ಸರ್ಕಾರ ಪರಿಚಯಿಸಿರುವ ಅಂತಹ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (PPF Scheme) ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ ಸರ್ಕಾರ ಉತ್ತಮ ಆಕರ್ಷಕ ಬಡ್ಡಿದರ ಹಾಗೂ ಸುರಕ್ಷಿತ ಹೂಡಿಕೆಯನ್ನು ಗ್ಯಾರಂಟಿ ನೀಡುತ್ತದೆ. ಇದೊಂದು ದೀರ್ಘಕಾಲಿಕ ಹೂಡಿಕೆಯ ಯೋಜನೆಯಾಗಿದ್ದು 15 ವರ್ಷಗಳ ಕಾಲ ಮೆಚುರಿಟಿ ಸಮಯವನ್ನು ಇದು ಹೊಂದಿರುತ್ತದೆ. ಇದನ್ನ ಮುಂದುವರೆಸುವಂತಹ ಇಚ್ಛೆಯನ್ನು ಹೊಂದಿದ್ದರೆ ಐದೈದು ವರ್ಷಗಳಿಗೆ ಮುಂದುವರಿಸುವಂತಹ ಅವಕಾಶವನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (PPF Scheme) ಅಡಿಯಲ್ಲಿ ನೀವು ಪ್ರತಿ ತಿಂಗಳಿಗೆ 500 ರೂಪಾಯಿಗಳ ಹೂಡಿಕೆಯಿಂದ ಪ್ರಾರಂಭ ಮಾಡಬಹುದಾಗಿದೆ. ಒಂದು ವರ್ಷದಲ್ಲಿ ನೀವು 1.5 ಲಕ್ಷ ರೂಪಾಯ್ಗಳವರೆಗೂ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮಾಡುವವರಿಗೆ 7.1 ಪ್ರತಿಶತ ಬಡ್ಡಿ ದರದ ರಿಟರ್ನ್ ಸಿಗಲಿದೆ. ಯಾವುದೇ ಅನುಮಾನವಿಲ್ಲದೆ ಈ ಯೋಜನೆಯ ಮೇಲೆ ಸಿಗುವಂತಹ ಬಡ್ಡಿದರ ಫಿಕ್ಸೆಡ್ ಡೆಪಾಸಿಟ್ (Fixed Deposit) ಸೇರಿದಂತೆ ಸಾಕಷ್ಟು ಯೋಜನೆಗಳಿಗೆ ಹೋಲಿಸಿದರೆ ಸಾಕಷ್ಟು ಹೆಚ್ಚಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ YONO ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ನೀವು ಪಿಪಿಎಫ್ ಯೋಜನೆ ಮೇಲೆ ಮಾಡುವಂತಹ ಹೂಡಿಕೆಯ ಮೇಲೆ ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳುತ್ತೀರಿ. ಪ್ರತಿ ತಿಂಗಳು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿ 2500 ರೂಪಾಯಿಗಳನ್ನು ಒಂದು ವರ್ಷಕ್ಕೆ 30,000 ರೂ.ಗಳನ್ನ ನೀವು ಒಟ್ಟಾರೆಯಾಗಿ ಹೂಡಿಕೆ ಮಾಡಿದಂತಾಗುತ್ತದೆ.
ಆ ಲೆಕ್ಕಾಚಾರದಲ್ಲಿ 15 ವರ್ಷಕ್ಕೆ 4.50 ಲಕ್ಷ ರೂಪಾಯಿಗಳ ಹೂಡಿಕೆ ಆಗುತ್ತದೆ. ಆ ಲೆಕ್ಕಾಚಾರದಲ್ಲಿ 7.1 ಪ್ರತಿಶತ ಬಡ್ಡಿದರವನ್ನು ಸೇರಿಸಿ 8,13,462 ರೂಪಾಯಿಗಳನ್ನು ನೀವು ಒಟ್ಟಾರೆಯಾಗಿ ಪಡೆದುಕೊಳ್ಳಲಿದ್ದೀರಿ. ಅಂದರೆ ಕೇವಲ ಬಡ್ಡಿ ರೂಪದಲ್ಲಿಯೇ 3.63 ಲಕ್ಷಗಳಿಗೂ ಹೆಚ್ಚಿನ ಹಣವನ್ನು ನೀವು ಪಡೆದುಕೊಂಡಂತಾಗುತ್ತದೆ. ಹೀಗಾಗಿ ಈ ಹೂಡಿಕೆಯಲ್ಲಿ ನೀವು ಹೆಚ್ಚು ಹಣವನ್ನು ಹೂಡಿಕೆ ಮಾಡಿದಷ್ಟು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.