ನೀವು ವಸತಿ ರಹಿತರಾಗಿದ್ದೀರಾ? ನಿಮಗೂ ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಆಸೆ ಇದೆಯಾ ಹಾಗಾದ್ರೆ ಯೋಚನೆ ಬೇಡ. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 (PM Awas Yojana 2.0) ಅಡಿಯಲ್ಲಿ ಸರ್ಕಾರ ಮಂಜೂರು ಮಾಡಿರುವ ಮನೆ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು. ಈಗಾಗಲೇ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು ಮನೆ ಅಗತ್ಯ ಇರುವವರು ತಕ್ಷಣ ಅರ್ಜಿ ಸಲ್ಲಿಸಿ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ 2.0!
ಸರ್ಕಾರ ಈಗಾಗಲೇ ಸಾಕಷ್ಟು ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದೆ. ಈಗ ಹೆಚ್ಚುವರಿಯಾಗಿ ಮೂರು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ತಿಂಗಳಿಗೆ 15000 ಆದಾಯ ಇರುವವರು ಕೂಡ ಇಂತಹ ಮನೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆನ್ಲೈನಲ್ಲಿ ಅರ್ಜಿ ಸಲ್ಲಿಸಿದ ಕೇವಲ 90 ದಿನಗಳಲ್ಲಿ ನೀವು ಅರ್ಹರಾಗಿದ್ದರೆ ನಿಮ್ಮ ಹೆಸರಿನಲ್ಲಿ ಮನೆ ಮಂಜೂರಾಗುತ್ತಿದೆ. 2015 ಜೂನ್ 25ರಂದು ಆರಂಭವಾದ ಈ ಯೋಜನೆ, ಇಲ್ಲಿಯವರೆಗೆ ಲಕ್ಷಾಂತರ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಇದಕ್ಕಾಗಿ ಈ ವರ್ಷ 10 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಯೋಜನೆಯ ನಿಯಮ ಬದಲಾವಣೆ!
ಈ ಹಿಂದೆ ತಿಂಗಳಿಗೆ 10,000 ವರೆಗಿನ ಸಂಬಳ ಪಡೆದುಕೊಳ್ಳುವವರು ಈ ಯೋಜನೆಯ ಮೂಲಕ ಮನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಈಗ ಈ ಮಿತಿಯನ್ನು 15,000 ರೂಪಾಯಿಗಳಿಗೆ ಏರಿಸಲಾಗಿದೆ. ಹಾಗಾಗಿ ಮಧ್ಯಮ ವರ್ಗದ ಕುಟುಂಬದವರು ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಮನೆಯಲ್ಲಿ ಫ್ರಿಡ್ಜ್ ಅಥವಾ ದ್ವಿಚಕ್ರ ವಾಹನ ಹೊಂದಿರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಬಹಿರಂಗ ಸಭೆಗಳ ಮೂಲಕ ತಿಳಿಸಲಾಗುವುದು. ಇನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಯನ್ನು ನಡೆಸಿ ಕೇವಲ 90 ದಿನಗಳ ಒಳಗೆ ಮನೆ ಮಂಜೂರಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ.
ಇಂಥವರು ಅರ್ಜಿ ಸಲ್ಲಿಸಬಹುದು!
- ಮಹಿಳೆಯರು ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಕುಟುಂಬದಲ್ಲಿ ಕೇವಲ ಪುರುಷ ಸದಸ್ಯರಿದ್ದರೆ ಅವರು ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 70 ವರ್ಷಕ್ಕಿಂತ ಕಡಿಮೆ ಇರಬೇಕು.
- ಕುಟುಂಬದಲ್ಲಿ ಇರುವ ಯಾವುದೇ ಸದಸ್ಯರ ಹೆಸರಿನಲ್ಲಿ ಸ್ವಂತ ಮನೆ ಇರಬಾರದು
- ಈ ಹಿಂದೆ ಸರ್ಕಾರಿ ವಸತಿ ಯೋಜನೆಯ ಲಾಭ ಪಡೆದುಕೊಂಡಿರುವವರು ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PM Awas Yojana) ಪ್ರಯೋಜನ ಪಡೆದುಕೊಳ್ಳಲು ನಾಲ್ಕು ವರ್ಗಗಳನ್ನು ವಿಂಗಡಿಸಲಾಗಿದ್ದು, ಅವುಗಳನ್ನು EWS, LIG, MIG – 1 ಮತ್ತು MIG -2 ಎಂದು ವರ್ಗೀಕರಿಸಲಾಗಿದೆ. ಅಂದರೆ ಅತ್ಯಂತ ಕಡಿಮೆ ಆದಾಯ ಪಡೆದುಕೊಳ್ಳುವವರಿಂದ ಮಧ್ಯಮ ವರ್ಗದ ಕುಟುಂಬದವರು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ!
PMAY ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ pmaymis.gov.in ಗೆ ಭೇಟಿ ನೀಡಿ ಅಲ್ಲಿ ನೀಡಲಾಗಿರುವ ಅಪ್ಲಿಕೇಶನ್ ನಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ. ಬಳಿಕ ಹತ್ತಿರದ CSC ಕೇಂದ್ರಕ್ಕೆ ಅಥವಾ ಬ್ಯಾಂಕಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಅರ್ಜಿ ನಮೂನೆಯ ಜೊತೆಗೆ ಸಲ್ಲಿಸಿ. ನೀವು ನೀಡಿರುವ ಅಪ್ಲಿಕೇಶನ್ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದ ನಂತರ ನೀವು ಅರ್ಹರು ಕೆಲವು ಎನ್ನುವುದನ್ನು ಡಿಸೈಡ್ ಮಾಡಲಾಗುತ್ತದೆ. ಒಟ್ಟಿನಲ್ಲಿ ಸೂರು ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿ ಕೊಡುವ ಅತ್ಯಂತ ಉಪಯುಕ್ತ ಯೋಜನೆ ಇದಾಗಿದೆ.