ಆಸ್ತಿಯನ್ನು ಗಂಡನ ವೈಯಕ್ತಿಕ ಆದಾಯದಿಂದ ಖರೀದಿ ಮಾಡಿರುವಂತಹ ಪ್ರಾಪರ್ಟಿ ಎಂಬುದಾಗಿ ಪರಿಗಣಿಸಿ ಅದನ್ನು ಅವಿಭಜಿತ ಹಿಂದೂ ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂತಹ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡುವುದನ್ನು ಕೂಡ ತಡೆಯಲಾಗುತ್ತದೆ. ಭಾರತದ ಆಸ್ತಿ ಸಂಬಂಧಪಟ್ಟಂತಹ ಕಾನೂನುಗಳ ಪ್ರಕಾರ ಗಂಡ ಬದುಕಿರುವವರೆಗೂ ಕೂಡ ಆತನ ಆಸ್ತಿಯ ಮೇಲೆ ಹೆಂಡತಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಹಾಗೂ ಆತನ ಮರಣ ನಂತರ ಮಾತ್ರ ಅದರ ಮೇಲೆ ಕಾನೂನಾತ್ಮಕವಾಗಿ ಮಕ್ಕಳು ಸೇರಿದಂತೆ ಹೆಂಡತಿ ಕೂಡ ಹಕ್ಕನ್ನು ಹೊಂದಬಹುದಾಗಿದೆ.
ಹೀಗಾಗಿ ಗಂಡನ ಮರಣ ನಂತರ ಮಾತ್ರ ಕಾನೂನಾತ್ಮಕವಾಗಿ ಗಂಡನಿಗೆ ಸಂಬಂಧಪಟ್ಟಂತಹ ಹೆಂಡತಿ ಮಕ್ಕಳು ಹಾಗೂ ತಾಯಿಗೆ ಆತನ ಆಸ್ತಿಯನ್ನು ಸಮ ಪಾಲಿನಲ್ಲಿ ಹಂಚಲಾಗುತ್ತದೆ ಎಂಬುದಾಗಿ ಕೋರ್ಟಿನಲ್ಲಿ ತೀರ್ಪನ್ನು ನೀಡಲಾಗಿದೆ. ಒಬ್ಬ ಪುರುಷನ ಮರಣ ನಂತರ ಆಸ್ತಿಯ ಸಮಪಾಲಿನಲ್ಲಿ ಈ ಮೂವರು ವರ್ಗದವರು ಮೊದಲ ಪಾಲುದಾರರಾಗಿರುತ್ತಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿರುತ್ತದೆ. ಹೀಗಾಗಿ ಗಂಡನ ಸ್ವಂತ ಅರ್ಜಿತ ಆಸ್ತಿಯನ್ನು ಆತ ವಿಲ್ ಮೂಲಕ ಯಾರಿಗೆ ಬೇಕಾದರೂ ಕೂಡ ಬರೆದಿರುವಂತಹ ಅವಕಾಶ ಕೂಡ ಇದೆ ಆದರೆ, ಸಹಜವಾಗಿ ಆತನ ನಂತರ ಆಸ್ತಿಯನ್ನು ಈ ರೀತಿ ವಿಭಾಗಿಸಲಾಗುತ್ತದೆ.