ಭಾರತ ದೇಶದ ರೈಲ್ವೆ ನೆಟ್ವರ್ಕ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತೆ ಹಾಗೂ ಈಗ ಇರುವಂತಹ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಜನರು ರೈಲ್ವೆ ಪ್ರಯಾಣದ ಮೂಲಕ ಸಾಗರೋಪಾದಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಟಿಕೆಟ್ಗಳನ್ನ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳಬೇಕಾಗಿರುತ್ತದೆ. ಅದರ ಜೊತೆಗೆ ರೈಲ್ವೆ ಪ್ರಯಾಣದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದ್ದು ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎನ್ನುವಂತಹ ವಿಚಾರದ ಬಗ್ಗೆ ಕೂಡ ನೀವು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ರೈಲ್ವೆ ಪ್ರಯಾಣದಲ್ಲಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದ್ದು, ಅವುಗಳನ್ನು ತೆಗೆದುಕೊಂಡು ಹೋದರೆ ನೀವು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ.
ಈ ವಸ್ತುಗಳನ್ನು ರೈಲ್ವೆ ಪ್ರಯಾಣದಲ್ಲಿ ತೆಗೆದುಕೊಂಡು ಹೋಗಬಾರದು!
ರೈಲ್ವೆ ಪ್ರಯಾಣದ ಸಂದರ್ಭದಲ್ಲಿ,
- ಸ್ಟೌ
- ಗ್ಯಾಸ್ ಸಿಲಿಂಡರ್
- ಹೊತ್ತಿಕೊಳ್ಳುವಂತಹ ಕೆಮಿಕಲ್ಗಳು
- ಪಟಾಕಿಗಳು
- ಆಸಿಡ್
- ಚರ್ಮ
- ಆಯಿಲ್ ಅಥವಾ ಗ್ರೀಸ್ ಪ್ಯಾಕೆಟ್ ಗಳು
ಇಂತಹ ವಸ್ತುಗಳನ್ನು ಹಾಗೂ ಅಪಾಯಕಾರಿ ಆಯುಧಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ.
ರೈಲ್ವೇ ನಿಯಮಗಳ ಪ್ರಕಾರ 20 ಕೆಜಿಯವರೆಗೆ ಪ್ಯಾಕ್ ಆಗಿರುವಂತಹ ತುಪ್ಪವನ್ನು ತೆಗೆದುಕೊಂಡು ಹೋಗಬಹುದು ಆದರೆ ಕಡ್ಡಾಯವಾಗಿ ಪ್ಯಾಕ್ ಆಗಿರಲೇಬೇಕು.
ಒಂದು ವೇಳೆ ರೈಲ್ವೆ ನಿಯಮಗಳ (Indian Railway Rules) ಪ್ರಕಾರ ನಿಷೇಧ ಮಾಡಲಾಗಿರುವಂತಹ ವಸ್ತುಗಳನ್ನು ನೀವು ರೈಲ್ವೆ ಪ್ರಯಾಣಿಕ ಸಂದರ್ಭದಲ್ಲಿ ಜೊತೆಯಾಗಿ ತೆಗೆದುಕೊಂಡು ಹೋದರೆ ರೈಲ್ವೆ ನಿಯಮಗಳ ಕಾಯ್ದೆ 164 ಪ್ರಕಾರ ನೀವು ಸಾವಿರ ರೂಪಾಯಿಗಳ ದಂಡವನ್ನು ಕಟ್ಟಬೇಕಾಗಿ ಬರಬಹುದಾಗಿದೆ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗಿ ಬರಬಹುದಾಗಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ರೈಲ್ವೆ ಪ್ರಯಾಣ ಮಾಡುವಾಗ ಈ ರೀತಿಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ.