ಇಂದು ಆಸ್ತಿ, ಮನೆ ಮಾರಾಟ ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಹೇಳಬಹುದು. ಆದರೆ ಆಸ್ತಿ ಮನೆ ಖರೀದಿ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಹಾಗಾಗಿ ಇಂದು ಆಸ್ತಿ ನೋಂದಣಿ (Property Registration) ಕೂಡ ಕಡ್ಡಾಯ ವಾಗಿದೆ. ಯಾಕಂದ್ರೆ ಆಸ್ತಿ ಮಾರಾಟ (Property Sale) ವಿಚಾರದಲ್ಲಿ ಮೋಸ ವಂಚನೆಗಳು ಇಂದು ಹೆಚ್ಚಾಗಿದ್ದು ಒಂದೇ ಆಸ್ತಿಯನ್ನು ಎರಡು ಮೂರು ಮಾಲೀಕರಿಗೆ ಮಾರಾಟ ಮಾಡಿ ಮೋಸ ಹೋದ ಘಟನೆಗಳು ಕೂಡ ನಡೆದಿದೆ.
ನೋಂದಣಿ ಮಾಡಬೇಕು!
ಆಸ್ತಿ ನೊಂದಣಿ (Property Registration) ಕಡ್ಡಾಯ ಆಗಿದ್ದು ಇಂದು ರಾಜ್ಯ ಸರ್ಕಾರವು ನೋಂದಣಿ ಪ್ರಕ್ರಿಯೆಯನ್ನು ಸುಲಭ ಮಾಡಿದ್ದು ಕಾವೇರಿ-2.0 ತಂತ್ರಾಂಶವನ್ನು 2.0 ಪರಿಚ ಯಿಸಿದೆ. ಈ ಮೂಲಕ ಕರ್ನಾಟಕ ದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಯನ್ನು ಸರಳ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಇನ್ಮುಂದೆ ಆಸ್ತಿ ನೋಂದಣಿ ಸುಲಭವಾಗಲಿದೆ.
ಕಡ್ಡಾಯ ಮಾಡಬೇಕು!
ಸರ್ಕಾರ ಇಂದು ಎಲ್ಲಾ ಜಿಲ್ಲೆಗಳಲ್ಲಿ ಆಸ್ತಿಗಳ ನೋಂದಣಿ ಮಾಡಲು ಇ-ಖಾತಾ ಕಡ್ಡಾಯ ಮಾಡಿದ್ದು, ಅಕ್ಟೋಬರ್ 7ರ ಬಳಿಕ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಹಾಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ತಮ್ಮ ಆಸ್ತಿ ಯನ್ನು ಮಾರಾಟ ಮಾಡಬೇಕು ಎಂದರೆ ಇ-ಖಾತಾ ಪಡೆದು ಕೊಳ್ಳಬೇಕು.
ಯಾಕೆ ಈ ನಿಯಮ?!
ಇ ಖಾತಾ ಮೂಲಕ ಇದರ ಸಹಾಯದಿಂದ ಮಾತ್ರ ನಕಲಿ ನೋಂದಣಿ ತಡೆಯಬಹುದಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಭೂಮಿ, ಇ-ಆಸ್ತಿ, ಇ-ಸ್ವತ್ತು ಎಲ್ಲದಕ್ಕೂ ಕಾವೇರಿ -2 ತಂತ್ರಾಂಶ ಲಿಂಕ್ ಆಗಿರಲಿದ್ದು ಇದರಲ್ಲಿ ಆಸ್ತಿ ನೋಂದಣಿ (Property Registration) ಗೆ ಸಲ್ಲಿಕೆಯಾದ ದಾಖಲೆಗಳ ಪರಿಶೀಲನೆ ನಡೆಯ ಲಿದೆ. ನಕಲಿ ದಾಖಲೆ ಸೃಷ್ಟಿಸಿ ನೋಂದಣಿಗೆ ಯತ್ನಿಸಿದರೆ ಸಿಕ್ಕಿಬೀಳುತ್ತಾರೆ.ಈ ಯೋಜನೆ ಯನ್ನು ಭ್ರಷ್ಟಾಚಾರ, ಮಧ್ಯ ವರ್ತಿಗಳ ಹಾವಳಿ, ನಕಲಿ ದಾಖಲೆಗಳ ಮೂಲಕ ವಂಚನೆ ಇತ್ಯಾದಿ ಅಕ್ರಮಗಳನ್ನು ತಪ್ಪಿಸಲು ಈ ಯೋಜನೆ ಜಾರಿ ಮಾಡಲಾಗಿದೆ.
ನೋಂದಣಿ ಮಾಡಲು ಸುಲಭ!
ಸಾರ್ವಜನಿಕರು ತಮ್ಮ ಆಸ್ತಿಯ ವಿವರ, ಮೂಲ ದಾಖಲೆಗಳನ್ನು ಆನ್ಲೈನ್ ಮೂಲಕ ಕಳುಹಿಸ ಬಹುದು.ಮೂರು ಹಂತದಲ್ಲಿ ಆಸ್ತಿಗಳ ನೊಂದಣಿ ನಡೆಯಲಿದ್ದು ನೊಂದಣಿ ಪೂರ್ವ, ನೊಂದಣಿ ಮತ್ತು ನೊಂದಣಿ ನಂತರ, ಹೀಗೆ ಮೂರು ಹಂತಗಳ ಪ್ರಕ್ರಿಯೆ ಇರುತ್ತದೆ. ನಾಗರಿಕರೇ ಆನ್ಲೈನ್ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶ ಇದೆ.