ಸಾಮಾನ್ಯವಾಗಿ ತಮ್ಮ ನಿವೃತ್ತಿಯ ನಂತರ ಹಣವನ್ನು ಹೇಗೆ ಉಳಿತಾಯ ಮಾಡಬೇಕು? ತಮ್ಮ ಮುಂದಿನ ಭವಿಷ್ಯಕ್ಕಾಗಿ ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ? ಎನ್ನುವ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ನೀವು ಕೇವಲ ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ನಿಮ್ಮ ಹಣ ದುಪ್ಪಟ್ಟಾಗುವುದಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಕೆಲವು ಬ್ಯಾಂಕುಗಳಲ್ಲಿ ಉಳಿತಾಯ ಯೋಜನೆಯ ಮೇಲೆ ಸಿಗುವ ಬಡ್ಡಿ ಅದರ ಕಡಿಮೆ ಇರುತ್ತದೆ. ಆದರೆ ನೀವು ನಿಮ್ಮ ಉಳಿತಾಯವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಂಡರೆ ನಿವೃತ್ತಿಯ ನಂತರ ಮುಂದಿನ ಕೇವಲ ಐದು ವರ್ಷಗಳಲ್ಲಿ ಲಕ್ಷಗಟ್ಟಲೆ ಹಣವನ್ನು ಸಿಂಪಡಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)!
ಹಿರಿಯ ನಾಗರಿಕರು ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯೆಲ್ಲಿ (SCSS) ಹೂಡಿಕೆ ಮಾಡಿದರೆ ಹಣವು ಹೆಚ್ಚು ಸುರಕ್ಷಿತವಾಗಿರುತ್ತದೆ ಜೊತೆಗೆ ಉತ್ತಮ ಬಡ್ಡಿ ದರದಲ್ಲಿ ರಿಟರ್ನ್ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಹಿರಿಯ ನಾಗರಿಕರು ಒಟ್ಟು ಹಣವನ್ನು ಹೂಡಿಕೆ ಮಾಡಬಹುದು. ಹೆಚ್ಚಿನ ತೆರಿಗೆ ವಿನಾಯಿತಿ ಕೂಡ ಸಿಗುವುದರಿಂದ ಉತ್ತಮ ಆದಾಯ ಕೈ ಸೇರುತ್ತದೆ. ಈ ಯೋಜನೆ ಅವಧಿ ಐದು ವರ್ಷಗಳಾಗಿದ್ದು, ವಾರ್ಷಿಕವಾಗಿ 8.2% ಬಡ್ಡಿ ಸಿಗುತ್ತದೆ.
ಎಷ್ಟು ಹೂಡಿಕೆ ಮಾಡಬೇಕು?
SCSS ಯೋಜನೆಯಲ್ಲಿ ಕನಿಷ್ಠ ಸಾವಿರ ರೂಪಾಯಿ ಹೂಡಿಕೆ ಮಾಡಬೇಕು ಮತ್ತು ಗರಿಷ್ಠ 30 ಲಕ್ಷ ರೂಪಾಯಿಗಳ ಮಿತಿ ವಿಧಿಸಲಾಗಿದೆ. ಆದರೆ ಎರಡು ಪ್ರತ್ಯೇಕ ಖಾತೆಯಲ್ಲಿ (ಗಂಡ ಹೆಂಡತಿ ಜಂಟಿ ಖಾತೆ) ಗರಿಷ್ಠ 60ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಆದಾಯ ತೆರಿಗೆ ನಿಯಮ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
ಸಿಗುವ ಒಟ್ಟು ಆದಾಯ!
ನೀವು ಗರಿಷ್ಠ 30 ಲಕ್ಷ ಹೂಡಿಕೆ ಮಾಡಿದರೆ 8.2% ಬಡ್ಡಿ ಆಧಾರದ ಮೇಲೆ ಐದು ವರ್ಷಗಳಲ್ಲಿ ವಾರ್ಷಿಕವಾಗಿ 2,40,600 ರೂಪಾಯಿಗಳನ್ನು ಪಡೆಯಬಹುದು. ಐದು ವರ್ಷಗಳಲ್ಲಿ ಒಟ್ಟು 12,03,000 ಬಡ್ಡಿ ಯೊಂದಿಗೆ 42,03,000ಗಳನ್ನು ಒಟ್ಟು ಆದಾಯವಾಗಿ ಹಿಂಪಡೆಯಬಹುದು. ಅಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ರೂ.60,150ಗಳು ಅಥವಾ ತಿಂಗಳಿಗೆ 20, 050ಗಳನ್ನು ಪಡೆಯಬಹುದು.
ಇನ್ನು ಗಂಡ ಹೆಂಡತಿ ಪ್ರತ್ಯೇಕವಾಗಿ 30, 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ ಒಟ್ಟು ಆದಾಯವಾಗಿ 84,06,000ಗಳನ್ನು ಹಿಂಪಡೆಯಬಹುದು. ಹಿರಿಯ ನಾಗರಿಕರಿಗೆ ಅತ್ಯಂತ ಅನುಕೂಲಕರವಾಗಿರುವ ಉಳಿತಾಯ ಯೋಜನೆ ಇದಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಅಂಚೆ ಕಚೇರಿಯನ್ನು ಸಂಪರ್ಕಿಸಿ.