ಇತ್ತೀಚೆಗೆ ಎಲ್ಲರಿಗೂ ಎಲ್ಲಾ ಕೆಲಸಗಳನ್ನು AI ಮೂಲಕವೇ ಮಾಡಿ ಮುಗಿಸೋ ತವಕ. ಆನ್‌ಲೈನ್‌ನಲ್ಲಿ AI ಸಾಫ್ಟ್‌ವೇರ್‌ಗಳು, ಕಂಪನಿ ಹಾಗೂ ಕೈಗಾರಿಕೆಗಳಲ್ಲಿ ರೋಬೋಟಿಕ್ ಮೆಷಿನ್ (Robotic Machine) ಗಳನ್ನು ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ. ಅತ್ಯಂತ ವೇಗವಾಗಿ ಹಾಗೂ ಸಮರ್ಪಕವಾಗಿ ಕೆಲಸ ನಿರ್ವಹಿಸುವ ಕೃತಕ ಬುದ್ಧಿಮತ್ತೆ (Artificial Intelligence) ಯ ಮೇಲೆ ಅವಲಂಬಿತರಾಗಿರುವ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅತ್ಯಂತ ಪ್ರಿಯವಾಗಿರೋದು ಚಾಟ್ ಜಿಪಿಟಿ (Chat GPT). ಈ ಚಾಟ್ ಜಿಪಿಟಿ ಯನ್ನು ನೀವೂ ಬಳಸುತ್ತಿದ್ದರೆ, ಅದರ ಬಳಕೆಯ ಆತಂಕಕಾರಿ ವಿಷಯವನ್ನು ನಾವು ಹೇಳ್ತೀವಿ ನೋಡಿ.
2019 ರಲ್ಲಿ ಸ್ಯಾಮ್ ಆಲ್ಟ್‌ಮನ್ (Sam Altman) ಎನ್ನುವ ವ್ಯಕ್ತಿಯೊಬ್ಬ ಓಪನ್ ಎಐ (OpenAI) ಎನ್ನುವ ಕಂಪನಿಯ ಮೂಲಕ ಚಾಟ್ ಜಿಪಿಟಿ (ChatGPT) ಎನ್ನುವ ಕೃತಕ ಬುದ್ಧಿಮತ್ತೆಯ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪರಿಚಯಿಸುತ್ತಾನೆ. ಆದರೆ, ಆತನ ಆ ಸಾಫ್ಟ್‌ವೇರ್ ಇಂದು ಜಗತ್ತಿನ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡುಬಿಟ್ಟಿದೆ.
ಈಗ ಶಾಲಾ ವಿದ್ಯಾರ್ಥಿಗಳು, ಪುಟ್ಟ ಮಕ್ಕಳು, ಉದ್ಯೋಗಿಗಳು ಸೇರಿದಂತೆ ಎಲ್ಲರೂ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಲು ಹಾಗೂ ಕೆಲವು ಸಂಕೀರ್ಣವಾದ ಟಾಸ್ಕ್ (Complex Tasks) ಗಳನ್ನು ನಿರ್ವಹಿಸಲು ಚಾಟ್ ಜಿಪಿಟಿ ಬಳಸುತ್ತಿದ್ದಾರೆ. ಆದರೆ, ಈ ಚಾಟ್ ಜಿಪಿಟಿಯನ್ನು ಬಳಸುವ ಮುನ್ನ, ಅದರಿಂದ ಉಂಟಾಗಬಹುದಾದ ಕೆಲವು ಪರಿಣಾಮಗಳನ್ನು ತಿಳಿದುಕೊಂಡರೆ ಒಳಿತು. ಅವೇನೆಂದು ಹೇಳ್ತೀವಿ ನೋಡಿ.
ನಿಮ್ಮ ಮೊಬೈಲ್, ಕಂಪ್ಯೂಟರ್ ಹ್ಯಾಕ್ (Hacking) ಆಗುವ ಸಂಭವ
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಚಾಟ್ ಜಿಪಿಟಿ ಬಳಸುತ್ತಿದ್ದರೆ ಹಾಗೂ ಅದಕ್ಕೆ ಕೆಲವು ಪರ್ಮಿಷನ್ (Privacy Permissions) ಗಳನ್ನು ನೀಡಿದ್ದರೆ ದಯವಿಟ್ಟು ಇನ್ನೊಮ್ಮೆ ಪರೀಕ್ಷಿಸಿಕೊಳ್ಳುವುದು ಒಳಿತು. ಯಾಕೆಂದರೆ, ಚಾಟ್ ಜಿಪಿಟಿ ಬಳಸುವುದರಿಂದ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಮಾಲ್‌ವೇರ್ (Malware) ಸೇರುವುದು, ನಿಮ್ಮ ದಾಖಲೆಗಳ ಕಳವು (Phishing) ಅಥವಾ ಹ್ಯಾಕ್ (Hack) ಆಗುವ ಸಂಭವವಿರುತ್ತದೆ.
ನೀವು ನಿಮ್ಮ ಕಂಪನಿಯ ಆಂತರಿಕ ಉದ್ದೇಶಗಳಿಗೆ (Internal Uses) ಅಥವಾ ಅತ್ಯಂತ ಗೌಪ್ಯ ಟಾಸ್ಕ್ (Confidential) ಗಳನ್ನು ನಿರ್ವಹಿಸಲು ಚಾಟ್ ಜಿಪಿಟಿ (ChatGPT) ಬಳಸುತ್ತಿದ್ದರೆ, ಈ ಕೂಡಲೇ ನಿಲ್ಲಿಸಿ. ಯಾಕೆಂದರೆ, ಅನಿಶ್ಚಿತವಾಗಿರುವ ಈ ಚಾಟ್ ಜಿಪಿಟಿಯ ಮೂಲಕ, ನಿಮ್ಮ ಕಂಪನಿಯ ರಹಸ್ಯ ವಿಚಾರಗಳು ಲೋಪ (Data Breach) ವಾಗುವ ಸಂಭವವಿರುತ್ತದೆ.
ತಪ್ಪು ಮಾಹಿತಿಗಳ ರವಾನೆ (Misinformation)
ಚಾಟ್ ಜಿಪಿಟಿ ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಟೆಕ್ನಾಲಜಿಯಾಗಿರೋದ್ರಿಂದ, ಅದು ನೀಡುವ ಅಥವಾ ಅದಕ್ಕೆ ಪೂರೈಕೆಯಾಗಿರುವ ಮಾಹಿತಿಗಳು ತಪ್ಪು ಮಾಹಿತಿಗಳನ್ನು ಒಳಗೊಂಡಿರುವ ಸಾಧ್ಯತೆಯಿರುತ್ತದೆ.