ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ನೋಟ್ ಅನ್ನು ಪ್ರಿಂಟ್ ಮಾಡುವಂತ ಹಾಗೂ ಅರ್ಥ ವ್ಯವಸ್ಥೆಯನ್ನು ಕಂಟ್ರೋಲ್ ಮಾಡುವಂತಹ ಅಧಿಕಾರವನ್ನು ಹೊಂದಿದೆ. ಇತ್ತೀಚಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 500 ರೂಪಾಯಿ ನೋಟಿನ (500 Rupee Note) ಬಗ್ಗೆ ಒಂದು ಪ್ರಮುಖ ಗೈಡ್ ಲೈನ್ ನ್ನು ಜಾರಿಗೆ ತಂದಿದ್ದು ಮಾರುಕಟ್ಟೆಯಲ್ಲಿ ಇರುವಂತಹ ನಕಲಿ ನೋಟುಗಳನ್ನು ನಿವಾರಿಸುವ ವಿಚಾರದಲ್ಲಿ ಇದು ಪ್ರಮುಖವಾದಂತಹ ಅಪ್ಡೇಟ್ ಆಗಿದೆ. ಸಾಮಾನ್ಯ ನಾಗರಿಕರು ಈ ಗೈಡ್ ಲೈನ್ ಅನ್ನು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
ಆರ್ ಬಿ ಐ ನ ಹೊಸ ಗೈಡ್ ಲೈನ್ ನ ಉದ್ದೇಶ!
- ನಕಲಿ ನೋಟುಗಳ ಸಂಚಲನವನ್ನು ನಿಲ್ಲಿಸುವುದು ಹಾಗೂ ಅಸಲಿ ನೋಟುಗಳ ಬಗ್ಗೆ ಸಾಮಾನ್ಯ ನಾಗರಿಕರಿಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುವುದು.
- ಈ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಆದಷ್ಟು ಸಮಸ್ಯೆಗಳಿಂದ ಮುಕ್ತವಾಗಿ ಸುವಂತಹ ನಿರ್ಧಾರ ಮಾಡಲಾಗಿದೆ.
ಕಂಡುಹಿಡಿಯುವುದು ಹೀಗೆ!
- ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗಾಂಧೀಜಿಯವರ ವಾಟರ್ ಮಾರ್ಕ್ ಈ ನೋಟಿನಲ್ಲಿ ಇರುತ್ತದೆ ಹಾಗೂ ಇದನ್ನು ಬೆಳಕಿಗೆ ಹಿಡಿದರೆ ಸ್ಪಷ್ಟವಾಗಿ ಕಾಣುತ್ತದೆ.
- ನೋಟಿನಲ್ಲಿ ಅಳವಡಿಸಲಾಗಿರುವಂತಹ ನೀಲಿ ಪಟ್ಟಿಯನ್ನು ಕೂಡ ನೀವು ಗಮನಿಸಬಹುದಾಗಿದ್ದು ಇದು ಕೂಡ ನೋಟು ಅಸಲಿ ಎನ್ನುವುದಕ್ಕೆ ಸೂಚಕವಾಗಿದೆ.
- ಇನ್ನು ಈ ನೋಟಿನಲ್ಲಿ ಬರೆದಿರುವಂತಹ 500 ಎನ್ನುವಂತಹ ಅಕ್ಷರ ಬೆಳಕಿಗೆ ಹಿಡಿದಾಗ ಹಸಿರಿನಿಂದ ನೀಲಿ ಬಣ್ಣಕ್ಕೆ ಪರಿವರ್ತನೆ ಆಗುತ್ತದೆ.
- ನಕಲಿ ನೋಟುಗಳಲ್ಲಿ ನೀವು ಭಾರತ ಹಾಗೂ ಇಂಡಿಯಾ ಎನ್ನುವಂತಹ ಅಕ್ಷರಗಳನ್ನು ನೀವು ಕಾಣಬಹುದಾಗಿದೆ ಆದರೆ ಅಸಲಿ ನೋಟುಗಳಲ್ಲಿ ಇದನ್ನ ಅತ್ಯಂತ ಸೂಕ್ಷ್ಮವಾಗಿ ಬರೆದಿರಲಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವಂತಹ ಈಗ ಗೈಡ್ ಲೈನ್ ಗಳನ್ನು ಸರಿಯಾದ ರೀತಿಯಲ್ಲಿ ಅರಿತುಕೊಳ್ಳುವ ಮೂಲಕ ನೀವು ಅಸಲಿ ಹಾಗೂ ನಕಲಿ ನೋಟುಗಳ ಪರಿಚಯವನ್ನು ತಿಳಿದುಕೊಳ್ಳಬಹುದಾಗಿದೆ.