ಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರ ಇದೀಗ ಹೊಸ ಯೋಜನೆ ಯನ್ನು ಆರಂಭ ಮಾಡಿದೆ. ಕಾರ್ಮಿ ಕರ ಇಲಾಖೆಯಲ್ಲಿ ನೋಂದಾವಣೆ ಮಾಡಿದ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಸರಕಾರ ನೀಡ್ತಾ ಇದ್ದು ಇದಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯ ಬಹುದಾಗಿದೆ. ಇದಕ್ಕಾಗಿ ಕಾರ್ಮಿಕ ರಾಗಿದ್ದು, ಗುರುತಿನ ಚೀಟಿ (Identity Card) ಹೊಂದಿ ದ್ದಲ್ಲಿ ಈ ಸೌಲಭ್ಯ ಪಡೆಯಬಹುದು.
ಕಾರ್ಮಿಕರು ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶ ಇರಲಿದ್ದು ಬಿಲ್ಡಿಂಗ್ ಕಾರ್ಡ್ ಮತ್ತು ಸಾಮಾಜಿಕ ಕಾರ್ಡ್ ಎಂಬುದಾಗಿ ವಿತರಣೆ ಮಾಡಲಾಗುತ್ತೆ. ಗುತ್ತಿಗೆ ದಾರರ ಅಡಿಯಲ್ಲಿ ಕೆಲಸ ಮಾಡುವವರಿಗೆ ಬಿಲ್ಡಿಂಗ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಕೃಷಿ ಹಾಗೂ ಇತ್ಯಾದಿ ಕಟ್ಟಡೇತರ ಚಟು ವಟಿಕೆಗಳಲ್ಲಿ ತೊಡಗಿರುವವರಿಗೆ ಸಾಮಾಜಿಕ ಕಾರ್ಡ್ಗಳನ್ನು ಒದಗಿಸಲಾಗುತ್ತೆ.
ಅರ್ಜಿ ಸಲ್ಲಿಸಿ!
ಇದೀಗ ಎಲ್ಲಾ ಕಾರ್ಮಿಕರು ಆನ್ ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್ (Labour Card) ಗಾಗಿ ಅರ್ಜಿ ಸಲ್ಲಿಸ ಬಹುದಾಗಿದೆ. ಅರ್ಜಿ ಹಾಕಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಫೋಟೊ, ಪಡಿ ತರ ಚೀಟಿ ಇತ್ಯಾದಿ ಕಡ್ಡಾಯವಾಗಿ ಬೇಕು.
ಈ ಸೌಲಭ್ಯ ಸಿಗಲಿದೆ!
ಈ ಕಾರ್ಮಿಕ ಕಾರ್ಡ್ (Labour Card) ಇದ್ದಲ್ಲಿ ಕುಟುಂಬ ದವರಿಗೆ ಆರೋಗ್ಯ ಸೌಲಭ್ಯ, ವೈದ್ಯಕೀಯ ಖರ್ಚು ವೆಚ್ಚದ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶೀಪ್, ಲ್ಯಾಪ್ಟಾಪ್, ಸ್ಕೂಲ್ ಕಿಟ್, ವಿವಾಹಕ್ಕೆ ಸಹಾಯಧನ ಇತ್ಯಾದಿ ದೊರೆಯುತ್ತದೆ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಯಾದರೆ ಅಂತಹ ಫಲಾನು ಭವಿಗಳಿಗೆ ವಿವಧ ರೀತಿಯ ಪಿಂಚಣಿ ಸೌಲಭ್ಯ, ವಸತಿ ಸೌಲಭ್ಯ, ಶೈಕ್ಷಣಿಕ ಸಹಾಯಧನ ಸೇರಿದಂತೆ 19 ರೀತಿಯ ವಿವಿಧ ಸೌಲಭ್ಯಗಳು ಸಿಗಲಿದೆ.
- ಪಿಂಚಣಿ ಸೌಲಭ್ಯ, ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3,000 ರೂ. ಪಿಂಚಣಿ ಸಿಗಲಿದೆ.
- ಟೂಲ್ ಕಿಟ್ ಸೌಲಭ್ಯ ಸಿಗಲಿದೆ.
- ವಸತಿ ಸೌಲಭ್ಯ ನೀಡಲಿದೆ. ಕಾರ್ಮಿಕ ಗೃಹ ನಿರ್ಮಾಣ ಮಾಡಲು 2,00,000 ರೂ. ವರೆಗೆ ಮುಂಗಡ ಸಾಲ ಸೌಲಭ್ಯ ಸಿಗಲಿದೆ.
- ಹೆರಿಗೆ ಸೌಲಭ್ಯ,ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ 50,000 ರೂ. ಸೌಲಭ್ಯ
- ಶಿಶುಪಾಲನಾ ಸೌಲಭ್ಯ ಸಿಗಲಿದೆ.ಕಾರ್ಮಿಕರ ಮಕ್ಕಳ ಪಾಲನೆಗಾಗಿ ರಾಜ್ಯದಾದ್ಯಂತ ಶಿಶು ಪಾಲನೆ ಕಾರ್ಯ ಚಟುವಟಿಕೆಗಳು ಸಿಗಲಿದೆ.
- ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ,ನೋಂದಾಯಿತ ಫಲಾನುಭವಿಯ ಮಕ್ಕಳಿಗೆ ಯುಪಿಎಸ್ ಸಿ/ಕೆಪಿಎಸ್ ಸಿ (UPSC/KPSC) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೌಲಭ್ಯ ನೀಡಲಿದೆ.
- ಹಾಗೆಯೇ ಇತರ ವೈದ್ಯಕೀಯ ಖರ್ಚು ವೆಚ್ಚ, ಮದುವೆ ಸಹಾಯ ಧನ ಇತ್ಯಾದಿ ಸೌಲಭ್ಯ ಸಿಗಲಿದೆ.