Karnataka Times
Trending Stories, Viral News, Gossips & Everything in Kannada

RTO Karnataka: HSRP ನಂಬರ್ ಪ್ಲೇಟ್ ಚೆಕ್ ಮಾಡುವಾಗ ಈ ವಸ್ತು ನಿಮ್ಮ ವಾಹನದಲ್ಲಿ ಇರುವಂತಿಲ್ಲ ಡಬಲ್ ಫೈನ್! RTO ಘೋಷಣೆ

advertisement

HSRP New Rules: ಇತ್ತೀಚಿನ ದಿನಗಳಲ್ಲಿ ವಾಹನ ಹಾಗೂ ಸಾರಿಗೆ ಇಲಾಖೆಯ ನಿಯಮಗಳು ಸಾಕಷ್ಟು ಬಿಗಿಯಾಗಿದ್ದು ರಸ್ತೆಯಲ್ಲಿ ಕೂಡ ಇದು ಆರೋಗ್ಯಕರವಾಗಿರುವಂತಹ ರೀತಿಯಲ್ಲಿ ಇವುಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ವಿಶೇಷವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ನಿಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ಸರ್ಕಾರದ ನೇಮುನ ಪ್ರತಿಯೊಬ್ಬರು ಕೂಡ ಪಾಲಿಸಲೇ ಬೇಕು ಎನ್ನುವಂತಹ ಕಟ್ಟಾಜ್ಞೆ ಜಾರಿಗೆ ಬಂದಿದೆ.

WhatsApp Join Now
Telegram Join Now

2019ಕ್ಕಿಂತ ಮೊದಲಿಗೆ ಖರೀದಿ ಮಾಡಿರುವ ಅಥವಾ ರಿಜಿಸ್ಟರ್ ಮಾಡಿಕೊಂಡಿರುವಂತಹ ವಾಹನಗಳನ್ನು ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ HSRP ನಂಬರ್ ಪ್ಲೇಟ್ ಗಾಗಿ ರಿಜಿಸ್ಟ್ರೇಷನ್ ಮಾಡಿಕೊಂಡು ನಂತರ ಆ ನಂಬರ್ ಪ್ಲೇಟ್ಗಳನ್ನು ವಾಹನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿತ್ತು ಹಾಗೂ ಇದನ್ನು ಮೇ 31ರ ಒಳಗೆ ಮಾಡಬೇಕಿತ್ತು ಅನ್ನೋದನ್ನ ಕೂಡ ಈ ಹಿಂದೆ ಹೇಳಿಕೊಂಡಿತ್ತು ಆದರೆ ಈಗ ಅದನ್ನ ಸರ್ಕಾರ ಮುಂದುವರಿಸಿಕೊಂಡು ಬಂದಿತ್ತು.

RTO decision about HSRP number plate

ಹೌದು ಮೇ 31 ಕೊನೆಯ ದಿನಾಂಕ ಇದ್ದಿದ್ದು ಈಗ ಸೆಪ್ಟೆಂಬರ್ ತಿಂಗಳಿಗೆ ಮುಂದುವರೆದಿದೆ ಎನ್ನುವಂತಹ ಮಾಹಿತಿ ಅಧಿಕೃತವಾಗಿ ಸಿಕ್ಕಿದೆ. ಇನ್ನು ಈ ವಿಚಾರವನ್ನು ಹೇಳುತ್ತಿರುವುದು ನಾವು ನೀವು ಅಲ್ಲ ಬದಲಾಗಿ ಹೈಕೋರ್ಟ್ ಎಂಬುದು ಮತ್ತೊಂದು ವಿಶೇಷವಾಗಿದೆ. ಇನ್ನು ನಿಯಮಗಳ ಪಾಲನೆ ಎಷ್ಟು ಚೆನ್ನಾಗಿ ನಡೆಯುತ್ತದೆ ಎಂದು ಹೇಳುವುದಕ್ಕೆ ಇರುವಂತ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ ರಿಜಿಸ್ಟ್ರೇಷನ್ ಪೂರ್ತಿ ಆಗಿರುವುದು ಕೇವಲ 35 ರಿಂದ 45 ಲಕ್ಷ ವಾಹನಗಳಲ್ಲಿ ಮಾತ್ರ.

advertisement

ಅಂದರೆ ಸರಿ ಸುಮಾರು 20 ಪ್ರತಿಶತ ವಾಹನಗಳನ್ನು ಮಾತ್ರ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲಾಗಿದೆ. ನಮ್ಮ ಕರ್ನಾಟಕ ಜನರು ನಿಜಕ್ಕೂ ಕೂಡ ಸರ್ಕಾರ ಜಾರಿಗೆ ತಂದಿರುವಂತಹ ಈ ನಿಯಮವನ್ನು ಪರಿಗಣಿಸುವ ಗೋಜಿಗೆ ಹೋಗ್ತಾ ಇಲ್ಲ ಅನ್ನೋದೇ ವಿಷದನೀಯವಾಗಿದೆ. ಇನ್ನು ಸೆಪ್ಟೆಂಬರ್ ತಿಂಗಳ ನಂತರ ನೀವು ನಿಮ್ಮ ವಾಹನದ ಜೊತೆಗೆ HSRP ನಂಬರ್ ಪ್ಲೇಟ್ ಇಲ್ಲದೇ ಸಿಕ್ಕಿಬಿದ್ರೆ 500 ರೂಪಾಯಿಗಳಿಂದ ಸಾವಿರ ರೂಪಾಯಿಗಳ ದಂಡವನ್ನು ನಿಮ್ಮಿಂದ ಟ್ರಾಫಿಕ್ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಸೂಲು ಮಾಡಲಿದ್ದಾರೆ.

RTO decision about HSRP number plate
Image Source: Belagavi Infra

HSRP ನಂಬರ್ ಪ್ಲೇಟ್ ಮಾತ್ರ ಅಲ್ಲ ಈ ವಿಚಾರದ ಬಗ್ಗೆ ಕೂಡ ಹುಷಾರಾಗಿರಿ

ಹೌದು ನಿಮ್ಮ HSRP ನಂಬರ್ ಪ್ಲೇಟ್ ಇಲ್ಲ ಅಂತ ಅಥವಾ ಯಾವುದೇ ತಪಾಸಣೆಗಾಗಿ ನಿಮ್ಮನ್ನ ಟ್ರಾಫಿಕ್ ಪೊಲೀಸರು ಹಿಡಿದುಕೊಂಡಿದ್ದಾರೆ ಎಂಬುದಾಗಿ ಭಾವಿಸಿ ಆ ಸಂದರ್ಭದಲ್ಲಿ ನಿಮ್ಮ ಗಾಡಿಯನ್ನು ಚೆಕ್ ಮಾಡುವಾಗ ನಿಮ್ಮ ಹಾರ್ನ್ ಕರ್ಕಶವಾಗಿ ಶಬ್ದ ಮಾಡ್ತಾಯಿದ್ರೆ ಅದರ ಮೇಲೆ ಹೆಚ್ಚುವರಿ ಫೈನ್ ವಿಧಿಸಲಾಗುತ್ತದೆ ಅನ್ನೋದುನ್ನ ತಿಳಿದುಕೊಳ್ಳಿ. ಯಾವತ್ತೂ ಕೂಡ ವಾಹನದಲ್ಲಿ ಮಾಡಿಫಿಕೇಶನ್ ಮಾಡೋದಕ್ಕೆ ಹೋಗೋದು ಸರಿಯಲ್ಲ ಇದು ಭಾರತದ ವಾಹನ ನಿಯಮಗಳ ಉಲ್ಲಂಘನೆ ಮಾಡುವಂತಹ ಕೆಲಸವಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಒಂದು ವೇಳೆ ಈ ರೀತಿ ಇರೋದನ್ನ ಪೊಲೀಸರು ಕಂಡುಹಿಡಿದರೆ ಹೆಚ್ಚುವರಿ ಫೈನ್ ಕಟ್ಟೋದಕ್ಕೆ ರೆಡಿಯಾಗಿರಿ.

advertisement

Leave A Reply

Your email address will not be published.