ಸದ್ಯದ ಮಟ್ಟಿಗೆ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಲೀಡಿಂಗ್ ಕಂಪನಿಗಳ ಆಗಿರುವಂತಹ Jio ಹಾಗೂ Airtel ಎರಡು ಸಂಸ್ಥೆಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಿರೋದು, ಸಹಜವಾಗಿಯೇ ಆ ಸಂಸ್ಥೆಗಳ ಗ್ರಾಹಕರು ಬಿಎಸ್ಎನ್ಎಲ್ ಗೆ ಮುಖ ಮಾಡುವಂತೆ ಮಾಡಿದೆ. ಭಾರತ ಸರ್ಕಾರದ ಅಧೀನದಲ್ಲಿರುವಂತಹ BSNL ಸಂಸ್ಥೆ ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನ ಸಾಮಾನ್ಯ ಟೆಲಿಕಾಂ ಇಂಡಸ್ಟ್ರಿಯ ಕಂಪನಿಗಳ ಬೆಲೆಗೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಸೇವೆಗಳನ್ನು ಒದಗಿಸುವಂತಹ ಪ್ಲಾನಿಂಗ್ ಜಾರಿಗೆ ತಂದಿದೆ. ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ಒಂದು ಅತ್ಯಂತ ಕಡಿಮೆ ಬೆಲೆಯ ಹಾಗೂ ಹೆಚ್ಚಿನ ವ್ಯಾಲ್ಯೂ ನೀಡುವಂತಹ ರಿಚಾರ್ಜ್ ಪ್ಲಾನಿನ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.
ಬಿಎಸ್ಎನ್ಎಲ್ ಸಂಸ್ಥೆಯ 345 ರೂಪಾಯಿಗಳ ರಿಚಾರ್ಜ್ ಪ್ಲಾನ್!
BSNL ಸಂಸ್ಥೆ ಹೊಸದಾಗಿ ಪರಿಚಯಿಸಿರುವಂತಹ 345 ರೂಪಾಯಿಗಳ ರಿಚಾರ್ಜ್ ಪ್ಲಾನ್ 60 ದಿನಗಳ ವ್ಯಾಲಿಡಿಟಿ ಜೊತೆಗೆ ಗ್ರಾಹಕರಿಗೆ ದೊರಕುತ್ತಿದೆ. 60 ದಿನಗಳವರೆಗೆ ಪ್ರತಿದಿನ ಒಂದು ಜಿಬಿ ಇಂಟರ್ನೆಟ್ ಡೇಟಾ ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಗ್ರಾಹಕರಿಗೆ ನೀಡುತ್ತಿದೆ. ಈ ಲೆಕ್ಕಾಚಾರದಲ್ಲಿ 60 ದಿನಗಳ ವರೆಗೆ ನೀವು ಈ ಸೇವೆಗಳನ್ನು ಪ್ರತಿದಿನದ ಖರ್ಚಿನಲ್ಲಿ ನೋಡುವುದಾದರೆ ಕೇವಲ 5.75 ರೂಪಾಯಿಗಳಲ್ಲಿ ಪಡೆದುಕೊಳ್ಳುತ್ತಿದ್ದೀರಿ. ಪ್ರತಿದಿನದ ಚಾಕಲೇಟ್ ಖರೀದಿಸುವಂತಹ ಖರ್ಚುಗಿಂತಲೂ ಕೂಡ ಇದು ಕಡಿಮೆಯಾಗಿದೆ.
ಹೆಚ್ಚಾಗುತ್ತಿರುವ ಅಂತಹ ಗ್ರಾಹಕರ ಕಾರಣದಿಂದಾಗಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡುವ ನಿಟ್ಟಿನಲ್ಲಿ BSNL ಸಂಸ್ಥೆ 4ಜಿ ಸೇವೆಯನ್ನು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನವನ್ನು ಪ್ರಾರಂಭಿಸಿದೆ.
ವಿಶೇಷವಾಗಿ Jio ಹಾಗೂ Airtel ನಂತಹ ದೈತ್ಯ ಟೆಲಿಕಾಂ ಕಂಪನಿಗಳ ಜೊತೆಗೆ ಕಾಂಪಿಟೇಶನ್ ಇರುವಾಗ ಬಿಎಸ್ಎನ್ಎಲ್ ಸಂಸ್ಥೆ ಇಂತಹ ವೇಗದ ಇಂಟರ್ನೆಟ್ ಸೇವೆಗಳನ್ನ ಆದಷ್ಟು ಶೀಘ್ರದಲ್ಲಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಹೇಗಿದೆ ಇಂಟರ್ನೆಟ್ ಸೇವೆಯನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಟಾಟಾ ಸಂಸ್ಥೆಯ ಟೆಕ್ನಾಲಜಿಯ ಜೊತೆಗೆ ಬಿಎಸ್ಎನ್ಎಲ್ ಸಂಸ್ಥೆ ಕೈಜೋಡಿಸಿರುವುದು ಕೂಡ ಈ ಹಿಂದೆ ಕೇಳಿ ಬಂದಿತ್ತು. ಹೀಗಾಗಿ ಬಿಎಸ್ಎನ್ಎಲ್ ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಜೊತೆಗೆ ವೇಗದ ಇಂಟರ್ನೆಟ್ ಸೇವೆಗಳನ್ನು ಕೂಡ ಅತಿ ಶೀಘ್ರದಲ್ಲಿ ಪಡೆಯುವಂತಹ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಹಿಂದೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕಿಂಗ್ ಆಗಿ ಮೆರೆದಿದ್ದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಗತಕಾಲದ ವೈಭವಕ್ಕೆ ಮತ್ತೆ ಮರಳಲಿದೆ.