ಇಂದು ಪ್ರತಿ ಮನೆಯಲ್ಲೂ ಕೂಡ ಗ್ಯಾಸ್ ಸಿಲಿಂಡರ್ (LPG Cylinder) ಅವಶ್ಯಕತೆ ಹೆಚ್ಚು ಇದೆ. ಹಿಂದೆ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಪದ್ದತಿ ಇತ್ತು. ಇಂದು ಹೊಗೆಯಿಂದಾಗುವ ಸಮಸ್ಯೆಗಳನ್ನ ಗಮನದಲ್ಲಿ ಇಟ್ಟು ಕೊಂಡು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿ ಮಾಡಿದ್ದು ಮಹಿಳೆಯರಿಗೆ ಈ ಯೋಜನೆ ಹೆಚ್ಚು ಆನುಕೂಲ ವಾಗುತ್ತಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯಡಿ, ದೇಶದ ಬಡ ವರ್ಗದ ಮಹಿಳೆಯರಿಗೆ ಉಜ್ವಲ ಯೋಜನೆ 3.0 ಅಡಿಯಲ್ಲಿ, ಮಹಿಳೆಯರಿಗೆ ಮೊದಲ ಬಾರಿಗೆ ಉಚಿತ ಗ್ಯಾಸ್ ಸಿಲಿಂಡರ್ (Free LPG Cylinder) ಮತ್ತು ಸ್ಟೌವ್ಗಳನ್ನು ನೀಡುತ್ತೆ
ಹಾಗೆಯೇ ರಾಜ್ಯದ ಮಹಿಳೆಯರಿಗೆ ಇದೀಗ ಕೇಂದ್ರ ಸರಕಾರವು ಗುಡ್ ನ್ಯೂಸ್ ಮಾಹಿತಿಯೊಂದನ್ನು ನೀಡಿದೆ. ಹೌದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರಕಾರವು ಈ ಗುಡ್ ನ್ಯೂಸ್ ನೀಡಿದ್ದು ಮಹಿಳೆಯರಿಗೆ ಅಡುಗೆ ಕೆಲಸ ಸುಲಭ ವಾಗಲು ಸರಕಾರ ಉಚಿತ ಗ್ಯಾಸ್ ಸಿಲಿಂಡರ್ (Free LPG Cylinder) ಅನ್ನು ನೀಡಲಿದೆ.ಗ್ರಾಮೀಣ ಮತ್ತು ಬಡ ಕುಟುಂಬದ ಮಹಿಳೆಯರಿಗೆ ಜನರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ಗಳನ್ನು ಒದಗಿಸುತ್ತಿವೆ. ಆದರೆ, ಈ ದೀಪಾವಳಿಗೆ ಉಚಿತವಾಗಿ ಒಂದು ಗ್ಯಾಸ್ ಸಿಲಿಂಡರ್ ನೀಡಲು ಉತ್ತರ ಪ್ರದೇಶ ಸರ್ಕಾರ ತಿರ್ಮಾನ ಮಾಡಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯ ಫಲಾನುಭವಿಗಳಿಗೆ ಉಚಿತವಾಗಿ LPG ಸಿಲಿಂಡರ್ (Free LPG Cylinder) ಗಳನ್ನು ಒದಗಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ. ಕಳೆದ ವರ್ಷವೂ ಸಹ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ದೀಪಾವಳಿಗೆ ಉಚಿತ ಎಲ್ಪಿಜಿ ಸಿಲಿಂಡರ್ ನೀಡಿತ್ತು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಈ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಕೇಂದ್ರ ಸರಕಾರವು ಆರಂಭ ಮಾಡಿತ್ತು. ಬಡ ಕುಟುಂಬಗಳ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್, ಒಲೆ ಸೇರಿದಂತೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡುವ ಜೊತೆಗೆ ಸರಕಾರ ಸಬ್ಸಿಡಿ ಕೂಡ ನೀಡಲಿದೆ. ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಕಡಿಮೆ ದರದ ಗ್ಯಾಸ್ ಸಿಲಿಂಡರ್ಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.