ನಿತಿನ್ ಗಡ್ಕರಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ಅಧಿಕಾರಾವಧಿಯಲ್ಲಿ ದೇಶದ ರಸ್ತೆಗಳು ಸಾಕಷ್ಟು ಅಡ್ವಾನ್ಸ್ ಆಗಿವೆ. ಹೆದ್ದಾರಿ ಹಾಗೂ ರಸ್ತೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ನಿತಿನ್ ಗಡ್ಕರಿ (Nitin Gadkari) ಅವರ ನಾಯಕತ್ವದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆನ ಕಳೆದ ಕೆಲವು ವರ್ಷಗಳಿಂದ ಸಾಧಿಸಿವೆ. ಈಗ ನಿತಿನ್ ಗಡ್ಕರಿ ಅವರು ಇನ್ನೊಂದು ಹೊಸ ನಿಯಮವನ್ನು ಜಾರಿಗೆ ತರುವ ವಿಚಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ವಿಶೇಷವಾಗಿ ಪೆಟ್ರೋಲ್ ಪಂಪ್ (Petrol Pump) ಮಾಲೀಕರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ ಎನ್ನಬಹುದಾಗಿದೆ.
ಪೆಟ್ರೋಲ್ ಪಂಪ್ ಗಳಲ್ಲಿ ಇದು ಕಡ್ಡಾಯವಾಗಿ ಇರಲೇಬೇಕು ಎಂದ ನಿತಿನ್ ಗಡ್ಕರಿ!
ಮಾನ್ಯ ಸಚಿವರಾಗಿರುವಂತಹ ನಿತಿನ್ ಗಡ್ಕರಿ (Nitin Gadkari) ರವರು ಹೆದ್ದಾರಿಗಳಲ್ಲಿ ಇರುವಂತಹ ಪೆಟ್ರೋಲ್ ಪಂಪ್ ಗಳಲ್ಲಿ ಸಾರ್ವಜನಿಕ ಶೌಚಾಲಯ ಇರಬೇಕು ಎಂಬುದಾಗಿ ಸೂಚಿಸಿದ್ದಾರೆ. ಕೇವಲ ಶೌಚಾಲಯಗಳನ್ನು ಹೊಂದಿರುವುದು ಮಾತ್ರವಲ್ಲ ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಕೂಡ ಪೆಟ್ರೋಲ್ ಪಂಪ್ (Petrol Pump) ಗಳ ಜವಾಬ್ದಾರಿಯಾಗಿದೆ ಅನ್ನೋದನ್ನ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಈ ನಿಯಮವನ್ನ ಒಂದು ವೇಳೆ ಪೆಟ್ರೋಲ್ ಪಂಪ್ ಗಳ ಮಾಲೀಕರು ಉಲ್ಲಂಘಿಸಿದರೆ ಅವರ NOC ಅನ್ನು ರದ್ದುಗೊಳಿಸುವಂತಹ ಎಚ್ಚರಿಕೆಯನ್ನು ಕೂಡ ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಹೆದ್ದಾರಿಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೇರೆ ಬೇರೆ ರೀತಿಯ ವಾಹನಗಳಲ್ಲಿ ದೂರ ಪ್ರಯಾಣ ಮಾಡುವಂತಹ ಪ್ರಯಾಣಿಕರಿಗೆ ಶೌಚಾಲಯಗಳ ಅಗತ್ಯತೆ ಖಂಡಿತವಾಗಿ ಇದ್ದೇ ಇರುತ್ತೆ. ಅದರಲ್ಲಿ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಶೌಚಾಲಯಗಳ ಅಗತ್ಯತೆ ಇದ್ದೇ ಇರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಸಂದರ್ಭದಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ಶುಚಿಯಾಗಿರುವಂತಹ ಶೌಚಾಲಯಗಳು ಇರುವುದು ಕಡ್ಡಾಯವಾಗಿರುತ್ತದೆ ಅನ್ನೋದನ್ನ ನಿತಿನ್ ಗಡ್ಕರಿ ರವರು ಹೇಳುವ ಮೂಲಕ ಮತ್ತೊಂದು ಅಭಿವೃದ್ಧಿಯ ಮೈಲಿಗಲ್ಲನ್ನು ನೆಟ್ಟಿದ್ದಾರೆ ಎನ್ನಬಹುದಾಗಿದೆ.
ಇನ್ನು ಮುಂದಾದರೂ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ಸ್ಥಳದಲ್ಲಿ ಶುಚಿಯಾಗಿರುವಂತಹ ಶೌಚಾಲಯಗಳನ್ನ ಸಾರ್ವಜನಿಕರಿಗಾಗಿ ನಿರ್ವಹಣೆ ಮಾಡೋದು ನಡೆಯಬಹುದು ಎನ್ನುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ.