ನಿನ್ನೆಯಷ್ಟೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಡ್ಡು ಬಗ್ಗೆ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಆ ಲಡ್ಡು ಸ್ಯಾಂಪಲ್‌ನ್ನು ಆಹಾರ ಸುರಕ್ಷತಾ ತಂಡ ಲ್ಯಾಬ್‌ನಲ್ಲಿ ಟೆಸ್ಟ್‌ಗೆ ಒಳಪಡಿಸಿತ್ತು. ಆ ಟೆಸ್ಟ್ (Tirupati Laddu Report) ನಲ್ಲಿ ಈ ಅಂಶ ಇರೋದು ದೃಢವಾಗಿದ್ದು, ಇಡೀ ಹಿಂದೂ ಭಕ್ತಸಮಾಜ ತಲೆತಗ್ಗಿಸುವಂತಾಗಿದೆ.
ಹೌದು. ಕಳೆದ ಚುನಾವಣೆಯಲ್ಲಿ ವೈಎಸ್ ಜಗನ್‌ಮೋಹನ್ ರೆಡ್ಡಿ (Y S Jagan Mohan Reddy) ಯವರ ವೈಎಸ್‌ಆರ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಿದ ಸಿಎಂ ಚಂದ್ರಬಾಬು ನಾಯ್ಡು (N. Chandrababu Naidu), ಜಗನ್ ಆಡಳಿತದಲ್ಲಿ ನಡೆದಿದ್ದ ಬಹುತೇಕ ಅಕ್ರಮಗಳನ್ನು ಹಾಗೂ ಅನ್ಯಾಯಗಳನ್ನು ಬಯಲಿಗೆಳೆದಿದ್ದರು. ಅತಿಮುಖ್ಯವಾಗಿ ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದ ಸಮಿತಿಯಲ್ಲಿ ಅನ್ಯಮತೀಯರ ಕೈವಾಡದ ವಿರುದ್ಧವೂ ದನಿ ಎತ್ತಿದ್ದರು.
Tirupati Laddu Report: ನಿಜವಾಯ್ತು ಸಿಎಂ ನಾಯ್ಡು ಆರೋಪ!
ಆದರೆ, ಮೊನ್ನೆ ಬುಧವಾರ ನಡೆದ ಎನ್‌ಡಿಎ ಒಕ್ಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರುಪತಿಯಲ್ಲಿ ಜಗನ್ ಆಡಳಿತದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಬದಲಿಗೆ ಮೀನೆಣ್ಣೆ ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಅದರಂತೆಯೇ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ (NDDB) ಆ ಲಡ್ಡು ಸ್ಯಾಂಪಲ್‌ನ್ನು ಟೆಸ್ಟ್ (Tirupati Laddu Report) ಗೆ ಒಳಪಡಿಸಿದಾಗ, ಅದರಲ್ಲಿ ಅನಿಮಲ್ ಫ್ಯಾಟ್ ಅಥವಾ ಪ್ರಾಣಿ ಕೊಬ್ಬು ಇರೋದು ಧೃಢವಾಗಿದ್ದು, ಸಮಸ್ತ ಹಿಂದೂಗಳಿಗೆ ತಲೆ ಮೇಲೆ ಬೆಟ್ಟವೇ ಕಳಚಿ ಬಿದ್ದಂತಾಗಿದೆ.
ತಿರುಪತಿಗೆ ವರ್ಷದಿಂದ ವರ್ಷಕ್ಕೆ ಜಾತಿ ಮತ ಪಂಥ ಬೇಧವಿಲ್ಲದೆ ಕೋಟ್ಯಾಂತರ ಭಕ್ತರು ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೇ ಅಲ್ಲಿನ ಲಡ್ಡು ಪ್ರಸಾದವನ್ನು ದೇವರ ಪ್ರತ್ಯಕ್ಷ ಪ್ರಸಾದವೆಂದೇ ನಂಬಿ ಭಕ್ತಿಯಿಂದ ಸ್ವೀಕರಿಸುತ್ತಾರೆ. ಆದರೆ, ಜಗನ್ ಮೋಹನ್ ರೆಡ್ದಿ ನೇತೃತ್ವದ ನಿರ್ಗಮಿತ ವೈ ಎಸ್ ಆರ್ ಸರ್ಕಾರ, ಸಮಸ್ತ ಹಿಂದೂ ಸಮಾಜಕ್ಕೆ ಅಥವಾ ದೇವಳದ ನಂಬಿಕೆಗೆ ವಿರುದ್ಧವಾಗಿ, ತುಪ್ಪದ ಬದಲಿಗೆ ಲಡ್ಡು ತಯಾರಿಕೆ (Tirupati Laddu Report) ಗೆ ಪ್ರಾಣಿಗಳ ಕೊಬ್ಬು ಹಾಗೂ ಮೀನೆಣ್ಣೆ ಬಳಸಿ ಇಡೀ ಭಕ್ತವರ್ಗವೇ ಅಸಹ್ಯಪಡುವಂತೆ ಮಾಡಿದ್ದು, ಜಗತ್ತಿನಾದ್ಯಂತ ಸಮಸ್ತ ಹಿಂದೂ ಸಮಾಜ ಭುಗಿಲೇಳುವಂತೆ ಮಾಡಿದೆ.
Tirupati Laddu Report: ನಾವು ಪ್ರಾಣಿ ಕೊಬ್ಬು ಬಳಸಿಲ್ಲ ಎಂದಿದ್ದ ಸುಬ್ಬಾರೆಡ್ಡಿಗೆ ವರದಿಯ ಕಪಾಳಮೋಕ್ಷ
ನಿನ್ನೆ NDDB ನಡೆಸಿದ ಲ್ಯಾಬ್ ಟೆಸ್ಟ್‌ನಲ್ಲಿ ಈ ಹಿಂದೆ ಅನಿಮಲ್ ಫ್ಯಾಟ್ ಬಳಸಿರೋದು ದೃಢಪಟ್ಟಿದ್ದು, ಚಂದ್ರಬಾಬು ನಾಯ್ಡು ಅವರ ಆರೋಪ ನಿಜವೆಂದು ಸಾಬೀತಾಗಿದೆ. ಅಷ್ಟೇ ಅಲ್ಲದೇ, ವೈಎಸ್ ಜಗನ್ ಮೋಹನ್ ರೆಡ್ದಿ ಅವರ ಹತ್ತಿರದ ಸಂಬಂಧಿ ಹಾಗೂ ರಾಜ್ಯಸಭಾ ಸದಸ್ಯರಾದ ಸುಬ್ಬಾ ರೆಡ್ಡಿಯವರು ಚಂದ್ರಬಾಬು ನಾಯ್ಡುರವರ ಆರೋಪವನ್ನು ಅಲ್ಲಗಳೆದಿದ್ದಲ್ಲದೇ, ಇಂತಹ ಆರೋಪಗಳು ದುರುದ್ದೇಶಪೂರಿತ ಹಾಗೂ ಇಂತಹ ಪ್ರಯತ್ನ ನಾವು ಮಾಡಿಲ್ಲ ಎಂದು ದೇವರಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಹೇಳಿದ್ದರು. ಆದರೆ, ಈ ಪರೀಕ್ಷಾ ವರದಿ (Tirupati Laddu Report) ದೃಢವಾಗುತ್ತಿದ್ದಂತೆ ಸುಬ್ಬಾರೆಡ್ಡಿಯವರು ಯಾವುದೇ ಹೇಳಿಕೆ ನೀಡಲು ಅಸಮರ್ಥರಾಗಿದ್ದಾರೆ ಎನ್ನಲಾಗಿದೆ.
ಜಗತ್ತಿನೆಲ್ಲೆಡೆ ಭುಗಿಲೆದ್ದ ಆಕ್ರೋಶ!
ಈ ವಿವಾದದ ಬಗ್ಗೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದ್ದು, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದೂ ಸಂಘಟನೆಗಳು ಹಾಗೂ ಇತರ ಹಲವಾರು ಸಂಘಟನೆಗಳು ಹಾಗೂ ಹಲವು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಗನ್ ಮೋಹನ್ ರೆಡ್ಡಿಯವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ನಂಬಿಕೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಸಮಸ್ತ ಹಿಂದೂ ಭಕ್ತ ಸಮಾಜಕ್ಕೆ ಜಗನ್ ಸರ್ಕಾರ ನಡೆಸಿರುವ ಅತ್ಯಂತ ಘೋರ ಅಪರಾಧ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಸಮಸ್ತ ಭಕ್ತವರ್ಗದ ನಂಬಿಕೆಗೆ ಅನ್ಯಾಯ ಎಸಗಿದ ನಿರ್ಗಮಿತ ಜಗನ್ ಸರ್ಕಾರ!
ಏನೇ ಇರಲಿ. ಸರ್ವ ಸ್ವಚ್ಛಂದ ಹಾಗೂ ಪಾವಿತ್ರ್ಯತೆಯುಳ್ಳ ತಿರುಪತಿಯಂತಹ ಜಗದ್ವಿಖ್ಯಾತ ದೇವಳದಲ್ಲಿಯೂ ಲಡ್ಡು ತಯಾರಿಕೆಗೆ ಮೀನೆಣ್ಣೆ ಹಾಗೂ ಪ್ರಾಣಿ ಕೊಬ್ಬು ಬಳಸಿರುವ ಇಂತಹ ಕೀಳುಮಟ್ಟದ ಅಕ್ರಮಗಳು ನಡೆದಿರುವುದು ವಿಷಾದನೀಯ. ಪ್ರಸ್ತುತ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಕರ್ನಾಟಕದ ನಂದಿನಿ ತುಪ್ಪವನ್ನೇ ಲಡ್ಡು ತಯಾರಿಕೆಗೆ ಬಳಸಲಾಗುತ್ತಿದ್ದರೂ ಕೂಡ, ಈ ಹಿಂದೆ ನಡೆದ ಈ ಅಕ್ಷಮ್ಯ ಅಪರಾಧ ಹಾಗೂ ಈಗಾಗಲೇ ಇರುವ ಲಡ್ಡು ಸ್ಟಾಕ್‌ಗಳನ್ನು ಸ್ವೀಕರಿಸಿದವರ ಪಾಲಿಗೆ ಎಸಗಿದ ನಂಬಿಕೆದ್ರೋಹಕ್ಕೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕಿದೆ.