ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಸುದ್ದಿ ಜೋರಾಗಿಯೇ ಇದೆ.ಅದರಲ್ಲಿ ಮಹಿಳಾ ಪರವಾದ ಯೋಜನೆ ಗೃಹಲಕ್ಷ್ಮಿ ಬಹಳಷ್ಟು ಸದ್ದು ಮಾಡ್ತಾ ಇದೆ. ಇದು ಮಹಿಳಾ ಪರವಾದ ಯೋಜನೆ ಯಾಗಿದ್ದು ಮನೆಯ ಹಿರಿಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ಮೊತ್ತವನ್ನು ಸರಕಾರ ಜಮೆ ಮಾಡ್ತಾ ಇದೆ.ಆದರೆ ಇದೀಗ ಎರಡು ಮೂರು ತಿಂಗಳಿನಿಂದ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಇದಕ್ಕಾಗಿ ಮಹಿಳೆಯರು ಯಾವಾಗ ಹಣ ಜಮೆ ಯಾಗುತ್ತೆ ಅಂತ ಕಾಯ್ತಾ ಬಂದಿದ್ದಾರೆ.
ಹಣ ಜಮೆಯಾಗಿಲ್ಲ!
ಮಹಿಳೆಯರ ಖಾತೆಗೆ ಜುಲೈ ತಿಂಗಳು ಹಾಗೂ ಆಗಸ್ಟ್ ತಿಂಗಳಿನ ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಬಂದಿಲ್ಲ. ಒಟ್ಟು ಮೂರು ತಿಂಗಳ ಹಣ ಗೃಹಲಕ್ಷ್ಮಿ (Gruha Lakshmi) ಯರ ಖಾತೆ ಸೇರಬೇಕಿದೆ. ಅಂದರೆ ಒಟ್ಟು ರೂ. 6000 ಹಣ ಮೂರು ತಿಂಗಳ ಹಣ ಬರಲು ಬಾಕಿ ಇರಲಿದೆ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾತನಾಡಿ ಈ ತಿಂಗಳಲ್ಲಿ ಬಾಕಿ ಇರುವ ಎರಡು ತಿಂಗಳ ಹಣವನ್ನೂ ವರ್ಗಾವಣೆ ಮಾಡಲಾಗುವುದು, ನವರಾತ್ರಿ ಸಂದರ್ಭದಲ್ಲಿ ಹಣ ಜಮೆಯಾಗುತ್ತೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸದ್ಯ ಗೃಹಲಕ್ಷ್ಮಿಯರ ಖಾತೆಗೆ ಕೇವಲ ಜೂನ್ ತಿಂಗಳ ಹಣ ಮಾತ್ರ ಬಂದಿದ್ದು ಜುಲೈ ತಿಂಗಳ ಹಣ ಇನ್ನು ಬಂದಿಲ್ಲ.
ಮಹಿಳೆಯರಿಗೆ ನಿರಾಸೆ!
ನವರಾತ್ರಿಯ ಸಂದರ್ಭದಲ್ಲಿ ಮೂರು ತಿಂಗಳ ಹಣ ಜಮೆಯಾಗುತ್ತೇ ಎಂದು ಹೇಳಿ ಕೆಲವು ಮಹಿಳೆಯರಿಗೆ ಒಂದುತಿಂಗಳ ಹಣವೂ ಬಂದಿಲ್ಲ. ಹಾಗಾಗಿ ಮೂರು ತಿಂಗಳ ಹಣ ಒಟ್ಟಿಗೆ ಹಣ ಜಮೆಯಾಗುತ್ತೆ ಎಂದು ಇದ್ದ ಮಹಿಳೆಯರಿಗೆ ನಿರಾಸೆ ಯಾಗಿದೆ. ಕೆಲವು ಮಹಿಳೆಯರಿಗೆ ಒಂದು ತಿಂಗಳ ಹಣ ಅಷ್ಟೇ ಬಂದಿದ್ದು ಇನ್ನು ಹಲವರಿಗೆ ಆ ಹಣ ಕೂಡ ಬಂದಿಲ್ಲ. ಹೀಗಾಗಿ ಹೆಚ್ಚಿನ ಮಹಿಳೆ ಯರು ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಹಣ ಯಾಕೆ ಬಂದಿಲ್ಲ!
ಈಗಾಗಲೇ 1.22 ಕೋಟಿ ಫಲಾನುಭವಿಗಳ ಕುಟುಂಬಕ್ಕೆ ಹಣ ಬಂದಿದ್ದು ಎರಡು ತಿಂಗಳಿಗೆ ಐದು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಯಾಗಿದೆ. ಹಣ ಹಾಕಲು ತಾಂತ್ರಿಕ ದೋಷ ಉಂಟಾಗಿದ್ದು ಇದನ್ನು ಸರಿ ಪಡಿಸ್ತಾ ಇದ್ದೇವೆ.ತಿಂಗಳಿಗೆ 2000 ರೂ,ಅಂತೆ ಹಣ ಹಾಕ್ತ ಇದ್ದು ಆದರೆ ಗೃಹಲಕ್ಷ್ಮಿಯರ ಖಾತೆಗೆ ಸರಿಯಾದ ಸಮಯಕ್ಕೆ ಹಣ ಹಾಕಲು ಅಡ್ಡಿಯಾಗುತ್ತಿರುವುದು ತಾಂತ್ರಿಕ ಸಮಸ್ಯೆ, ಇದನ್ನು ಆದಷ್ಟು ಬೇಗ ಸರಿ ಮಾಡಿ, ಇದೇ ತಿಂಗಳು ಹಣ ಜಮೆ ಮಾಡುತ್ತೇವೆ ಎಂದು ಸಚಿವೆ ಸ್ಪಷ್ಟನೆ ನೀಡಿದ್ದಾರೆ.