ನಮ್ಮ ಕಷ್ಟ ಕಾಲಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ನಾವು ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ (Cash Deposit) ಮಾಡುತ್ತೇವೆ. ಮತ್ತು ನಮ್ಮ ಅಗತ್ಯಕ್ಕೆ ತಕ್ಕಂತೆ ಬ್ಯಾಂಕ್ನಿಂದ ಹಣವನ್ನು ಹಿಂಪಡೆಯುತ್ತೇವೆ. ಅಥವಾ ಹತ್ತಿರದ ಎಟಿಎಂಗೆ ಹೋಗಿ ಹಣ ವಿಥ್ ಡ್ರಾ (Cash Withdraw) ಮಾಡುತ್ತೇವೆ. ಆದರೆ ಪ್ರತಿದಿನ ನೀವು ಎಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದು ಎನ್ನುವುದಕ್ಕೂ ಅದರದ್ದೆ ಆದ ನಿಯಮಗಳಿವೆ.
ಉದಾಹರಣೆಗೆ ಕೆಲವು ಬ್ಯಾಂಕ್ ಎಟಿಎಂನಲ್ಲಿ 40,000 ವಿಥ್ ಡ್ರಾ ಮಾಡುವುದು ಒಂದು ದಿನದ ಮಿತಿಯಾಗಿದ್ದರೆ, ಇನ್ನೂ ಕೆಲವು ಬ್ಯಾಂಕ್ ಐವತ್ತು ಸಾವಿರದವರೆಗೆ ಅಲೋ ಮಾಡಬಹುದು. ಇನ್ನು ಹೆಚ್ಚಿನ ಹಣ ಬೇಕಾಗಿದ್ದಲ್ಲಿ ನಾವು ಬ್ಯಾಂಕಿಗೆ ಹೋಗಿ ಹಣ ಹಿಂಪಡೆಯಬಹುದು.
ಬ್ಯಾಂಕ್ ನಲ್ಲಿ ಹಣ ಮಾಡುವ ಮಿತಿ!
ಕೆಲವು ಬ್ಯಾಂಕ್ ನಲ್ಲಿ 1 ಲಕ್ಷದಿಂದ 20 ಲಕ್ಷ ಹಣವನ್ನು ಒಂದು ದಿನಕ್ಕೆ ಹಿಂಪಡೆಯಬಹುದು. ಆದರೆ ನೀವು ಐಟಿಆರ್ ರಿಟರ್ನ್ (ITR Return) ಸಲ್ಲಿಸಿರಬೇಕು. ನೀವು ಮೂರು ವರ್ಷಗಳ ಅವಧಿಯಲ್ಲಿ ಐಟಿಆರ್ ಸಲ್ಲಿಸದೆ ಇದ್ದಲ್ಲಿ ಟಿಡಿಎಸ್ ಪಾವತಿಸಬೇಕಾಗುತ್ತದೆ. 20 ಲಕ್ಷ ರೂಪಾಯಿಗಳಿಗೆ 2% ಟಿಡಿಎಸ್ ಹಾಗೂ ಒಂದು ಕೋಟಿ ರೂಪಾಯಿಗಳಿಗೆ 5% ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದ್ರೆ ನೀವು ಐಟಿಆರ್ ಸಲ್ಲಿಕೆ ಮಾಡಿದರೆ ಯಾವುದೇ ಸಮಸ್ಯೆ ಎದುರಿಸಬೇಕಾದ ಅಗತ್ಯವಿಲ್ಲ.