ಪೋಸ್ಟ್ ಆಫೀಸ್ (Post Office) ಭಾರತೀಯ ನಾಗರಿಕರಿಗಾಗಿ ಸಾಕಷ್ಟು ಉಳಿತಾಯ ಯೋಜನೆಗಳನ್ನು ಪ್ರಾರಂಭ ಮಾಡಿದೆ. ಬೇರೆ ಯಾವುದೇ ರೀತಿಯ ಫೈನಾನ್ಸಿಯಲ್ ಸಂಸ್ಥೆಗಳಿಗೆ ಹೋಲಿಸಿದರೆ ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಹುಡುಕಿ ಮಾಡುವುದು ಸಾಕಷ್ಟು ಲಾಭದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ವಿಶೇಷವಾಗಿ ಪೋಸ್ಟ್ ಆಫೀಸ್ ಪ್ರಾರಂಭ ಮಾಡಿರುವಂತಹ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income Scheme) ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನೀವು ತಿಂಗಳ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್!
ಕೇಂದ್ರ ಸರ್ಕಾರದಿಂದ ಪ್ರಾರಂಭವಾಗಿರುವಂತಹ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income Scheme) ಅಂದರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯವನ್ನು ಹೂಡಿಕೆದಾರರಿಗೆ ನೀಡುವಂತಹ ಯೋಜನೆಯಾಗಿದೆ. ಇದು ನಿಮಗೆ 7.4% ಬಡ್ಡಿದರ ನೀಡುವಂತಹ ಯೋಜನೆಯಾಗಿದೆ. ಸಾವಿರ ರೂಪಾಯಿಗಳ ಮಿನಿಮಮ್ ಹೂಡಿಕೆಯ ಮೂಲಕ ನೀವು ಈ ಖಾತೆಯನ್ನು ತೆರೆಯಬಹುದಾಗಿದ್ದು, ಈ ಯೋಜನೆಯಲ್ಲಿ ಸಿಂಗಲ್ ಹಾಗೂ ಜಾಯಿಂಟ್ ಅಕೌಂಟ್ ಎನ್ನುವಂತಹ ಎರಡು ಖಾತೆಯನ್ನು ತಡೆಯುವಂತಹ ಅವಕಾಶಗಳನ್ನು ಪೋಸ್ಟ್ ಆಫೀಸ್ (Post Office) ನೀಡುತ್ತದೆ.
ಸಿಂಗಲ್ ಖಾತೆಯಲ್ಲಿ ಮ್ಯಾಕ್ಸಿಮಮ್ 9 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ ಜಾಯಿಂಟ್ ಖಾತೆಯಲ್ಲಿ ಗಂಡ ಹೆಂಡತಿ 15 ಲಕ್ಷ ರೂಪಾಯಿಗಳ ಮ್ಯಾಕ್ಸಿಮಮ್ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ ಯೋಜನೆ (Post Office Monthly Income Scheme) ಅಡಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಖಾತೆಯನ್ನು ತೆರೆಯಬಹುದಾಗಿದೆ.
ಒಂದು ವೇಳೆ ನೀವು ಜಾಯಿಂಟ್ ಅಕೌಂಟ್ ಓಪನ್ ಮಾಡಿ 15 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ, 7.4% ಬಡ್ಡಿ ದರದ ಲೆಕ್ಕಾಚಾರದಲ್ಲಿ ನಿಮಗೆ ಪ್ರತಿ ತಿಂಗಳು 9250 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಐದು ವರ್ಷ ಮೆಚುರಿಟಿ ಹೊಂದಿರುವಂತಹ ಯೋಜನೆಯಾಗಿದ್ದು ಒಂದು ವೇಳೆ ಹಣವನ್ನು ಹೂಡಿಕೆ ಮಾಡಿರುವಂತಹ ವ್ಯಕ್ತಿ ಮರಣ ಹೊಂದಿದರೆ ಕೂಡ ಠೇವಣಿ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಒಂದು ವೇಳೆ ಮೂರು ವರ್ಷಕ್ಕಿಂತ ಮುಂಚೆ ಖಾತೆಯಿಂದ ಹಣವನ್ನು ಪಡೆದುಕೊಂಡರೆ ಎರಡು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಮೂರು ವರ್ಷಗಳ ನಂತರ ಹಾಗೂ ಐದು ವರ್ಷಗಳ ಒಳಗೆ ಹಣವನ್ನು ಪಡೆದುಕೊಂಡರೆ ಒಂದು ಪ್ರತಿಶತ ಹಣವನ್ನು ಶುಲ್ಕ ರೂಪದಲ್ಲಿ ಪಾವತಿ ಮಾಡಬೇಕು.