ಭಾರತದ ರೈಲ್ವೆ ನೆಟ್ವರ್ಕ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ನಾಲ್ಕು ಕಡೆಗಳಲ್ಲಿ ಉದ್ದಗಲಕ್ಕೂ ಹರಡಿಕೊಂಡಿದೆ. ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವಂತಹ ದೇಶಗಳಲ್ಲಿ ಭಾರತ ಕೂಡ ಕಾಣಿಸಿಕೊಳ್ಳುತ್ತದೆ.
ನಮ್ಮ ಭಾರತೀಯರು ಪ್ರತಿದಿನದ ಪ್ರಾಣದಲ್ಲಿ ರೈಲ್ವೆ ಪ್ರಯಾಣವನ್ನು ಪ್ರಮುಖವಾಗಿ ನೆಚ್ಚಿಕೊಂಡಿದ್ದು ಅದರಲ್ಲೂ ವಿಶೇಷವಾಗಿ ರೈಲ್ವೆ ಇಲಾಖೆ ಕೂಡ ಭಾರತೀಯ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ರೈಲ್ವೆ ಪ್ರಯಾಣ ಇನ್ನಷ್ಟು ಉತ್ತಮವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರ ವಿಚಾರದಲ್ಲಿ ಹೊಸ ಯೋಜನೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದ್ದು, ವರಿಷ್ಠ ನಾಗರಿಕರ ರೈಲ್ವೆ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.
ಭಾರತೀಯ ರೈಲ್ವೆ ಇಲಾಖೆ (Indian Railways) ಹಿರಿಯ ನಾಗರಿಕರ ಟಿಕೆಟ್ ದರ (Senior Citizen Ticket Price) ದ ಮೇಲೆ 50% ರಿಯಾಯಿತಿಯನ್ನು ನೀಡುವಂತಹ ಯೋಜನೆಯನ್ನು ಮತ್ತೆ ಜಾರಿಗೆ ತರುವಂತಹ ಯೋಚನೆ ಮಾಡುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಈ ಯೋಜನೆಯನ್ನು ಬಂದ್ ಮಾಡಲಾಗಿತ್ತು. ಮತ್ತೆ ಈ ಯೋಜನೆಯನ್ನು ಜಾರಿಗೆ ತರ್ತಾ ಇರೋದು ವರಿಷ್ಠ ನಾಗರಿಕರಿಗೆ ಸಾಕಷ್ಟು ರೀತಿಯಲ್ಲಿ ಲಾಭದಾಯಕವಾಗಿರಲಿದೆ.
ಈ ವಿಚಾರದ ಬಗ್ಗೆ ಈ ಹಿಂದೆ ಮಾತನಾಡಿರುವಂತಹ ಕೇಂದ್ರ ರೈಲ್ವೆ ಸಚಿವ ಆಗಿರುವ ಅಶ್ವಿನಿ ವೈಷ್ಣವ್ ರವರು ಸೀನಿಯರ್ ಸಿಟಿಜನ್ (Senior Citizen) ಗಳಿಗೆ ನೀಡಲಾಗುವಂತಹ ರೈಲ್ವೆ ಟಿಕೆಟ್ ದರದ ಮೇಲಿನ ರಿಯಾಯಿತಿಯನ್ನು ಮತ್ತೆ ಪುನರ್ ಸ್ಥಾಪಿಸುವ ಮಾತನ್ನು ಆಡಿದ್ದಾರೆ. ಆದರೆ ಸದ್ಯಕ್ಕೆ ರೈಲ್ವೆ ಇಲಾಖೆಯ ಕೆಲಸಗಾರರಿಗೆ ನೀಡುವಂತಹ ಸಂಬಳ ಹಾಗೂ ಪೆನ್ಷನ್ ಹಣ ಸೇರಿದಂತೆ ಇತರ ಖರ್ಚುಗಳು ಹೆಚ್ಚಾಗಿರುವ ಕಾರಣದಿಂದಾಗಿ ಈ ಯೋಜನೆಯನ್ನು ಮುಂದೂಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ನೀಡಲಾಗಿದೆ.
ಈ ಹಿಂದೆ 60 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಟಿಕೆಟ್ ದರದ ಮೇಲೆ 40% ರಿಯಾಯಿತಿ ಹಾಗೂ 58 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕ ಮಹಿಳೆಯರಿಗೆ ಟಿಕೆಟ್ ದರದ ಮೇಲೆ 50% ರಿಯಾಯಿತಿಯನ್ನು ರೈಲ್ವೆ ಇಲಾಖೆ ನೀಡುತ್ತಿತ್ತು. ಮತ್ತೆ ಇದೆ ನಿಯಮ ಜಾರಿಗೆ ಬಂದರೆ ಹಿರಿಯ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಬಡ ಹಾಗೂ ಮಾಧ್ಯಮ ವರ್ಗದ ಹಿರಿಯ ನಾಗರಿಕರಿಗೆ ಪ್ರಯಾಣ ಸುಗಮವಾಗಿ ಸಾಗಲಿದೆ.