ಕೆಲವು ತಿಂಗಳುಗಳ ಹಿಂದೆ ನಿಮಗೆಲ್ಲರಿಗೂ ತಿಳಿದಿರಬಹುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2,000 ಮುಖಬೆಲೆಯ ನೋಟಿನ ನಿಷೇಧವನ್ನು ಜಾರಿಗೊಳಿಸಿ ನೋಟನ್ನು ಜನರಿಂದ ಹಿಂಪಡೆದುಕೊಂಡಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಮಾಹಿತಿಗಳ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ (Rs 200 Note) ಮುಖಬೆಲೆಯನ್ನು ಹೊಂದಿರುವಂತಹ ನೋಟುಗಳನ್ನು ಕೂಡ ವಾಪಸ್ ಪಡೆದುಕೊಳ್ಳುವಂತಹ ನಿರ್ಧಾರ ಮಾಡಿದಂತಿದೆ ಎಂಬುದಾಗಿ ತಿಳಿದುಬಂದಿದೆ. ಇಷ್ಟಕ್ಕೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಿಚಾರದ ಬಗ್ಗೆ ಅಧಿಕೃತವಾಗಿ ಯಾವ ನಿಲುವನ್ನು ಹೊಂದಿದೆ ಅನ್ನೋದು ಇನ್ನು ಕೂಡ ಜನರಿಗೆ ಅಧಿಕೃತವಾಗಿ ತಿಳಿದುಬಂದಿಲ್ಲ.
ಮಾಹಿತಿಗಳ ಪ್ರಕಾರ 200 ರೂಪಾಯಿ ಮುಖಬೆಲೆಯ ನೋಟುಗಳು (Rs 200 Notes) ಮಾರುಕಟ್ಟೆಯಲ್ಲಿ 137 ಕೋಟಿ ರೂಪಾಯಿ ಮೌಲ್ಯ ದೃಷ್ಟಿ ತೆಗೆದು ಹಾಕಲಾಗಿದೆ. ಹೀಗಾಗಿ ನೋಟುಗಳನ್ನು ಮಾರುಕಟ್ಟೆಯಿಂದ ತೆಗೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವಂತಹ ಸುದ್ದಿಗಳು ಹೆಚ್ಚಾಗುವುದಕ್ಕೆ ಇದು ಮೂಲ ಕಾರಣವಾಗಿದೆ. ಆದರೆ ಇಷ್ಟು ನೋಟುಗಳನ್ನು ಮಾರುಕಟ್ಟೆಯಿಂದ ತೆಗೆಯುವುದಕ್ಕೆ ನಿಜವಾದ ಕಾರಣ ಏನು ಅನ್ನೋದನ್ನ ಕೂಡ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ.
ಇಷ್ಟು ದೊಡ್ಡ ಮಟ್ಟದ ನೋಟುಗಳನ್ನು ಮಾರುಕಟ್ಟೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದುಕೊಂಡಿರುವುದು ನಿಜ ಎಂಬುದಾಗಿ ತಿಳಿದು ಬಂದಿದ್ದು, ಇದರ ಹಿಂದಿನ ಕಾರಣ ನೋಟುಗಳನ್ನು ರದ್ದುಗೊಳಿಸುವುದಲ್ಲ. ಬದಲಾಗಿ ಮಾರುಕಟ್ಟೆಯಲ್ಲಿರುವಂತಹ 200 ರೂಪಾಯಿ (Rs 200 Note) ಮುಖಬೆಲೆಯ ಹರಿದಿರುವ ಹಾಗೂ ಹಾಳಾಗಿರುವಂತಹ ನೋಟುಗಳನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆ ಇದಾಗಿದೆ. ಇದರಲ್ಲಿ ಕೆಲವು ನೋಟಗಳು ಹರಿದು ಹೋಗಿದ್ರೆ, ಇನ್ನು ಕೆಲವು ನೋಟುಗಳು ಕೊಳಕಾಗಿವೆ ಹಾಗೂ ಕೆಲವೊಂದು ನೋಟುಗಳ ಮೇಲೆ ಬರೆಯಲಾಗಿದೆ.
ಇಂತಹ ಕ್ವಾಲಿಟಿ ಕಡಿಮೆ ಆಗಿರುವಂತಹ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪಡೆದುಕೊಳ್ಳುವಂತಹ ನಿರ್ಧಾರವನ್ನು ಮಾಡಿ ಈ ಪ್ರಕ್ರಿಯೆಗೆ ಕೈ ಹಾಕಿ. ಇದೇ ರೀತಿಯಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಕೂಡ ಇದೇ ಪರಿಸ್ಥಿತಿಯಲ್ಲಿ ಇದ್ದು 633 ಕೋಟಿ ರೂಪಾಯಿ ಮೌಲ್ಯದ 500 ರೂಪಾಯಿ ಮುಖದಲ್ಲಿ ನೋಟುಗಳನ್ನು ಕೂಡ ಈ ಕಾರಣಕ್ಕಾಗಿ ವಾಪಸ್ ಹಿಂಪಡೆದುಕೊಳ್ಳಲಾಗಿದೆ. ಹೀಗಾಗಿ ನೋಟುಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನುವ ಸುದ್ದಿಯನ್ನು ನೀವು ನಂಬಬೇಕಾದ ಅಗತ್ಯವಿಲ್ಲ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.