Karnataka Times
Trending Stories, Viral News, Gossips & Everything in Kannada

Free Bus Pass: ಉಚಿತ ಬಸ್ ಪಾಸ್ ಬೇಕಿದ್ದ ಹಿರಿಯ ನಾಗರಿಕರಿಗೆ ಅತ್ಯಂತ ಸಂತೋಷದ ವಿಷಯ ತಿಳಿಸಿದ ರಾಜ್ಯ ಸರ್ಕಾರ

advertisement

ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಯನ್ನು ಜಾರಿಗೆ ತಂದಾಗಿನಿಂದ ಮಹಿಳೆಯರು ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಮಾಣ ಅಧಿಕವಾಗುತ್ತಿದೆ. ಅದರಲ್ಲೂ ಉಚಿತ ಬಸ್ ಆದ ಕಾರಣಕ್ಕೆ ಅನೇಕ ಮಹಿಳೆಯರಿಗೆ ದಿನ ನಿತ್ಯ ಓಡಾಟಕ್ಕೆ ಶಕ್ತಿ ಯೋಜನೆ ದೊಡ್ಡ ಮಟ್ಟದಲ್ಲಿ ಸಹಕಾರಿ ಆಗಿದೆ ಎಂದು ಹೇಳಬಹುದು. ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಪಯಣಕ್ಕೆ ಅವಕಾಶ ನೀಡಬೇಕು ಎಂದು ಅನೇಕ ಬೇಡಿಕೆ ಬಂದಿದ್ದು ರಾಜ್ಯದ ಹಿರಿಯ ನಾಗರಿಕರಿಗಡ ಇದೀಗ ಶುಭ ಸುದ್ದಿಯೊಂದು ಸಿಗುತ್ತಿದೆ.

Free Bus Pass ಗೆ ಅರ್ಜಿ ಆಹ್ವಾನ:

ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ (Free Bus Pass) ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಪ್ರತೀ ವರ್ಷ ಕೂಡ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದ್ದು, ಈ ಬಾರಿ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈ ಅರ್ಜಿ ಹೇಗೆ ಸಲ್ಲಿಕೆ ಮಾಡಬೇಕು, ಯಾವೆಲ್ಲ ವಿಧಾನ ಕ್ರಮ ಇದೆ ಇನ್ನು ಅನೇಕ ವಿವರವನ್ನು ನಾವಿಂದು ನಿಮಗೆ ಪೂರ್ತಿಯಾಗಿ ನೀಡಲಿದ್ದೇವೆ.

ಮೀಸಲಾತಿ ಇದೆ:

 

Image Source: ET Auto

 

advertisement

ಎಲ್ಲ ಬಹುತೇಕ ಬಸ್ ನಲ್ಲಿ ಮಹಿಳೆಯರಿಗೆ ಮೀಸಲಾತಿ ಇರುವಂತೆ ಹಿರಿಯ ನಾಗರಿಕರಿಗೂ 25% ನಷ್ಟು ಮೀಸಲಾತಿ ಇದ್ದೇ ಇರುತ್ತದೆ. ಹಾಗಾಗಿ ನೀವು ಹಿರಿಯ ನಾಗರಿಕರ ಉಚಿತ ಬಸ್ ನ ಒಂದು ಕಾರ್ಡ್ ಮಾಡಿಸಿದರೆ ಓಲೋ, ಕೆಎಸ್ ಆರ್ಟಿಸಿ (KSRTC) ಮತ್ತು ಬಿಎಂಟಿಸಿ (BMTC) ನಲ್ಲಿ ಪ್ರಯಾಣ ಮಾಡಬಹುದು. ಕೆಲವು ಬಸ್ ಉಚಿತ ಪ್ರಯಾಣ ಸಿಕ್ಕರೆ ಇನ್ನು ಕೆಲವು ಬಸ್ ನಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಈ ದಾಖಲೆಗಳು ಅಗತ್ಯ:

  • ಭಾರತದ ವಾಸ್ತವ್ಯ ಪುರಾವೆ ಇರಬೇಕು.
  • ಆಧಾರ್ ಕಾರ್ಡ್ ಪ್ರತಿ.
  • ವಯಸ್ಸಿನ ದೃಢೀಕರಣ ಪತ್ರ.
  • ಫೋಟೋ ಇರಬೇಕು.
  • ಮೊಬೈಲ್ ಸಂಖ್ಯೆ ಅಗತ್ಯವಾಗಿದೆ.

ಅರ್ಜಿ ಎಲ್ಲಿ ಸಲ್ಲಿಸುವುದು?

ಹಿರಿಯ ನಾಗರಿಕರಿಗೆ ಮಾತ್ರ ಈ ವ್ಯವಸ್ಥೆ ಇರಲಿದ್ದು ಅರ್ಹರು ಅಗತ್ಯ ದಾಖಲೆಗಳ ಸಮೇತ ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One) ಮತ್ತು ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೀಗೆ ಸಲ್ಲಿಕೆ ಮಾಡಿದ್ದ ಅರ್ಜಿ ಆನ್ಲೈನ್ ಮೂಲಕ ಸಂಬಂಧ ಪಟ್ಟ ಇಲಾಖೆಯ ಅಧೀನಕ್ಕೆ ಬರಲಿದ್ದು ಬಳಿಕ ಪರಿಶೀಲನೆ ಆಗಿ ಅನಂತರ ಬಸ್ ಪಾಸ್ ನೀಡಲಾಗುತ್ತದೆ. ವಿಮಾನ , ರೈಲ್ವೆ, ಬಸ್ ಪಾಸ್ ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಇದೆ. ಅಷ್ಟು ಮಾತ್ರವಲ್ಲದೇ ಆದಾಯ ತೆರಿಗೆಯಲ್ಲೂ ವಿನಾಯಿತಿ ಇದ್ದು ಎಲ್ಲ ಸೌಲಭ್ಯ ಬಳಸಿಕೊಳ್ಳುವ ಜಾಣ್ಮೆ ಇರಬೇಕಾಗಿದೆ.

advertisement

Leave A Reply

Your email address will not be published.