ಹೆದ್ದಾರಿಯಲ್ಲಿ ಚಲಿಸುವಾಗ ನಿಮ್ಮ ವಾಹನಗಳ ಮೇಲೆ ಇರುವಂತಹ ಫಾಸ್ಟ್ ಟ್ಯಾಗ್ (FASTag) ಸಿಸ್ಟಮ್ ಮೂಲಕ ಟೋಲ್ ಟ್ಯಾಕ್ಸ್ ಅನ್ನು ನೀವು ಕಟ್ಟುತ್ತೀರಿ. ಆದರೆ ಕೆಲವೊಮ್ಮೆ ಕಾರಿನ ಮೇಲೆ ಫಾಸ್ಟ್ ಟ್ಯಾಗ್ ಇರೋದಿಲ್ಲ ಹಾಗೂ ಕೆಲವೊಮ್ಮೆ ಇದ್ದರೂ ಕೂಡ ಅದರಲ್ಲಿ ಬ್ಯಾಲೆನ್ಸ್ ಇರೋದಿಲ್ಲ. ಆ ಸಂದರ್ಭದಲ್ಲಿ ನೀವು ಡಬಲ್ ಟ್ಯಾಕ್ಸ್ ಕಟ್ಟಬೇಕಾದಂತಹ ಪ್ರಮಯ ಎದುರಾಗಬಹುದು. ಇದೊಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಡಬಲ್ ಟ್ಯಾಕ್ಸ್ (Double Tax) ಕಟ್ಟಬೇಕಾದ ಅಗತ್ಯ ಇರುವುದಿಲ್ಲ ಕೇವಲ ಟೋಲ್ ಶುಲ್ಕವನ್ನು ಮಾತ್ರ ಕಟ್ಟಿದರೆ ಸಾಕಾಗಿರುತ್ತದೆ.
ಫಾಸ್ಟ್ ಟ್ಯಾಗ್ (FASTag) ಸ್ಟಿಕರ್ ಅನ್ನು ಕೂಡ ನೀವು ಕಾರಿನ ವಿಂಡ್ ಶೀಲ್ಡ್ ಮೇಲೆ ಅಳವಡಿಸಬೇಕಾಗಿರುತ್ತದೆ. ಒಂದು ವೇಳೆ ಇದರಲ್ಲಿ ಏನಾದರೂ ಸಮಸ್ಯೆ ಇದೆ ಅಂತ ಅಂದ್ರೆ ಅದಕ್ಕಾಗಿ ನೀವು ಪ್ರಿಪೇಯ್ಡ್ ಟಚ್ ಅಂಡ್ ಗೋ ಕಾರ್ಡ್ ಅನ್ನು ಬಳಸುವ ಮೂಲಕ ಟೋಲ್ ಟ್ಯಾಕ್ಸ್ (Toll Tax) ಅನ್ನು ಪಾವತಿ ಮಾಡಬಹುದಾಗಿದೆ.
ಮುಂಚೆ ಟೋಲ್ ಗಳಲ್ಲಿ ಟೋಲ್ ಟ್ಯಾಕ್ಸ್ ಕಟ್ಟಿರೋದಕ್ಕೆ ರಸೀದಿ ನೀಡಲಾಗುತ್ತಿತ್ತು ಹಾಗೂ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಇದರಿಂದಾಗಿ ವಾಹನಗಳ ದೊಡ್ಡ ಲೈನ್ ನಿಲ್ಲಬೇಕಾಗಿ ಬರ್ತಾ ಇತ್ತು. ಫಾಸ್ಟ್ ಟ್ಯಾಗ್ ಸಿಸ್ಟಮ್ ನಂತರ ಈ ಸಮಸ್ಯೆ ಬಗೆಹರಿದಿತ್ತು. ಪ್ರೀಪೇಯ್ಡ್ ಟಚ್ ಅಂಡ್ ಗೋ ಕಾರ್ಡ್ ಅನ್ನು ಬಳಸುವ ಮೂಲಕ ಸಿಂಗಲ್ ಟ್ಯಾಕ್ಸ್ ಅನ್ನು ಕಟ್ಟಿ ನೀವು ಮುಂದೆ ಹೋಗಬಹುದಾಗಿದೆ. ಇರುವಂತಹ ಪಿಒಎಸ್ ಮಷೀನ್ ಗಳ ಬಳಿ ಪಡೆದುಕೊಳ್ಳಬಹುದಾಗಿದೆ.
ಯಾವುದೇ ವಾಹನಗಳ ಮೇಲೆ ಫಾಸ್ಟ್ ಟ್ಯಾಗ್ (FASTag) ಸ್ಟಿಕರ್ ಇಲ್ಲದೆ ಹೋದಲ್ಲಿ ಪ್ರಿಪೇಯ್ಡ್ ಟಚ್ ಆಂಡ್ ಗೋ ಕಾರ್ಡ್ ಅನ್ನು ಟೋಲ್ ಪ್ಲಾಜಾ ಗಳ ಬಳಿ ಇರುವಂತಹ ಈ ಕಾರ್ಡುಗಳನ್ನು ವಿತರಣೆ ಮಾಡುವಂತಹ ಸ್ಥಳಕ್ಕೆ ಹೋಗಿ ಪಡೆದುಕೊಂಡು ಯಾವುದೇ ರೀತಿಯ ಡಬಲ್ ಟ್ಯಾಕ್ಸ್ ಅನ್ನು ನೀಡದೆ ಕೇವಲ ಸಿಂಗಲ್ ಟ್ಯಾಕ್ಸ್ ಮೂಲಕ ಟೋನ್ ಪ್ಲಾಜಾ ದಿಂದ ಮುಂದೆ ಹೋಗಬಹುದಾಗಿದೆ. ಒಂದು ವೇಳೆ ನಿಮ್ಮ ವಾಹನದ ವಿಂಡ್ ಶೀಲ್ಡ್ ಮೇಲೆ ಫಾಸ್ಟ್ ಟ್ಯಾಗ್ ಇಲ್ಲದೆ ಹೋದಲ್ಲಿ ಅಥವಾ ಅದರಲ್ಲಿ ಬ್ಯಾಲೆನ್ಸ್ ಇಲ್ಲದೆ ಇದ್ದರೆ ಇನ್ಮುಂದೆ ಡಬಲ್ ಟ್ಯಾಕ್ಸ್ ಕಟ್ಟಬೇಕಾದಂತಹ ತಲೆಬಿಸಿ ಇರೋದಿಲ್ಲ.