ಸಣ್ಣ ಹೂಡಿಕೆಯಿಂದ ಹಿಡಿದು ದೊಡ್ಡ ಮೊತ್ತದ ಹೂಡಿಕೆಗೂ ಕೂಡ ಸ್ಥಿರ ಠೇವಣಿ ಉತ್ತಮ ಆಯ್ಕೆಯಾಗಿದೆ. ನಿಶ್ಚಿತ ಠೇವಣಿ ಪಡೆದುಕೊಳ್ಳಲು ನೀವು ಬಯಸಿದರೆ ಬ್ಯಾಂಕ್ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಎಫ್ ಡಿ ಮಾಡಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಎಫ್ ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಈಗ 9% ಬಡ್ಡಿ ದರದಲ್ಲಿ ಫಿಕ್ಸೆಡ್ ಡಿಪಾಸಿಟ್ (Fixed Deposit) ಇಟ್ಟರೆ ಉತ್ತಮ ರಿಟರ್ನ್ ಪಡೆದುಕೊಳ್ಳಬಹುದು.
ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು!
ಈಶಾನ್ಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಫ್ ಡಿ (Fixed Deposit) ಮೇಲೆ 9% ಬಡ್ಡಿ ದರವನ್ನು ನೀಡುತ್ತಿದೆ. ಈ ಬಡ್ಡಿ ದರ ಅನ್ವಯವಾಗುವುದು ನೀವು ಮೂರು ಕೋಟಿಗಿಂತ ಕಡಿಮೆ ಹೂಡಿಕೆ ಮಾಡಿದಾಗ ಮಾತ್ರ. ಅದೇ ರೀತಿ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8.6% ಬಡ್ಡಿಯನ್ನು ಎಫ್ ಡಿ ಮೇಲೆ ನೀಡುತ್ತದೆ. ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 8.5% ಬಡ್ಡಿ ನಿಗದಿಪಡಿಸಲಾಗಿದೆ. ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8.25% ಎಫ್ಡಿ ಮೇಲೆ ಒದಗಿಸುತ್ತದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ನೀವು ಇಡುವ ಎಫ್ ಡಿ ಮೇಲೆ 8.15% ಬಡ್ಡಿಯನ್ನು ಪಡೆಯಬಹುದು. ನೆನಪಿಡಿ ಸಣ್ಣ ಫೈನಾನ್ಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದಿದ್ದರೆ, DICGC ವ್ಯಾಪ್ತಿಗೆ ಒಳಪಡುವ ಸಣ್ಣ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಮಾತ್ರ ಹೂಡಿಕೆ ಮಾಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ!
ಎಸ್ ಬಿ ಐ ಕೂಡ ಉತ್ತಮ ಎಫ್ ಡಿ ಯೋಜನೆಯನ್ನು ಜಾರಿಗೆ ತಂದಿದ್ದು ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು. ಎಸ್ ಬಿ ಐನ ಅಮೃತ ವೃಷ್ಟಿ ಎಫ್ಡಿ ಯೋಜನೆ 444 ದಿನಗಳ ಎಫ್ ಡಿ ಯೋಜನೆಯಾಗಿದ್ದು, ಇಲ್ಲಿ ಸಾಮಾನ್ಯ ಗ್ರಾಹಕರಿಗೆ 7.10% ಹಾಗೂ ಹಿರಿಯ ನಾಗರಿಕರಿಗೆ 7.60% ಬಡ್ಡಿ ದರ ನಿಗದಿಪಡಿಸಲಾಗಿದೆ. ಅದೇ ರೀತಿ SBI ನ ಅಮೃತ್ ಕಲಷ್ ಎಫ್ ಡಿ ಸ್ಕೀಮ್ ನಲ್ಲಿ 400 ದಿನಗಳ ಅವಧಿಗೆ ಎಫ್ ಡಿ ಇಟ್ಟರೆ, 7.10% ಬಡ್ಡಿ ದರವನ್ನು ಸಾಮಾನ್ಯರಿಗೆ ಹಾಗೂ 7.60 % ಬಡ್ಡಿ ದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುವುದು.