ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡು ಬಂದಿರುವಂತಹ ಕೆಲವೊಂದು ಬದಲಾವಣೆಗಳ ಕಾರಣದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಕೆನರಾ ಬ್ಯಾಂಕ್ (Canara Bank) ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಗಳ ಕ್ರೆಡಿಟ್ ಕಾರ್ಡ್ (Credit Card) ನಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬಂದಿದೆ.
- ಕ್ರೆಡಿಟ್ ಕಾರ್ಡ್ ಲಿಮಿಟ್ (Credit Card Limit) ಅನ್ನು ಹೆಚ್ಚಿಸಲಾಗಿದ್ದು ಈ ಹಿಂದಿನ ಖರ್ಚಿಗಿಂತ ಇನ್ನಷ್ಟು ಹೆಚ್ಚಿನ ಖರ್ಚನ್ನು ನೀವು ಈ ಮೂಲಕ ಮಾಡಬಹುದಾಗಿದೆ. ಆಪತ್ತಿನ ಕಾಲದಲ್ಲಿ ನಿಮಗೆ ಆರ್ಥಿಕ ಸಹಾಯವನ್ನು ಕೂಡ ಇದು ಒದಗಿಸುತ್ತದೆ.
- ಎಲೆಕ್ಟ್ರಾನಿಕ್ಸ್ ಹಾಗೂ ಬೇರೆ ದುಬಾರಿ ವಸ್ತುಗಳನ್ನು ಕೂಡ ನೀವು ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಗಳಲ್ಲಿ ಯಾವುದೇ ರೀತಿಯ ಹೆಚ್ಚುವರಿ ಬಡ್ಡಿ ಇಲ್ಲದೆ EMI ಮೂಲಕ ಖರೀದಿ ಮಾಡಬಹುದಾಗಿದೆ. ಯಾವುದೇ ಹೆಚ್ಚುವರಿ ಖರ್ಚುಗಳನ್ನು ಮಾಡಿದೆ ನೀವು ನಿಮಗೆ ಬೇಕಾಗಿರುವಂತಹ ವಸ್ತುಗಳನ್ನ ಕಂತಿನ ರೂಪದಲ್ಲಿ ಖರೀದಿ ಮಾಡಬಹುದಾಗಿದೆ.
- ಇನ್ನು ಈ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ (Credit Card) ಗಳ ಮೂಲಕ ಯಾವುದೇ ವಸ್ತುಗಳನ್ನು ಖರೀದಿ ಮಾಡಿದರೆ ನಿಮಗೆ ರಿವಾರ್ಡ್ ಪಾಯಿಂಟ್ ಗಳು ಹಾಗೂ ಕ್ಯಾಶ್ ಬ್ಯಾಕ್ ಸಿಗುತ್ತವೆ ಹಾಗೂ ಇವುಗಳನ್ನು ನೀವು ಬೇರೆ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಕೂಡ ಬಳಸಿಕೊಳ್ಳಬಹುದಾಗಿದೆ.
- ಕ್ರೆಡಿಟ್ ಕಾರ್ಡ್ ಮೂಲಕ ನೀವು ನಿಮ್ಮ ವಾಹನಗಳಿಗೆ ಇಂಧನವನ್ನು ಭರ್ತಿ ಮಾಡಿದ್ರು ಕೂಡ ಅವುಗಳಲ್ಲಿ ಕೂಡ ಉಳಿತಾಯ ಮಾಡಬಹುದಾಗಿದೆ.
- ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಗಳಲ್ಲಿ ಕೂಡ ನೀವು ಹೆಚ್ಚುವರಿ ಲಾಭಗಳನ್ನು ಸಂಪಾದನೆ ಮಾಡಬಹುದಾಗಿದೆ.
- ಒಂದು ವೇಳೆ ನಿಮ್ಮ ಕಾರ್ಡ್ ಕಳವಾದರೆ ಅವುಗಳನ್ನು ಕೂಡಲೇ ಉಚಿತವಾಗಿ ಬ್ಲಾಕ್ ಮಾಡಬಹುದಾಗಿದೆ ಹಾಗೂ ಅದಕ್ಕೆ ರಿಪ್ಲೇಸ್ಮೆಂಟ್ ಕೂಡ ಸಿಗುತ್ತೆ. ಕೆಲವೊಂದು ಕಾರ್ಡುಗಳ ಮೇಲೆ ಇನ್ಸೂರೆನ್ಸ್ ಕವರೇಜ್ ಅನ್ನು ಕೂಡ ನೀಡಲಾಗುತ್ತದೆ.
- ಕ್ರೆಡಿಟ್ ಕಾರ್ಡ್ಗಳ ಮೇಲೆ ಇರುವಂತಹ ಲಾಯಲ್ಟಿ ಪ್ರೋಗ್ರಾಮ್ ಗಳ ಮೂಲಕ ವಿಮಾನದ ಟಿಕೆಟ್, ಹೋಟೆಲ್ ಬುಕಿಂಗ್, ಆನ್ಲೈನ್ ಶಾಪಿಂಗ್, ರೆಸ್ಟೋರೆಂಟ್ ಗಳಲ್ಲಿ ಡೈನಿಂಗ್ ಮೇಲೆ ರಿಯಾಯಿತಿ ಪಡೆದುಕೊಳ್ಳುತ್ತೀರಿ.
ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಮಾತ್ರ ಸರಿಯಾದ ರೀತಿಯಲ್ಲಿ ಉಪಯೋಗಿಸುವುದನ್ನು ಮಾತ್ರ ಮರೆಯಬೇಡಿ ಹಾಗೂ ಅದರ ಮರುಪಾವತಿಯನ್ನು ಕೂಡ ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಆಗಾಗ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಕ್ರೆಡಿಟ್ ಕಾರ್ಡ್ ಗೆ ಸಂಬಂಧಪಟ್ಟಂತಹ ಆಫರ್ ಗಳನ್ನು ಕೂಡ ತಿಳಿದುಕೊಳ್ಳಿ.