ದೇಶದ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ (PM Kisan Scheme) ಕೂಡ ಒಂದು. ಇಲ್ಲಿಯವರೆಗೆ ರೈತರ ಖಾತೆಗೆ ಸಾಕಷ್ಟು ಹಣವನ್ನು ಜಮಾ ಮಾಡಿರುವ ಕೇಂದ್ರ ಸರ್ಕಾರ, ಈಗ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ನವರಾತ್ರಿ ಹಬ್ಬದ ಪ್ರಯುಕ್ತ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಹಣ ಸೇರಲಿದೆ.
18ನೇ ಕಂತಿನ ಹಣ ಬಿಡುಗಡೆ!
ಈ ಬಗ್ಗೆ ಅಧಿಕೃತವಾಗಿ ಸರ್ಕಾರದಿಂದ ಘೋಷಣೆ ಮಾಡಲಾಗಿದ್ದು, ಅಕ್ಟೋಬರ್ 5, 2024 ರಿಂದ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು 9.5 ಕೋಟಿ ರೈತರ ಖಾತೆಗಳಿಗೆ 20,000 ಕೋಟಿ ಹಣ ಜಮಾ ಆಗಲಿದೆ.
ಕೆ ವೈ ಸಿ ಮಾಡಿಸಿಕೊಳ್ಳದಿದ್ದರೆ ಹಣ ಸಿಗುವುದಿಲ್ಲ!
ವಾರ್ಷಿಕವಾಗಿ 6,000ಗಳನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುವ ಪಿಎಂ ಕಿಸಾನ್ ಯೋಜನೆ (PM Kisan Scheme) ಈಗಾಗಲೇ 17 ಕಂತುಗಳ ಹಣ ರೈತರ ಬ್ಯಾಂಕ್ ಖಾತೆಯನ್ನು ತಲುಪಿದೆ. ಎರಡು ಹೆಕ್ಟೇರ್ ವರೆಗಿನ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಗೆ ಅರ್ಹರು. ಒಂದು ಮನೆಯಲ್ಲಿ ಒಬ್ಬ ರೈತನಿಗೆ ಮಾತ್ರ ಈ ಯೋಜನೆಯ ಹಣ ಸಿಗಲಿದೆ.
ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದ್ದು, ಕೆವೈಸಿ ಆಗದೆ ಇರುವ ಖಾತೆಗೆ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಓಟಿಪಿ ಆಧಾರಿತ ಇ-ಕೆವೈಸಿ, ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ ಫೇಸ್ ಆಧಾರಿತ ಇ-ಕೆವೈಸಿ ಈ ಮೂರು ವಿಧಾನಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.
ಅದರಲ್ಲೂ ಪಿಎಂ ಕಿಸಾನ್ ಯೋಜನೆ (PM Kisan Scheme) ಗೆ ಓಟಿಪಿ ಆಧಾರಿತ ಇ-ಕೆವೈಸಿ ಕಡ್ಡಾಯವಾಗಿದ್ದು, ನಿಮ್ಮ ಖಾತೆ ಇರುವ ಬ್ಯಾಂಕಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ ಕಿಸಾನ್ ಕಾರ್ನರ್ ವಿಭಾಗದಲ್ಲಿ ಇ-ಕೆವೈಸಿಯನ್ನು ಆಯ್ಕೆ ಮಾಡಿಕೊಂಡು, ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ದಾಖಲೆಯ ಪರಿಶೀಲನೆಗಾಗಿ ಓಟಿಪಿಯನ್ನು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಆ ಓಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ಕಾರದಿಂದ ಬಿಡುಗಡೆಯಾಗುವ ಹಣ ನಿಮ್ಮ ಖಾತೆಯನ್ನು ಸೇರುತ್ತದೆ.