ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿಯಿರುವ 945 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದೆ. ಕೃಷಿ ಇಲಾಖೆಯ 128 ಕೃಷಿ ಅಧಿಕಾರಿಗಳು ಹಾಗೂ 817 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ :
ಕೃಷಿ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿರುವ ಒಟ್ಟು 945 ಕೃಷಿ ಅಧಿಕಾರಿ ಹುದ್ದೆಗಳಿಗೆ (Agriculture Department Jobs) ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕೃಷಿ ಅಧಿಕಾರಿಗಳ ವೃಂದದ ಒಟ್ಟು 128 ಹುದ್ದೆಗಳಲ್ಲಿ ಹೈ.ಕ ವಿಭಾಗಕ್ಕೆ 42 ಹುದ್ದೆಗಳು ಮೀಸಲಾಗಿದ್ದರೆ 86 ಹುದ್ದೆಗಳು ಉಳಿಕೆ ಮೂಲ ವೃಂದದಲ್ಲಿ ಲಭ್ಯವಿವೆ. ಸಹಾಯಕ ಕೃಷಿ ಅಧಿಕಾರಿಗಳ ವೃಂದದ ಒಟ್ಟು 817 ಹುದ್ದೆಗಳಲ್ಲಿ ಹೈ.ಕ ವಿಭಾಗಕ್ಕೆ 231 ಹುದ್ದೆಗಳ ಮೀಸಲಾಗಿದ್ದರೆ, ಉಳಿಕೆ ಮೂಲ ವೃಂದದಲ್ಲಿ 586 ಹುದ್ದೆಗಳ ಲಭ್ಯವಿವೆ.
ಅರ್ಜಿ ಸಲ್ಲಿಕೆ ವಿವರ:
ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ: 07/10/2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07/11/2024
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ.
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 300 ರೂ.
- ಮಾಜಿ ಸೈನಿಕರಿಗೆ 50 ರೂ.
- ಪರಿಶಿಷ್ಟ ಪಂಗಡ/ಪರಿಶಿಷ್ಟ ವರ್ಗದ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ವಿದ್ಯಾರ್ಹತೆ:
ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಕೃಷಿ ವಿಷಯದಲ್ಲಿ BSC ಅಥವಾ B Tech ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ವಯೋಮಿತಿ ಇರಬೇಕು. ಇತ್ತೀಚೆಗೆ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯಸ್ಸಿನ ಸಡಿಲಿಕೆ ಮಾಡಿದೆ. ಅದರಂತೆ ಸಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 41 ವರ್ಷ ಹಾಗೂ ಪ.ಪಂ, ಪ.ಜಾತಿ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 43 ವಯಸ್ಸು ಮೀರಿರಬಾರದಯ.
ವೇತನ:
ಕೃಷಿ ಅಧಿಕಾರಿ ಹುದ್ದೆ 83,000 ರೂ.ಗಳ ವರೆಗೂ ವೇತನ ದೊರೆಯಲಿದೆ. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ 78,000 ರೂ.ಗಳ ವರೆಗೆ ವೇತನ ದೊರಕಲಿದೆ.
ಆಸಕ್ತ ವಿದ್ಯಾರ್ಥಿಗಳು ಈಗಲೇ ಕರ್ನಾಟಕ ಲೋಕಸೇವಾ ಆಯೋಗದ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಲಭ್ಯವಿರುವ, ಅಧಿಕೃತವಾಗಿ ಅರ್ಜಿ ಆಹ್ವಾನಿಸಿರುವ ಮಾಹಿತಿಯನ್ನು ನೀವು ಕರ್ನಾಟಕ ಟೈಮ್ಸ್ ನ್ಯೂಸ್ ಜಾಲತಾಣದಲ್ಲಿ ವೀಕ್ಷಿಸಬಹುದು. ಪ್ರತಿಕ್ಷಣದ ಅಪ್ ಡೇಟ್‌ಗಳಿಗಾಗಿ ಈ ಜಾಲತಾಣಕ್ಕೆ ತಪ್ಪದೇ ಭೇಟಿ ನೀಡುತ್ತಿರಿ ಹಾಗೂ ನೋಟಿಫಿಕೇಷನ್ ಗಳಿಗೆ ಸಬ್ಸ್ಕ್ರೈಬ್ ಮಾಡಿ.