ಇತ್ತೀಚೆಗೆ ಗೂಗಲ್ (Google) , ಗೂಗಲ್ ಫಾರ್ ಇಂಡಿಯಾ ಎನ್ನುವ ವಾರ್ಷಿಕ ಈವೆಂಟ್ ನ್ನು ವಿಶೇಷವಾಗಿ ಭಾರತೀಯರಿಗಾಗಿಯೇ ನಡೆಸಿದ್ದು, ತನ್ನ ಬಳಕೆದಾರಿಗೆ ಸಾಕಷ್ಟು ಗುಡ್ ನ್ಯೂಸ್ ನೀಡಿದೆ. ಅದರಲ್ಲೂ ಮುಖ್ಯವಾಗಿ ಮೊಬೈಲ್ ನಲ್ಲಿ ಗೂಗಲ್ ಪೇ (Google Pay) ಮೂಲಕವೇ ಐವತ್ತು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಲು ಹೊಸ ಉಪಕ್ರಮ ಕೈಗೊಂಡಿದೆ. ಇನ್ನು ಮುಂದೆ 50 ಲಕ್ಷ ರೂಪಾಯಿಗಳವರಿಗೆ ಗೋಲ್ಡ್ ಲೋನ್ ಹಾಗೂ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಅನ್ನು ಸುಲಭವಾಗಿ ಪಡೆಯಬಹುದು ಎಂದು ಗೂಗಲ್ ತಿಳಿಸಿದೆ.
ಗೂಗಲ್ ಅಭಿವೃದ್ದಿ ಪಡಿಸಿರುವ AI ಭಾರತ ದೇಶಕ್ಕೆ ಅನುಕೂಲವಾಗುವಂತೆ ನವೀಕರಿಸಲಾಗಿದ್ದು, ಈ ಮೂಲಕ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಿಕೊಡಲಾಗಿದೆ.
5 ಲಕ್ಷ ರೂಪಾಯಿಗಳವರೆಗಿನ ವಯಕ್ತಿಕ ಸಾಲ!
ಗೂಗಲ್ ಪೇ (Google Pay) ಯಲ್ಲಿ ವೈಯಕ್ತಿಕ ಸಾಲದ ಮಿತಿಯನ್ನು 5 ಲಕ್ಷ ರೂಪಾಯಿಗಳವರೆಗೂ ಹೆಚ್ಚಿಸಲಾಗಿದೆ. ಇದರ ಜೊತೆಗೆ ಗೂಗಲ್ ಪೇಯಿಂದ ಯುಪಿಐ ಸರ್ಕಲ್ ಸ್ಪೆಶಾಲಿಟಿ ಕೂಡ ಆರಂಭಿಸಲಾಗಿದ್ದು, ಈ ಮೂಲಕ ಯುಪಿಐ ಸರ್ಕಲ್ ನಲ್ಲಿ ಪಾವತಿ ಮಾಡುವವರು ಯುಪಿಐ ಖಾತೆಯಿಂದ ಇನ್ನೊಬ್ಬ ವ್ಯಕ್ತಿಗೆ ಹಣ ವಹಿವಾಟು ಮಾಡಬಹುದು.
ಜೆಮಿನಿ 8 ಭಾಷೆಗಳಲ್ಲಿ ಲಭ್ಯ!
ಗೂಗಲ್ ಇಂಡಿಯಾ ಇವೆಂಟನ್ನಲ್ಲಿ ಜೆಮಿನಿ (Gemini) ಇನ್ನು ಮುಂದೆ ಹಿಂದಿ ಮಾತ್ರವಲ್ಲದೆ ಇತರ ಭಾರತೀಯ ಭಾಷೆಗಳಲ್ಲಿಯೂ ಲಭ್ಯ ಇರುವುದಾಗಿ ತಿಳಿಸಲಾಗಿದೆ. ಹಿಂದಿ, ಗುಜರಾತಿ, ಬೆಂಗಾಳಿ, ಮಲಯಾಳಂ, ಮರಾಠಿ. ತೆಲುಗು, ತಮಿಳು, ಉರ್ದು ಮಾತ್ರವಲ್ಲದೆ ಕನ್ನಡ ಭಾಷೆಗಳಲ್ಲಿಯೂ ಲಭ್ಯ. ಅದೇ ರೀತಿಯಾಗಿ ಗೂಗಲ್ ಲೆನ್ಸ್ ನಲ್ಲಿ ಫೋಟೋ ಮಾತ್ರವಲ್ಲದೆ ಈಗ ವಿಡಿಯೋ ಹುಡುಕಾಟವನ್ನು ಕೂಡ ಮಾಡಬಹುದು. ಇನ್ನು ಗೂಗಲ್ ಮ್ಯಾಪ್ ನಲ್ಲಿ ಸ್ಥಳ ಹವಾಮಾನ ಮಾತ್ರವಲ್ಲದೆ ಥೀಮ್ ಬೇಸ್ಡ್ ಬರ್ತಡೇ ಕೇಕ್, ವಿಸಿಟಿಂಗ್ ಪ್ಲೇಸ್ ಮೊದಲಾದ ಹುಡುಕಾಟಕ್ಕೂ ನೆರವಾಗಲಿದೆ.
ಇನ್ನು ಗೋಲ್ಡ್ ಮೇಲೆ ಸಾಲ ತೆಗೆದುಕೊಳ್ಳುವವರು, 50 ಲಕ್ಷದವರೆಗೆ ಗೂಗಲ್ ಪೇ (Google Pay) ಮೂಲಕವೇ ಸಾಲ ತೆಗೆದುಕೊಳ್ಳಬಹುದು. ಇಮೇಜ್ ಟು ವಿಡಿಯೋ ಅನಿಮೇಶನ್ ಗಳು ಹಾಗೂ ಮತ್ತಿತರ ಅನಿಮೇಟೆಡ್ ರಿಲೇಟೆಡ್ ವಿಷಯಗಳನ್ನು ಪಡೆದುಕೊಳ್ಳಬಹುದು.
ಇನ್ನೊಂದು ಮುಖ್ಯ ಬೆಳವಣಿಗೆ ಅಂದ್ರೆ ಗೂಗಲ್ ವ್ಯಾಲೆಟ್ ನಲ್ಲಿ ಮುಂದಿನ ಆರ್ಥಿಕ ವರ್ಷದಿಂದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ID ಕಾರ್ಡುಗಳು ಕೂಡ ಸಿಗಲಿವೆ. ಹಾಗೆಯೇ ಮುಂದಿನ ವರ್ಷದಲ್ಲಿ ಗೂಗಲ್ ಸೇಫ್ಟಿ ಇಂಜಿನಿಯರಿಂಗ್ ಸೆಂಟರ್ ಕೂಡ ಭಾರತದಲ್ಲಿ ಲಭ್ಯವಾಗಲಿದೆ. ಒಟ್ಟಿನಲ್ಲಿ ಗೂಗಲ್ ಇಂಡಿಯಾ ಈವೆಂಟ್ ಮೂಲಕ