ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಅಧಿಕ ವಾಗಿದೆ. ಹೌದು ಇಂದು ದಿನ ನಿತ್ಯದ ಸಂಚಾರಕ್ಕಾಗಿ ವಾಹನಗಳ ಅವಶ್ಯಕತೆ ಹೆಚ್ಚಾಗಿ ಇದ್ದು ಯಾವುದೇ ಮನೆಯಲ್ಲಿ ಒಂದಾದರು ವಾಹನ ಇದ್ದೇ ಇರಲಿದೆ. ಹಾಗೆಯೇ ಸಾರಿಗೆ ಇಲಾಖೆಯು ವಾಹನ ಸವಾರರ ಹಿತ ದೃಷ್ಟಿಯಿಂದ ಹೊಸ ಹೊಸ ನಿಯಮ ಜಾರಿ ಮಾಡುತ್ತಲೇ ಇದೆ.ಇದೀಗ ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ವಿಚಾರದಲ್ಲಿ RTO ದೊಡ್ಡ ಬದಲಾ ವಣೆ ಮಾಡಿದ್ದು ವಾಹನ ಸವಾರರು ಈ ಬಗ್ಗೆ ತಿಳಿಯಲೇ ಬೇಕು.
ಇಂದು ಯಾವುದೇ ವಾಹನವನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ (Driving License) ಅತೀ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕಲಿದ್ದಾರೆ. ಇನ್ನು ಡಿಎಲ್ ಅನ್ನು ಅಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಂದರೆ RTO ಕಚೇರಿಗೆ ಹೋಗಲೇಬೇಕು. ಆದರೆ ಇಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳ ನಾಗರಿಕರಿಗಾಗಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭ ಗೊಳಿಸಿದೆ.
ಅನ್ ಲೈನ್ ಮೂಲಕ ಮಾಡಿ!
ಇಂದು ಆನ್ಲೈನ್ ಮೂಲಕವೇ ಚಾಲನಾ ಪರವಾನಿಗೆ (Driving License) ಪಡೆಯಲು ಅವಕಾಶ ಇರಲಿದ್ದು ಚಾಲನಾ ಲೈಸೆನ್ಸ್ ಪಡೆಯಲು ಮದ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಹಾಕಬಹುದಾಗಿದೆ. ಹಾಗೆಯೇ ಆನ್ಲೈನ್ ಪೋರ್ಟಲ್ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ರಿನಿವಲ್ ಮಾಡುವುದಕ್ಕೆ ಅವಕಾಶ ಕೂಡ ಇದೆ.
ಹೀಗೆ ಮಾಡಿ!
ಮೊದಲಿಗೆ ಕರ್ನಾಟಕ ಸಾರಿಗೆ ಇಲಾಖೆಯ ಲಿಂಕ್ http://transport.karnataka.gov.in ಇಲ್ಲಿ ಅನ್ ಲೈನ್ ಸರ್ವಿಸ್ ಆಯ್ಕೆಗೆ ಹೋಗಿ ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯ ಆಯ್ಕೆ ಮಾಡಿ. ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಹಾಕಿ ಲರ್ನಿಂಗ್ ಲೈಸೆನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಮತ್ತು ಹಣ ಪಾವತಿ ಮಾಡಿ.ಈ ಪ್ರಕ್ರಿಯೆಯ ಆದ ನಂತರ ಸುಮಾರು 7 ದಿನಗಳಲ್ಲಿ ನಿಮ್ಮ ಕಲಿಕಾ ಪರವಾನಗಿ ನಿಮ್ಮ ಮನೆಯ ವಿಳಾಸಕ್ಕೆ ಬರಲಿದೆ.